ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Bhadra Dam: ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಇಳಿಕೆ: 166.5 ಅಡಿ ದಾಟಿದ ಭದ್ರಾ ಡ್ಯಾಂ, 4118 ಕ್ಯೂಸೆಕ್ ಗೆ ಕುಸಿತ

On: August 9, 2023 3:23 AM
Follow Us:
Bhadra Dam
---Advertisement---

SUDDIKSHANA KANNADA NEWS/ DAVANAGERE/ DATE:09-08-2023

ದಾವಣಗೆರೆ: ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ದಿನ ಕಳೆದಂತೆ ಕಡಿಮೆಯಾಗಿದ್ದು, ಭದ್ರಾ ಡ್ಯಾಂ (Bhadra Dam)ಗೆ ಬರುತ್ತಿರುವ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಭದ್ರಾ ಡ್ಯಾಂ (Bhadra Dam)ನ ಇಂದಿನ ನೀರಿನ ಮಟ್ಟ 166.5ಕ್ಕೇರಿದೆ. ಒಳಹರಿವು ಎರಡು ಸಾವಿರ ಕ್ಯೂಸೆಕ್ ಕಡಿಮೆಯಾಗಿದೆ. ಮಂಗಳವಾರ 6027 ಕ್ಯೂಸೆಕ್ ಇದ್ದ ಒಳಹರಿವು ಇಂದು 4118 ಕ್ಯೂಸೆಕ್ ಗೆ ಇಳಿದಿದೆ.

ಈ ಸುದ್ದಿಯನ್ನೂ ಓದಿ: 

Police: ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅರುಣ್ ವರ್ಗಾವಣೆ: ಈ ವಿಚಾರಗಳಿಗೆ ಆಯ್ತು ಟ್ರಾನ್ಸಫರ್…!

ಭದ್ರಾ ಡ್ಯಾಂ (Bhadra Dam) ತುಂಬಲು ಇನ್ನು 19.5 ಅಡಿ ನೀರು ಬೇಕು. ಮಳೆ ತಗ್ಗಿದ ಕಾರಣಕ್ಕೆ ಜಲಾಶಯಕ್ಕೆ ಬರುತ್ತಿರುವ ಒಳಹರಿವು ಕಡಿಮೆಯಾಗಿದೆ. ಕಳೆದ ವರ್ಷ ಇದೇ ದಿನ 183.8 ಅಡಿ ನೀರು ಇತ್ತು. ಆದ್ರೆ, ಈ ವರ್ಷ ಇನ್ನು ಡ್ಯಾಂ ತುಂಬಲು ಬೇಕಿರುವುದು ಕೇವಲ 19.5 ಅಡಿ ಮಾತ್ರ. ಇನ್ನು ಹೆಚ್ಚು ಮಳೆಯಾದರೆ ಮಾತ್ರ ಜಲಾಶಯ ತುಂಬಲು ಸಾಧ್ಯ. ಕೇವಲ ನಾಲ್ಕು ಸಾವಿರ ಕ್ಯೂಸೆಕ್ ಒಳಹರಿವಿದ್ದರೆ ಜಲಾಶಯದ ನೀರಿನ ಮಟ್ಟ ಏರುವುದು ಕಡಿಮೆ ಆಗುತ್ತದೆ.

166 ಅಡಿ ದಾಟುತ್ತೆ ಎಂದುಕೊಂಡಿದ್ದ ರೈತರಿಗೆ ಸಂತಸ ತಂದಿದೆ. ಬುಧವಾರ ಬೆಳಿಗ್ಗೆ ಆರು ಗಂಟೆಯ ಹೊತ್ತಿಗೆ ಜಲಾಶಯ ನೀರಿನ ಮಟ್ಟ 166.5 ಅಡಿ ಆಗಿದ್ದು, ಜಿಲ್ಲಾಡಳಿತವು ಸಹ 163 ಅಡಿ ದಾಟಿದ ಬಳಿಕ ಭದ್ರಾ ನಾಲೆಗಳಿಗೆ ನೀರು ಹರಿಸಲಾಗುವುದು ಎಂದು ಹೇಳಿತ್ತು. ಈಗ ನೀರು ಹರಿಸಲು ದಿನಗಣನೆ ಶುರುವಾಗಿದೆ.

