ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Bhadra Dam: ಭದ್ರಾ ಡ್ಯಾಂನ ಇಂದಿನ ನೀರಿನ ಮಟ್ಟ ಎಷ್ಟು..? ಬಲದಂಡೆ ನಾಲೆಯಲ್ಲಿ ನೀರು ಹರಿಸುವಿಕೆಯಿಂದ ಎಷ್ಟು ಕಡಿಮೆಯಾಗಿದೆ ಗೊತ್ತಾ…?

On: September 11, 2023 4:58 AM
Follow Us:
BHADRA DAM BRP
---Advertisement---

SUDDIKSHANA KANNADA NEWS/ DAVANAGERE/ DATE:11-09-2023

ದಾವಣಗೆರೆ: ಭದ್ರಾ ಜಲಾಶಯ(Bhadra Dam)ದ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಭದ್ರಾ ಡ್ಯಾಂನಿಂದ ಎಡದಂಡೆ ನಾಲೆಯಲ್ಲಿ ನೀರು ಹರಿಸಲು ಈಗಾಗಲೇ ನಿರ್ಧರಿಸಲಾಗಿದೆ. ಬಲದಂಡೆ ನಾಲೆಯಲ್ಲಿ ನೀರು ಹರಿಸುವಿಕೆ ಮುಂದುವರಿಸಲಾಗಿದೆ.

ದಿನ ಕಳೆದಂತೆ ಭದ್ರಾ ಡ್ಯಾಂ (Bhadra Dam)ನೀರಿನ ಸಂಗ್ರಹ ಕುಸಿಯುತ್ತಿದ್ದು, ಮಳೆ ಬಾರದಿದ್ದರೆ ಮುಂಬರುವ ದಿನಗಳಲ್ಲಿ ಮತ್ತಷ್ಟು ಖಾಲಿಯಾಗುವ ಭೀತಿ ಎದುರಾಗಿದೆ. 161.9 ಅಡಿ ಇದೆ. 167 ಅಡಿಗೆ ಏರಿದ್ದ ನೀರಿನ ಮಟ್ಟ ಈಗ ಕುಸಿದಿದ್ದು, 5 ಅಡಿ
ನೀರು ಖಾಲಿಯಾಗಿದೆ.

ಈ ಸುದ್ದಿಯನ್ನೂ ಓದಿ: 

Davanagere: ನಾನೊಂದು ತೀರ ನೀನೊಂದು ತೀರ ಅಂದ್ರು ಅಂದು…. ಒಂದಾಗೋಣ ಬಾ ಅಂದ್ರು ಇಂದು: ಕಠೋರ ನಿರ್ಧಾರ ಬದಲಿಸುವಂತೆ ಮಾಡಿದ್ರು ಮಕ್ಕಳು, ನ್ಯಾಯಾಧೀಶರು…!

ಒಳಹರಿವು ಕೇವಲ 652 ಕ್ಯೂಸೆಕ್ ನೀರು ಬರುತ್ತಿದ್ದು, ಹೊರ ಹರಿವು 2492 ಕ್ಯೂಸೆಕ್ ಇದೆ. ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಹರಿಸಲಾಗುತಿತ್ತು. ಶಿವಮೊಗ್ಗ ತಾಲೂಕಿನ ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ಕಳೆದ ಸೆ. 6ರಂದು
ನಡೆದ ಸಭೆಯಲ್ಲಿ ಸೆ. 11 ರೊಳಗೆ ಮತ್ತೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗಿತ್ತು. ನೀರು ಹರಿಸುವಿಕೆ ಮುಂದುವರಿಸಲಾಗುತ್ತೋ ಅಥವಾ ಕಡಿತ ಮಾಡಲಾಗುತ್ತದೆಯೋ ಎಂಬ ಆತಂಕ ರೈತರಲ್ಲಿ ಕಾಡಲಾರಂಭಿಸಿದೆ.

ಮುಂದಿನ ಕೆಲ ದಿನಗಳಲ್ಲಿ ಮಳೆ ಬರುವ ನಿರೀಕ್ಷೆ ಹೊಂದಲಾಗಿತ್ತಾದರೂ ವರುಣ ಎಂಟ್ರಿ ಕೊಟ್ಟಿಲ್ಲ. ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಮಳೆ ಸುರಿಯುತ್ತಿಲ್ಲ. ಹವಾಮಾನ ಇಲಾಖೆಯು ಇನ್ನು ಮುಂಬರುವ ದಿನಗಳಲ್ಲಿ ಮಳೆ
ಬರುವ ಸಾಧ್ಯತೆ ಇದೆ ಹೇಳಿದೆ. ಆದ್ರೆ, ರೈತರು ನಿರೀಕ್ಷಿಸಿದಷ್ಟು ಧಾರಾಕಾರ ಮಳೆ ಆಗಿಲ್ಲ. ಭದ್ರಾ ಜಲಾಶಯ(Bhadra Dam)ವು ಲಕ್ಷಾಂತರ ಹೆಕ್ಟೇರ್ ಪ್ರದೇಶಗಳಿಗೆ ನೀರುಣಿಸುವ ಜೀವ ಸೆಲೆ. ದಿನೇ ದಿನೇ ಡ್ಯಾಂ ನೀರಿನ ಮಟ್ಟ ಕುಸಿಯುತ್ತಿರುವ ಕಾರಣದಿಂದ ಶಿವಮೊಗ್ಗ, ಚನ್ನಗಿರಿ ಸೇರಿದಂತೆ ಹಲವೆಡೆ ರೈತರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಡ್ಯಾಂನಲ್ಲಿನ ನೀರು ಕಡಿಮೆಯಾದಷ್ಟು ಈ ಭಾಗದ ರೈತರಲ್ಲಿ ಆತಂಕ ಹೆಚ್ಚಾಗುತ್ತಲೇ ಹೋಗುತ್ತದೆ.

ಸದ್ಯಕ್ಕೆ ನೀರು ಸಂಗ್ರಹವಾಗಿದ್ದರೂ ಬೇಸಿಗೆ ಹೊತ್ತಿಗೆ ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ. ಆಗ ಬೆಳೆಗಳಿಗೆ ನೀರು ಹರಿಸದಿದ್ದರೆ ಮತ್ತಷ್ಟು ಸಮಸ್ಯೆ ಎದುರಾಗುತ್ತದೆ. ಈ ಕಾರಣಕ್ಕೆ ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಹರಿಸಬಾರದು
ಎಂದು ಶಿವಮೊಗ್ಗದಲ್ಲಿ ಹೋರಾಟವೂ ನಡೆದಿತ್ತು. ಸೆ. 11ರವರೆಗೆ ಕಾಲಾವಕಾಶ ತೆಗೆದುಕೊಂಡಿದ್ದ ಕಾಡಾ ಸಮಿತಿ ಸಭೆಯು ಈಗ ಯಾವ ನಿರ್ಧಾರಕ್ಕೆ ಬರುತ್ತೆ ಎಂಬುದು ಕುತೂಹಲ ಕೆರಳಿಸಿದೆ.

BHADRA DAM

ರೈತ ಮುಖಂಡರು ನೀಡಿದ ಸಲಹೆಯಂತೆ ಎಡದಂಡೆ ನಾಲೆಯಲ್ಲಿ ನೀರು ಹರಿಸುವುದನ್ನು ನಿಲ್ಲಿಸಲು ಸೂಚನೆ ನೀಡಲಾಗಿತ್ತು. ಅಲ್ಲದೇ ಶಿವಮೊಗ್ಗ ನಗರ ಹಾಗೂ ಸುತ್ತಮುತ್ತಲ ಪ್ರದೇಶದ ನಿವಾಸಿಗಳಿಗೆ ಕುಡಿಯುವ ನೀರನ್ನು ಒದಗಿಸಲು
ಗಮನಹರಿಸಲು ಸಹ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ವಾಡಿಕೆ ಪ್ರಮಾಣದ ಮಳೆ ಬಾರದಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದಲ್ಲಿ ಗಣನೀಯ ಪ್ರಮಾಣದ ನೀರಿನ ಕೊರತೆ ಇದೆ. ಅಚ್ಚುಕಟ್ಟು
ಪ್ರದೇಶದ ವ್ಯಾಪ್ತಿಯಲ್ಲಿ ಬೆಳೆದಿರುವ ಭತ್ತ ಮತ್ತು ತೋಟಗಾರಿಕೆ ಬೆಳೆಗಳಿಗೆ ನಿರಂತರ ನೀರು ಹರಿಸಲು  ಅನುಕೂಲವಾಗುವಂತೆ ಸೆಪ್ಟಂಬರ್ 11ರೊಳಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಾಡಾ ಅಧ್ಯಕ್ಷ ಮಧು ಎಸ್.ಬಂಗಾರಪ್ಪ ಭರವಸೆ ನೀಡಿದ್ದರು.

BHADRA DAM
BHADRA DAM

ಭದ್ರಾ ಡ್ಯಾಂ (Bhadra Dam) ಇಂದಿನ ನೀರಿನ 161.9 ಅಡಿ ಇದ್ದು, ಒಳಹರಿವು ಕೇವಲ 652 ಕ್ಯೂಸೆಕ್ ಇದ್ದು, ಹೊರ ಹರಿವು 2492 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ದಿನ ಭದ್ರಾ ಜಲಾಶಯದ ನೀರಿನ ಮಟ್ಟ 184.1 ಅಡಿ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 22 ಅಡಿಗೂ ಹೆಚ್ಚು ನೀರು ಕಡಿಮೆ ಸಂಗ್ರಹ ಇದೆ.

ಭದ್ರಾ ಡ್ಯಾಂ (Bhadra Dam)ಇಂದಿನ ನೀರಿನ ಮಟ್ಟ:

 

  • Date:11.09.2023

  • ಭದ್ರಾ ಜಲಾಶಯ(Bhadra Dam)ದ ಇಂದಿನ ನೀರಿನ ಮಟ್ಟ: 161.9 ಅಡಿ

  • MSL:2133.75 ft

  • Capacity:44.561 tmc

  • Inflow:652 cusecs

  • Total outflow:2492 cusecs

  • RBC:2300 cusecs

  • LBC: 0 Cusecs

  • River sluice: 100 cusecs

  • Evaporation:92 cusecs

  • LastyearLevel:184.10 ಅಡಿ

  • Capacity:70.098 tmc

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment