ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Bhadra Dam: ಭದ್ರಾ ಡ್ಯಾಂ ನೀರು ಹರಿಸುವಿಕೆಯಿಂದ ನೀರಿನ ಮಟ್ಟ ಎಷ್ಟು ಕಡಿಮೆಯಾಗಿದೆ ಗೊತ್ತಾ…? ಒಳಹರಿವು, ಹೊರ ಹರಿವು ಎಷ್ಟಿದೆ…?

On: August 16, 2023 6:50 AM
Follow Us:
Bhadra dam Today Water Level
---Advertisement---

SUDDIKSHANA KANNADA NEWS/ DAVANAGERE/ DATE:16-08-2023

ದಾವಣಗೆರೆ: ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ತುಂಬಾನೇ ಕಡಿಮೆಯಾಗಿದೆ. ಭದ್ರಾ ಡ್ಯಾಂ (Bhadra Dam)ಗೆ ಬರುತ್ತಿರುವ ಒಳಹರಿವಿನ ಪ್ರಮಾಣವೂ ತಗ್ಗಿದೆ. ಆಗಸ್ಟ್ 10ರಿಂದ ಭದ್ರಾ ಎಡ ಹಾಗೂ ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಹರಿಸಲಾಗುತ್ತಿದೆ. ಹಾಗಾಗಿ, ಸಹಜವಾಗಿಯೇ ಡ್ಯಾಂ ನೀರಿನ ಮಟ್ಟ ಎಷ್ಟು ಕಡಿಮೆಯಾಗಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇರುತ್ತದೆ.

ಒಳಹರಿವು ಎಷ್ಟು ಕಡಿಮೆ…? 

ಹೌದು. ಭದ್ರಾ ಡ್ಯಾಂ(Bhadra Dam)ನ ಇಂದಿನ ನೀರಿನ ಮಟ್ಟ 166.9. ಕಳೆದ ಕೆಲ ದಿನಗಳ ಹಿಂದೆ 167 ಅಡಿ ತಲುಪಿದ್ದ ಭದ್ರಾ ಜಲಾಶಯದ ನೀರು ಇಂದು ಬೆಳಿಗ್ಗೆ ಆರು ಗಂಟೆಯ ಹೊತ್ತಿಗೆ ಸ್ವಲ್ಪ ಕಡಿಮೆಯಾಗಿದೆ. ಒಳಹರಿವು 1743 ಕ್ಯೂಸೆಕ್ ಇದ್ದರೆ, ಹೊರ ಹರಿವು 3225 ಕ್ಯೂಸೆಕ್ ನೀರಿದೆ.

ಈ ಸುದ್ದಿಯನ್ನೂ ಓದಿ: 

Bhadra Dam: ಭದ್ರಾ ಡ್ಯಾಂ ನೀರು ಹರಿಸುವಿಕೆ ಪುನರ್ ಪರಿಶೀಲಿಸುವಂತೆ ಒತ್ತಾಯವೇಕೆ..? ರೈತ ಸಂಘದ ರಾಜ್ಯಾಧ್ಯಕ್ಷ ಬಸವರಾಜಪ್ಪರು ಸಚಿವರಿಗೆ ಕೊಟ್ಟ ಮಾಹಿತಿಯೇನು..?

ಭದ್ರಾ ಬಲದಂಡೆ ನಾಲೆ 2,650 ಕ್ಯೂಸೆಕ್ ಹಾಗೂ ಎಡದಂಡೆ ನಾಲೆಯಲ್ಲಿ 390 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಇದರಿಂದಾಗಿ ಡ್ಯಾಂನಲ್ಲಿ ಸಂಗ್ರಹವಿದ್ದ ನೀರಿನ ಪ್ರಮಾಣ ಕೊಂಚ ಕಡಿಮೆಯಾಗಿದೆ. ಒಟ್ಟು 3040 ಕ್ಯೂಸೆಕ್ ಹೊರ
ಬಿಡಲಾಗುತ್ತಿದೆ. ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಆಗುತ್ತಿಲ್ಲ. ಇದರಿಂದಾಗಿ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣವೂ ತುಂಬಾನೇ ಕಡಿಮೆಯಾಗಿದೆ. ಇದೇ ರೀತಿ ಮುಂದುವರಿದರೆ ಭದ್ರಾ ಜಲಾಶಯದಿಂದ ನೀರು ಹರಿಸುವುದು ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ.

ಆಗಸ್ಟ್ ನಲ್ಲಿ ಮಳೆ ಕೈಕೊಟ್ಟರೆ…? 

ಒಟ್ಟಿನಲ್ಲಿ ಜುಲೈ ತಿಂಗಳಿನಲ್ಲಿ ಸುರಿದ ಮಳೆಯಿಂದಾಗಿ ಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು. ಆದ್ರೆ, ಆಗಸ್ಟ್ ತಿಂಗಳಿನಲ್ಲಿ ಮಳೆ ಕೈ ಕೊಟ್ಟಿದ್ದು, ರೈತರು ಮತ್ತೆ ಆತಂಕಕ್ಕೊಳಗಾಗಿದ್ದಾರೆ. ಇನ್ನು ಜಲಾಶಯದಿಂದ
ನೀರು ಹೊರ ಬಿಡುತ್ತಿರುವುದರಿಂದ ಡ್ಯಾಂನಲ್ಲಿನ ನೀರು ಕಡಿಮೆಯಾಗುತ್ತದೆ. ಮಳೆ ಬಾರದೇ ಇದ್ದಲ್ಲಿ ಹೊರಬಿಡುವ ನೀರು ನಿಲ್ಲಿಸುವ ಸಾಧ್ಯತೆಯೂ ಹೆಚ್ಚಿದೆ.

ಸದ್ಯಕ್ಕೆ ನೂರು ದಿನಗಳ ಕಾಲ ನೀರು ಹರಿಸಲಾಗುವುದು ಎಂದು ಹೇಳಲಾಗಿದೆ. ಆಗಸ್ಟ್ ತಿಂಗಳ ಕೊನೆ ಅಥವಾ ಸೆಪ್ಟಂಬರ್ ತಿಂಗಳ ಮೊದಲ ವಾರದಲ್ಲಿ ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆಯಾಗದಿದ್ದರೆ ನೀರು ಸ್ಥಗಿತಗೊಳಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ನೀರಾವರಿ ಸಲಹಾ ಸಮಿತಿ ಸಭೆ ನಡೆದ ಬಳಿಕವಷ್ಟೇ ಇದರ ಬಗ್ಗೆ ಸ್ಪಷ್ಟತೆ ಗೊತ್ತಾಗಲಿದೆ.

Dam Water Release Dvg
Dam Water Release Dvg

 

 

ಕಳೆದ ವರ್ಷ ಇದೇ ದಿನ ಭದ್ರಾ ಜಲಾಶಯ(Bhadra Dam)ದ ನೀರಿನ ಮಟ್ಟ 183.4 ಅಡಿ ಇತ್ತು.

  ಭದ್ರಾ ಜಲಾಶಯ(Bhadra Dam)ದ ನೀರಿನ ಮಟ್ಟ:

 

  • Date:16.08.2023
  • ಇಂದಿನ ನೀರಿನ ಮಟ್ಟ: 166’9″ ಅಡಿ
  • ಎಂಎಸ್ ಎಲ್ :2138.75 ಫೀಟ್
  • ಕೆಪಾಸಿಟಿ: 49.498 ಟಿಎಂಸಿ
  • ಒಳಹರಿವು :1743 ಕ್ಯೂಸೆಕ್
  • ಹೊರ ಹರಿವು: 3225 ಕ್ಯೂಸೆಕ್
  • ಭದ್ರಾ ಬಲದಂಡೆ ನಾಲೆ: 2650 ಕ್ಯೂಸೆಕ್
  • ಭದ್ರಾ ಎಡದಂಡೆ ನಾಲೆ: 380 ಕ್ಯೂಸೆಕ್
  • ಕಳೆದ ವರ್ಷ ಇದೇ ದಿನದ ನೀರಿನ ಮಟ್ಟ: 183’4½ ಅಡಿ
  • ಕೆಪಾಸಿಟಿ: 68.265 ಟಿಎಂಸಿ

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment