SUDDIKSHANA KANNADA NEWS/ DAVANAGERE/ DATE:10-08-2023
ಭದಾವಣಗೆರೆ: ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕುಂಠಿತಗೊಂಡಿದೆ. ಭದ್ರಾ ಡ್ಯಾಂ (Bhadra Dam) ನೀರಿನ ಮಟ್ಟ 166.9 ಅಡಿ ತಲುಪಿದೆ. ಭದ್ರಾ ಡ್ಯಾಂಗೆ ಬರುತ್ತಿರುವ ಒಳಹರಿವಿನ ಪ್ರಮಾಣವೂ ಇಳಿಕೆಯಾಗಿದೆ. ಇಂದು ಬೆಳಿಗ್ಗೆ ಆರು ಗಂಟೆಯ ಹೊತ್ತಿಗೆ ಡ್ಯಾಂ ನೀರಿನ ಮಟ್ಟ 166.9 ಅಡಿ ಇದೆ. ಒಳಹರಿವು 4118 ಕ್ಯೂಸೆಕ್ ಇದೆ.
ಕಳೆದ ವರ್ಷ ಇದೇ ದಿನ 181.1 ಅಡಿ ನೀರು ಇತ್ತು. ಆದ್ರೆ, ಈ ವರ್ಷ ಇನ್ನು ಡ್ಯಾಂ ತುಂಬಲು ಬೇಕಿರುವುದು ಕೇವಲ 19 ಅಡಿ ಮಾತ್ರ. ಕಳೆದ ನಾಲ್ಕೈದು ದಿನಗಳಿಂದ ಮಳೆ ಕಡಿಮೆಯಾಗಿದೆ. ನಿನ್ನೆ ಇದ್ದಷ್ಟೇ ಒಳಹರಿವು ಇಂದು ಇದೆ.
ಈ ಸುದ್ದಿಯನ್ನೂ ಓದಿ:
Komal Story: ನಟ ಕೋಮಲ್ ಕೇತುದೆಸೆ ಮತ್ತೆ ಶುರುವಾಗಿದ್ದು ಯಾವಾಗಿನಿಂದ…? ಜೈಲರ್ ಬಿಡುಗಡೆಯಿಂದ ನಮೋ ಭೂತಾತ್ಮ-2ಗೆ ಆಗಲ್ವಂತೆ ತೊಂದರೆ… ಹೇಗೆ…?
ಭದ್ರಾ ಅಚ್ಚುಕಟ್ಟುದಾರರಿಗೆ ಇಂದಿನಿಂದ ನೀರು ಹರಿಸಲಾಗುತ್ತಿದೆ. ನೀರಾವರಿ ಇಲಾಖೆಯ ಅಧಿಕಾರಿಗಳು ಈ ವಿಚಾರ ಸ್ಪಷ್ಟಪಡಿಸಿದ್ದಾರೆ. ನಾಲೆಗಳಿಗೆ ನೀರು ಹರಿಸಲು ಸಿದ್ದತೆ ಮಾಡಿಕೊಳ್ಳಲಾಗಿದ್ದು, ಸ್ವಲ್ಪ ಸಮಯದಲ್ಲಿಯೇ ನೀರು ಹರಿಯಲಿದೆ.
ಇನ್ನೆರಡು ತಿಂಗಳು ಮಳೆ ಇದ್ದು, ಡ್ಯಾಂ ಭರ್ತಿಯಾಗುವ ವಿಶ್ವಾಸದಲ್ಲಿ ಭದ್ರಾ ಡ್ಯಾಂ (Bhadra Dam)ಅಥಾರಿಟಿ ಅಧಿಕಾರಿಗಳು ಇದ್ದಾರೆ. ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣವೂ ಕೊಂಚ ಕಡಿಮೆಯಾಗಿದೆ. 195 ಕ್ಯೂಸೆಕ್ ನೀರು ಸದ್ಯಕ್ಕೆ ಹೊರಬಿಡಲಾಗುತ್ತಿದೆ.
ಭದ್ರಾ ಡ್ಯಾಂ (Bhadra Dam) ನೀರಿನ ಮಟ್ಟ
- ಭದ್ರಾ ಡ್ಯಾಂ (Bhadra Dam) ನೀರಿನ ಒಟ್ಟು ಸಂಗ್ರಹ: 186 ಅಡಿ
- ದಿನಾಂಕ:10- 08 -2023
- ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 166.9 ಅಡಿ
- ಎಂಎಸ್ ಎಲ್ : 2138.75 Ft
- ಕೆಪಾಸಿಟಿ: 48.498 Tmc
- ಒಳಹರಿವು: 4118 ಕ್ಯೂಸೆಕ್
- ಒಟ್ಟು ಹೊರಹರಿವು: 195 ಕ್ಯೂಸೆಕ್
- ಕಳೆದ ವರ್ಷ ಇದೇ ದಿನ: 181.1 ಅಡಿ
- ಕೆಪಾಸಿಟಿ: 68.676 Tmc