SUDDIKSHANA KANNADA NEWS/ DAVANAGERE/ DATE:26-07-2023
ದಾವಣಗೆರೆ: ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದು, ಆದ್ರೆ, ಮಂಗಳವಾರ ಮಳೆ ಕುಂಠಿತಗೊಂಡಿದೆ. ಭದ್ರಾ ಡ್ಯಾಂ (Bhadra Dam)ಗೆ ಒಂದೇ ದಿನ ಎರು ಅಡಿ ನೀರು ಬಂದಿದೆ. 31 ಸಾವಿರಕ್ಕೂ ಕ್ಯೂಸೆಕ್ ನೀರು ಹರಿದು ಬರುತ್ತಿದ್ದ ನೀರು ಈಗ 24,704 ಕ್ಯೂಸೆಕ್ ಗೆ ಕುಸಿದಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಕಳೆದ ಎರಡು ದಿನಗಳಿಂದ ತಗ್ಗಿದೆ. ವರುಣನ ಆರ್ಭಟಕ್ಕೆ ಹಳ್ಳ ಕೊಳ್ಳಗಳು, ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಎರಡು ದಿನಗಳ ಹಿಂದೆ 39 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ಹರಿದು ಬರುತ್ತಿತ್ತು. ನಿನ್ನೆ ಕಡಿಮೆಯಾಗಿತ್ತು. ಇಂದೂ ಸಹ ಕಡಿಮೆಯಾಗಿದೆ.

ಬುಧವಾರ ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಭದ್ರಾ ಡ್ಯಾಂ (Bhadra Dam)ನೀರಿನ ಮಟ್ಟ 155.3 ಅಡಿ ಇದೆ. ಒಳಹರಿವು 24,704 ಕ್ಯೂಸೆಕ್ ಇದ್ದು, ಹೊರ ಹರಿವು 170 ಕ್ಯೂಸೆಕ್ ಇದೆ. ಕಳೆದ ವರ್ಷ 185 ಅಡಿ ಇತ್ತು.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ ಸೇರಿದಂತೆ ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಆಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯಕ್ಕೆ ನೀರು ಹರಿಯುವುದು ಕಡಿಮೆಯಾಗಿದೆ. ಭದ್ರಾ ಡ್ಯಾಂ (Bhadra Dam) ಅಥಾರಿಟಿ ಅಧಿಕಾರಿಗಳು ಹೇಳುವ ಪ್ರಕಾರ ಈ ವರ್ಷದಲ್ಲಿ ಪ್ರಥಮ ಬಾರಿ ಇಷ್ಟೊಂದು ಪ್ರಮಾಣದ ಕ್ಯೂಸೆಕ್ ನೀರು ಹರಿದು ಬಂದಿದೆ. ಮುಂಗಾರು ಮಳೆ ಕೈ ಕೊಟ್ಟರೂ ಈಗ ಮಳೆ ಚೆನ್ನಾಗಿಯೇ ಸುರಿಯುತ್ತಿದೆ. ಇಂದೂ ಮಳೆ ಜೋರಾಗಿ ಸುರಿದರೆ ಮತ್ತಷ್ಟು ಕ್ಯೂಸೆಕ್ ಹೆಚ್ಚಾಗುವ ಸಾಧ್ಯತೆ ಇದೆ.
ಈ ಸುದ್ದಿಯನ್ನೂ ಓದಿ:
ಮದ್ರಾಸ್ ಐ ವೈರಾಣುಗೆ ಪಡಬೇಕಿಲ್ಲ ಭಯ: ಈ ಮುನ್ನೆಚ್ಚರಿಕೆ ವಹಿಸಿದರೆ ಸಾಕು
ಕಳೆದ ವರ್ಷ ಇಷ್ಟೊತ್ತಿಗೆ ಡ್ಯಾಂ ತುಂಬಲು ಕೇವಲ 1 ಅಡಿ ಮಾತ್ರ ಬೇಕಿತ್ತು. ಆದ್ರೆ, ಈ ವರ್ಷ ಇನ್ನೂ 31.7 ಅಡಿ ನೀರು ಹರಿದು ಬರಬೇಕು. ಕಳೆದ ಎರಡ್ಮೂರು ದಿನಗಳಿಂದ 12 ಅಡಿ ನೀರು ಡ್ಯಾಂಗೆ ಹರಿದು ಬಂದಿದೆ. ಮಳೆ ಉತ್ತಮವಾಗಿ ಸುರಿದರೆ ಮತ್ತಷ್ಟು ನೀರು ಅಣೆಕಟ್ಟಿಗೆ ಬರುತ್ತದೆ. ಸದ್ಯದ ಮಾಹಿತಿ ಪ್ರಕಾರ ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದಿದೆ. ಆದ್ರೆ, ಮಳೆ ಸುರಿಯುವ ಪ್ರಮಾಣ ಕ್ಷೀಣಿಸಿದೆ.
ಭದ್ರಾ ಡ್ಯಾಂ (Bhadra Dam)ನೀರಿನ ಮಟ್ಟ:
ಡ್ಯಾಂ ನೀರಿನ ಸಂಗ್ರಹ: 186 ಅಡಿ
ದಿನಾಂಕ: 25- 07 -2023
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 155.3 ಅಡಿ
ಎಂಎಸ್ ಎಲ್ : 2124.75 ft
ಕೆಪಾಸಿಟಿ: 36.533=32.353 tmc
ಒಳಹರಿವು: 24,704 ಕ್ಯೂಸೆಕ್
ಒಟ್ಟು ಹೊರಹರಿವು: 170 ಕ್ಯೂಸೆಕ್
ಕಳೆದ ವರ್ಷ ಇದೇ ದಿನ: 185 ಅಡಿ
ಕೆಪಾಸಿಟಿ: 70.279 ಟಿಎಂಸಿ
Bhadra Dam,
Bhadra Dam Water Level Today
Bhadra Dam News
Bhadra Dam Suddi
Bhadra Dam Water Level Update