ಇನ್ನೆರಡು ತಿಂಗಳು ಮಳೆ ಇದ್ದು, ಡ್ಯಾಂ ಭರ್ತಿಯಾಗುವ ವಿಶ್ವಾಸದಲ್ಲಿ ಭದ್ರಾ ಡ್ಯಾಂ (Bhadra Dam) ಅಥಾರಿಟಿ ಅಧಿಕಾರಿಗಳು ಇದ್ದಾರೆ. ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣವೂ ಕೊಂಚ ಕಡಿಮೆಯಾದರೂ, ನೀರು ಹರಿಸಲು ಭದ್ರಾ ಡ್ಯಾಂ ಅಥಾರಿಟಿ ಅಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದು,ಕಾಡಾ ಸಭೆ ಬಳಿಕ ನೀರು ಹರಿಯಲಿದೆ.

ಜಲಾಶಯಕ್ಕೆ 4118 ಕ್ಯೂಸೆಕ್ ಹರಿದು ಬರುತ್ತಿದ್ದು, ನಿನ್ನೆಗೆ ಹೋಲಿಸಿದರೆ ಇಂದು ಸ್ವಲ್ಪ ಪ್ರಮಾಣದಲ್ಲಿ ನೀರು ಕಡಿಮೆಯಾಗಿದೆ. ಕಳೆದ ವರ್ಷ ಇದೇ ದಿನ ಭದ್ರಾ ಡ್ಯಾಂ ನೀರಿನ ಮಟ್ಟ 183.8 ಅಡಿ ಇತ್ತು.

 

ಭದ್ರಾ ಡ್ಯಾಂ ನೀರಿನ ಮಟ್ಟ:

 

ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ

ದಿನಾಂಕ:09 -08 -2023

ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 166.5 ಅಡಿ

ಎಂಎಸ್ ಎಲ್ : 2138.41 Ft

ಕೆಪಾಸಿಟಿ: 49.159 Tmc

ಒಳಹರಿವು: 4118 ಕ್ಯೂಸೆಕ್

ಒಟ್ಟು ಹೊರಹರಿವು: 194 ಕ್ಯೂಸೆಕ್

ಕಳೆದ ವರ್ಷ ಇದೇ ದಿನ: 183.8 ಅಡಿ

ಕೆಪಾಸಿಟಿ: 68.624 Tmc

ಆ. 10ರೊಳಗೆ ನಾಲೆಯಲ್ಲಿ ನೀರು ಹರಿಸಿ:

ಆಗಸ್ಟ್ 10ರೊಳಗೆ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನಾಲೆಯಲ್ಲಿ ನೀರು ಹರಿಸಬೇಕು. ಕಾಡಾ ಅಥವಾ ನೀರಾವರಿ ಇಲಾಖೆಯ ಅಧಿಕಾರಿಗಳು ದಿನಾಂಕ ನಿಗದಿಪಡಿಸಿ ತಿಳಿಸಬೇಕು. ಭದ್ರಾ ಡ್ಯಾಂನಿಂದ ನೀರು ಹರಿಸಲಾಗುತ್ತಿದೆ ಎಂದುಕೊಂಡು
ರೈತರು ಇದ್ದಾರೆ. ಭದ್ರಾ ಡ್ಯಾಂ ಸಹ 166 ಅಡಿ ದಾಟಿದ್ದು, ಆದಷ್ಟು ಬೇಗ ನೀರು ಹರಿಸಬೇಕು ಎಂದು ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಆಗ್ರಹಿಸಿದ್ದಾರೆ.

Bhadra Dam, Bhadra Dam News, Bhadra Dam Water Level, Bhadra Dam InFlow, Bhadra Dam OutFlow, Bhadra Dam Today Water Level

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment