SUDDIKSHANA KANNADA NEWS/ DAVANAGERE/ DATE-23-06-2025
ದಾವಣಗೆರೆ: ಭದ್ರಾ ಡ್ಯಾಂ(Bhadra Dam)ಗೆ ನೀರು ಯಥಾಸ್ಥಿತಿಯಲ್ಲಿ ಹರಿದು ಬರುತ್ತಿದೆ. ಸಾಧಾರಣ ಮಳೆಯಾಗುತ್ತಿದ್ದು, ಜಲಾಶಯಕ್ಕೆ 9994 ಕ್ಯೂಸೆಕ್ ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟ 152.6 ಅಡಿಗೆ ಏರಿಕೆ ಆಗಿದೆ.
ಜಲಾಶಯದಿಂದ 1279 ಕ್ಯೂಸೆಕ್ ಹೊರ ಬಿಡಲಾಗುತ್ತಿದ್ದು, ಇತರೆ 1200 ಕ್ಯೂಸೆಕ್ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮತ್ತು ಭದ್ರಾ ಜಲಾನಯನ ಪ್ರದೇಶದಲ್ಲಿ ಸಾಧಾರಣ ಮಳೆ ಆಗುತ್ತಿದೆ. ಕಳೆದೆರಡು ದಿನಗಳಿಂದ ಮಳೆ ಕುಂಠಿತಗೊಂಡಿದ್ದು, ಡ್ಯಾಂಗೆ ಬರುತ್ತಿರುವ ಒಳಹರಿವು ಯಥಾಸ್ಥಿತಿಯಲ್ಲಿದೆ.
Read Also This Story: “ಎಂ. ಪಿ. ರೇಣುಕಾಚಾರ್ಯ, ನನ್ನನ್ನು ಬಿಜೆಪಿಯಿಂದ ತೆಗೆದು ಹಾಕಿ”: ಬಿ. ಪಿ. ಹರೀಶ್ ಈ ನಡೆ ಹಿಂದಿದೆ ಬಿಗ್ ಪ್ಲ್ಯಾನ್!
ಭಾನುವಾರ ಜಲಾಶಯಕ್ಕೆ 9877 ಕ್ಯೂಸೆಕ್ ಒಳಹರಿವಿದ್ದು, 1278 ಹೊರ ಹರಿವಿತ್ತು. ಇತರೆ 1200 ಕ್ಯೂಸೆಕ್ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 119.4 ಅಡಿ ಇತ್ತು. ಜಲಾಶಯದ ಇಂದಿನ ನೀರಿನ ಮಟ್ಟ 152.6 ಅಡಿಗೆ ಏರಿಕೆಯಾಗಿದ್ದು, ಈ ಬಾರಿ ಆದಷ್ಟು ಬೇಗ ಡ್ಯಾಂ ಭರ್ತಿಯಾಗಲಿದೆ ಎಂಬ ವಿಶ್ವಾಸ ರೈತರದ್ದು.
ಕಳೆದೊಂದು ವಾರದಿಂದ ಸುರಿಯುತ್ತಿದ್ದ ವರುಣ ಸ್ವಲ್ಪ ಮಟ್ಟಿಗೆ ಶಾಂತನಾಗಿದ್ದಾನೆ. ಜಲಾಶಯಕ್ಕೆ ಕಳೆದೊಂದು ವಾರದಿಂದ ಬರೋಬ್ಬರಿ 10 ಅಡಿಗೂ ಹೆಚ್ಚು ನೀರು ಹರಿದು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಜಲಾಶಯದಲ್ಲಿ ಸುಮಾರು 32 ಅಡಿಗೂ ಹೆಚ್ಚು ಸಂಗ್ರಹವಾಗಿದೆ. ಇದು ಭದ್ರಾ ಅಚ್ಚುಕಟ್ಟು ಪ್ರದೇಶ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ರೈತರ ಹಾಗೂ ಜನರ ಖುಷಿಗೆ ಕಾರಣವಾಗಿದೆ.
ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಯ ಜನರ ಮತ್ತು ರೈತರ ಜೀವನಾಡಿ ಭದ್ರಾ ಜಲಾಶಯಕ್ಕೆ ಬರುತ್ತಿದ್ದ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಭದ್ರಾ ಜಲಾಶಯಕ್ಕೆ ಬರುತ್ತಿದ್ದ ಒಳಹರಿವಿನ ಪ್ರಮಾಣ ಕಡಿಮೆಯಾಗಿದ್ದು, ಮಳೆಯೂ ಸಾಧಾರಣವಾಗಿ ಸುರಿಯುತ್ತಿದೆ. ಬುಧವಾರ 8493 ಕ್ಯೂಸೆಕ್ ಇತ್ತು. ಆದ್ರೆ, ಗುರುವಾರ ಒಳಹರಿವು ತುಂಬಾನೇ ಹೆಚ್ಚಾಗಿತ್ತು. 19027 ಕ್ಯೂಸೆಕ್ ಒಳಹರಿವಿತ್ತು. ಶುಕ್ರವಾರ ಒಳಹರಿವು 14,932 ಕ್ಯೂಸೆಕ್ ಇದ್ದರೆ ಇಂದು ಮತ್ತಷ್ಟು ಕಡಿಮೆಯಾಗಿದೆ. ಶನಿವಾರ 9760 ಕ್ಯೂಸೆಕ್ ಇತ್ತು. ಭಾನುವಾರ ಒಳಹರಿವು 9877 ಕ್ಯೂಸೆಕ್ ಇತ್ತು. ಇಂದು 9994 ಕ್ಯೂಸೆಕ್ ಇದೆ.
ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 119.4 ಅಡಿ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 33 ಅಡಿಗೂ ಹೆಚ್ಚು ನೀರು ಸಂಗ್ರಹ ಇದೆ.
ಜಲಾಶಯದ ಗರಿಷ್ಠ ನೀರಿನ ಮಟ್ಟ 186 ಅಡಿ. ಕಳೆದ ವರ್ಷವರುಣ ಅಬ್ಬರಿಸಿ ಬೊಬ್ಬಿರಿದ ಕಾರಣ ಭದ್ರಾ ಜಲಾಶಯವು ಎರಡರಿಂದ ಮೂರು ಬಾರಿ ಭರ್ತಿಯಾಗಿತ್ತು. ಬೇಸಿಗೆ ಕಾಲ ಬಂದರೂ ಜಲಾಶಯದಲ್ಲಿ ನೀರು ಸಂಗ್ರಹವಾಗಿತ್ತು. ನಿಯಮಿತವಾಗಿ ಭದ್ರಾ ಎಡದಂಡೆ, ಬಲದಂಡೆ ನಾಲೆಗಳಲ್ಲಿ ನೀರು ಹರಿಸಿದ ಪರಿಣಾಮ ಜಲಾಶಯದ ನೀರಿನ ಸಂಗ್ರಹ ಕಡಿಮೆಯಾಗಿತ್ತು. ಮತ್ತೆ ಮಳೆ ಶುರುವಾಗಿದ್ದು, ಒಳಹರಿವು ಹೆಚ್ಚಾಗುತ್ತಿದೆ.
ಭದ್ರಾ ಜಲಾಶಯದ ನೀರಿನ ಮಟ್ಟ
Date:23_06_2025
ಇಂದಿನ ನೀರಿನ ಮಟ್ಟ: 152.6 ಅಡಿ
ಒಳ ಹರಿವು: 9994 ಕ್ಯೂಸೆಕ್
ಹೊರ ಹರಿವು: 1278 ಕ್ಯೂಸೆಕ್
ಇತರೆ: 1200 ಕ್ಯೂಸೆಕ್
ಕಳೆದ ವರ್ಷ ಇದೇ ದಿನ ನೀರಿನ ಮಟ್ಟ: 119.4 ಅಡಿ
ಕೆಪಾಸಿಟಿ: 15.156 ಟಿಎಂಸಿ
ಜಲಾಶಯದ ಗರಿಷ್ಠ ಮಟ್ಟ: 186 ಅಡಿ