SUDDIKSHANA KANNADA NEWS/ DAVANAGERE/ DATE:08-08-2023
ದಾವಣಗೆರೆ: ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಸಾಧಾರಣವಾಗಿದೆ. ಭದ್ರಾ ಡ್ಯಾಂಗೆ ಬರುತ್ತಿರುವ ಒಳಹರಿವಿನ ಪ್ರಮಾಣವೂ ಸ್ವಲ್ಪ ಜಾಸ್ತಿಯಾಗಿದೆ. ಭದ್ರಾ ಡ್ಯಾಂ (Bhadra Dam) ನ ಇಂದಿನ ನೀರಿನ ಮಟ್ಟ 166.1ಕ್ಕೇರಿದೆ. ಒಳಹರಿವು 6027 ಕ್ಯೂಸೆಕ್ ಇದೆ.
ಕಳೆದ ವರ್ಷ ಇದೇ ದಿನ 183.8 ಅಡಿ ನೀರು ಇತ್ತು. ಆದ್ರೆ, ಈ ವರ್ಷ ಇನ್ನು ಡ್ಯಾಂ ತುಂಬಲು ಬೇಕಿರುವುದು ಕೇವಲ 19.9 ಅಡಿ ಮಾತ್ರ. ಕಳೆದ ನಾಲ್ಕೈದು ದಿನಗಳಿಂದ ಮಳೆ ಸಾಧಾರಣವಾಗಿ ಸುರಿದಿದೆ. ಕಳೆದ ಕೆಲ ದಿನಗಳಿಂದ ಡ್ಯಾಂಗೆ ಹರಿದು ಬರುತ್ತಿರುವ ಪ್ರಮಾಣ ಸ್ಥಿರತೆ ಕಾಯ್ದುಕೊಂಡಿತ್ತು.
ಈ ಸುದ್ದಿಯನ್ನೂ ಓದಿ:
Police: ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅರುಣ್ ವರ್ಗಾವಣೆ: ಈ ವಿಚಾರಗಳಿಗೆ ಆಯ್ತು ಟ್ರಾನ್ಸಫರ್…!
166 ಅಡಿ ದಾಟುತ್ತೆ ಎಂದುಕೊಂಡಿದ್ದ ರೈತರಿಗೆ ಖುಷಿ ಕೊಟ್ಟಿದೆ. ಮಂಗಳವಾರ ಬೆಳಿಗ್ಗೆ ಆರು ಗಂಟೆಯ ಹೊತ್ತಿಗೆ ಜಲಾಶಯ ನೀರಿನ ಮಟ್ಟ 166.1 ಅಡಿ ಆಗಿದ್ದು, ಜಿಲ್ಲಾಡಳಿತವು ಸಹ 163 ಅಡಿ ದಾಟಿದ ಬಳಿಕ ಭದ್ರಾ ನಾಲೆಗಳಿಗೆ ನೀರು ಹರಿಸಲಾಗುವುದು ಎಂದು ಹೇಳಿತ್ತು. ಈಗ ನೀರು ಹರಿಸಲು ದಿನಗಣನೆ ಶುರುವಾಗಿದೆ. ಇನ್ನು ವಾರದೊಳಗೆ ನಾಲೆಗಳಿಗೆ ನೀರು ಹರಿಸುವ ಸಾಧ್ಯತೆ ಇದೆ.
ಇನ್ನೆರಡು ತಿಂಗಳು ಮಳೆ ಇದ್ದು, ಡ್ಯಾಂ ಭರ್ತಿಯಾಗುವ ವಿಶ್ವಾಸದಲ್ಲಿ ಭದ್ರಾ ಡ್ಯಾಂ (Bhadra Dam) ಅಥಾರಿಟಿ ಅಧಿಕಾರಿಗಳು ಇದ್ದಾರೆ. ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣವೂ ಕೊಂಚ ಕಡಿಮೆಯಾದರೂ, ನೀರು ಹರಿಸಲು ಭದ್ರಾ ಡ್ಯಾಂ ಅಥಾರಿಟಿ ಅಧಿಕಾರಿಗಳು ಸಿದ್ದತೆ ಮಾಡಿಕೊಂಡಿದ್ದು,ಕಾಡಾ ಸಭೆ ಬಳಿಕ ನೀರು ಹರಿಯಲಿದೆ.
ಜಲಾಶಯಕ್ಕೆ 6027 ಕ್ಯೂಸೆಕ್ ಹರಿದು ಬರುತ್ತಿದ್ದು, ನಿನ್ನೆಗೆ ಹೋಲಿಸಿದರೆ ಇಂದು ಸ್ವಲ್ಪ ಪ್ರಮಾಣದಲ್ಲಿ ನೀರು ಕಡಿಮೆಯಾಗಿದೆ. ಕಳೆದ ವರ್ಷ ಇದೇ ದಿನ ಭದ್ರಾ ಡ್ಯಾಂ ನೀರಿನ ಮಟ್ಟ 183.8 ಅಡಿ ಇತ್ತು.
ಭದ್ರಾ ಡ್ಯಾಂ (Bhadra Dam) ನೀರಿನ ಮಟ್ಟ:
ಭದ್ರಾ ಡ್ಯಾಂ (Bhadra Dam) ನೀರಿನ ಒಟ್ಟು ಸಂಗ್ರಹ: 186 ಅಡಿ
ದಿನಾಂಕ:08- 08 -2023
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 166.1 ಅಡಿ
ಎಂಎಸ್ ಎಲ್ : 2138.08 Ft
ಕೆಪಾಸಿಟಿ: 48.280 Tmc
ಒಳಹರಿವು: 6027 ಕ್ಯೂಸೆಕ್
ಒಟ್ಟು ಹೊರಹರಿವು: 194 ಕ್ಯೂಸೆಕ್
ಕಳೆದ ವರ್ಷ ಇದೇ ದಿನ: 183.8 ಅಡಿ
ಕೆಪಾಸಿಟಿ: 68.6240 Tmc
ಆ. 10ಕ್ಕೆ ಕಾಲುವೆಗೆ ನೀರು:
ಭದ್ರಾ ಜಲಾಶಯದಿಂದ ಮುಂಗಾರು ಹಂಗಾಮಿನ ಭತ್ತದ ಬೆಳೆಗೆ ನೀರು ಬಿಡಲು ಕ್ರಮ ಕೈಗೊಳ್ಳಲಿದ್ದು ಸರ್ಕಾರ ಆಗಸ್ಟ್ 10 ರಿಂದ ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲು ಆದೇಶ ಮಾಡುವ ಸಾಧ್ಯತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದರು.