ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Bhadra Dam:ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕುಂಠಿತ: ಭದ್ರಾ ಡ್ಯಾಂ ನೀರಿನ ಮಟ್ಟ 162.8 ಅಡಿ, ಒಳಹರಿವು 5756 ಕ್ಯೂಸೆಕ್

On: August 1, 2023 3:47 AM
Follow Us:
Bhadra Dam Today Water Level
---Advertisement---

SUDDIKSHANA KANNADA NEWS/ DAVANAGERE/ DATE:01-08-2023

ದಾವಣಗೆರೆ: ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಭಾರೀ ಪ್ರಮಾಣದಲ್ಲಿ ಕುಂಠಿತವಾಗಿದ್ದು, ಭದ್ರಾ ಡ್ಯಾಂ (Bhadra Dam)ಗೆ ಬರುತ್ತಿರುವ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಭದ್ರಾ ಡ್ಯಾಂನ ಇಂದಿನ ನೀರಿನ ಮಟ್ಟ 162.8ರಷ್ಟಿದೆ.

ಕಳೆದ ವರ್ಷ ಇದೇ ದಿನ 184.2 ಅಡಿ ನೀರು ಇತ್ತು. ಆದ್ರೆ, ಈ ವರ್ಷ ಇನ್ನು ಭದ್ರಾ ಡ್ಯಾಂ (Bhadra Dam) ತುಂಬಲು 23.2 ಅಡಿ ನೀರು ಬರಬೇಕಿದೆ. ಕಳೆದ ನಾಲ್ಕೈದು ದಿನಗಳಿಂದ ಮಳೆ ತುಂಬಾನೇ ಕಡಿಮೆಯಾಗಿದ್ದು, ದಿನೇ ದಿನೇ ಒಳಹರಿವಿನ ಪ್ರಮಾಣ ಕಡಿಮೆಯಾಗುತ್ತಿದೆ.

ಈ ಸುದ್ದಿಯನ್ನೂ ಓದಿ:Mysore Dasara: ಮೈಸೂರು ದಸರಾ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್: ನಾಡಹಬ್ಬದ ಸ್ಪೆಷಾಲಿಟಿಗಳು ಏನೇನಲ್ಲಾ ಇರಲಿದೆ ಈ ಬಾರಿ…?

163 ಅಡಿ ದಾಟುತ್ತೆ ಎಂದುಕೊಂಡಿದ್ದ ರೈತರಿಗೆ ನಿರಾಸೆ ಮೂಡಿಸಿದೆ. ಆದ್ರೆ, ಬುಧವಾರದ ಹೊತ್ತಿಗೆ ಜಲಾಶಯ 163 ಅಡಿ ದಾಟಲಿದೆ. ಜಿಲ್ಲಾಡಳಿತವು ಸಹ 163 ಅಡಿ ದಾಟಿದ ಬಳಿಕ ಭದ್ರಾ ನಾಲೆಗಳಿಗೆ ನೀರು ಹರಿಸಲಾಗುವುದು ಎಂದು ಹೇಳಿತ್ತು. ಜಲಾಶಯಕ್ಕೆ ಒಳಹರಿವು 5756 ಕ್ಯೂಸೆಕ್ ಇದ್ದು, ಸಂಜೆಯ ಹೊತ್ತಿಗೆ 163 ಅಡಿ ಆಗಲಿದೆ.

ಮಳೆ ಕುಂಠಿತವಾಗಿದ್ದು, ಇನ್ನೆರಡು ತಿಂಗಳು ಮಳೆ ಇದ್ದು, ಡ್ಯಾಂ ಭರ್ತಿಯಾಗುವ ವಿಶ್ವಾಸದಲ್ಲಿ ಭದ್ರಾ ಡ್ಯಾಂ ಅಥಾರಿಟಿ ಅಧಿಕಾರಿಗಳು ಇದ್ದಾರೆ. ಮಳೆ ಬಿಡುವು ಕೊಟ್ಟ ಕಾರಣ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣವೂ ಕಡಿಮೆಯಾಗಿದೆ.

ಜಲಾಶಯಕ್ಕೆ 5756 ಕ್ಯೂಸೆಕ್ ಹರಿದು ಬರುತ್ತಿದ್ದು, ನಿನ್ನೆಗೆ ಹೋಲಿಸಿದರೆ ಇಂದು ಸುಮಾರು ಎರಡೂವರೆ ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುವುದು ಕಡಿಮೆಯಾಗಿದೆ. ಕಳೆದ ವರ್ಷ ಇದೇ ದಿನ ಭದ್ರಾ ಡ್ಯಾಂ ನೀರಿನ ಮಟ್ಟ
184.2 ಅಡಿ ಇತ್ತು.

ಭದ್ರಾ ಡ್ಯಾಂ (Bhadra Dam) ನೀರಿನ ಮಟ್ಟ:

ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ

ದಿನಾಂಕ:01- 08 -2023

ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 162.8 ಅಡಿ

ಎಂಎಸ್ ಎಲ್ : 2134.55 Ft

ಕೆಪಾಸಿಟಿ: 45.441= 41.261 Tmc

ಒಳಹರಿವು: 5756 ಕ್ಯೂಸೆಕ್

ಒಟ್ಟು ಹೊರಹರಿವು: 189 ಕ್ಯೂಸೆಕ್

ಕಳೆದ ವರ್ಷ ಇದೇ ದಿನ: 184.2 ಅಡಿ

ಕೆಪಾಸಿಟಿ: 69.320 Tmc

Bhadra Dam, Bhadra Dam Water Level, Bhadra Dam Today, Bhadra Dam Inflow, 

Bhadra Dam OutFlow, Bhadra Dam News

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment