ಬೆಂಗಳೂರು: ರಾಜಧಾನಿ ಬೆಂಗಳೂರಿನ ಇಂದಿರಾನಗರದಂತಹ ಜನನಿಬಿಡ ಪ್ರದೇಶದಲ್ಲಿ ಮಹಿಳೆಯೊಬ್ಬರ ಕರಳಿನಲ್ಲಿದ್ದ ಚಿನ್ನದ ಚೈನ್ ದೋಚಲು ಯತ್ನಿಸಿ, ಕುತ್ತಿಗೆ ಹಿಸುಕಿ ಕೊಲೆ ಬೆದರಿಕೆಯೊಡ್ಡಿದ ಭೀಕರ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಸಾರ್ವಜನಿಕರ ಸಮಯಪ್ರಜ್ಞೆಯಿಂದಾಗಿ ಅನಾಹುತವೊಂದು ತಪ್ಪಿದ್ದು, ಆರೋಪಿಯನ್ನು ಹಿಡಿದು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಕ್ಟೋಬರ್ 31 ರಂದು ಇಂದಿರಾನಗರದ ಅಂಗಡಿಯೊಂದಕ್ಕೆ ತನಗೆ ತೊಂದರೆಯಾಗಿದೆ, ಅಡಗಿಕೊಳ್ಳಲು ಜಾಗ ಬೇಕು ಎಂದು ನೆಪ ಹೇಳಿ ನುಗ್ಗಿದ ಪ್ರಭು ರಾಜ್ ಎಂಬ ವ್ಯಕ್ತಿ, ಅಂಗಡಿಯಲ್ಲಿದ್ದ ಮಹಿಳೆಯ ಬಳಿ ಚಿನ್ನದ ಚೈನ್ ನೀಡುವಂತೆ ಪೀಡಿಸಿದ್ದಾನೆ. ಮಹಿಳೆ ನಿರಾಕರಿಸಿದಾಗ ಆಕೆಯ ಕುತ್ತಿಗೆ ಹಿಸುಕಿ ಕೊಲ್ಲುವುದಾಗಿ ಬೆದರಿಕೆ ಹಾಕಿ ಚೈನ್ ಕೀಳಲು ಯತ್ನಿಸಿದ್ದಾನೆ. ಮಹಿಳೆಯ ಕೇಕೆ ಕೇಳಿ ತಕ್ಷಣವೇ ಧಾವಿಸಿದ ಸ್ಥಳೀಯರು, ಸಂತ್ರಸ್ತೆಯನ್ನು ರಕ್ಷಿಸಿ ಆರೋಪಿಗೆ ಧರ್ಮಪೇಟ್ಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮಹಿಳೆ ಸುರಕ್ಷಿತವಾಗಿದ್ದು ಆರೋಪಿ ಖಿನ್ನತೆಯಿಂದ ಬಳಲುತ್ತಿದ್ದಾನೆಯೇ ಎಂಬುದರ ಕುರಿತು ಹಿನ್ನೆಲೆ ತನಿಖೆ ನಡೆಸುತ್ತಿದ್ದಾರೆ.
ಅಂಗಡಿಗೆ ನುಗ್ಗಿ ಕೃತ್ಯ: ಸಹಾಯ ಬೇಕೆಂದು ಅಂಗಡಿಗೆ ನುಗ್ಗಿ ಮಹಿಳೆಯ ಕುತ್ತಿಗೆ ಹಿಸುಕಿ ಚೈನ್ ದೋಚಲು ಯತ್ನಿಸಿದ್ದ ಕಿಡಿಗೇಡಿ.
ಸಾರ್ವಜನಿಕರ ಸಮಯಪ್ರಜ್ಞೆ: ಮಹಿಳೆಯ ರಕ್ಷಣೆಗೆ ಧಾವಿಸಿ ಬಂದ ಸಾರ್ವಜನಿಕರು ಆರೋಪಿ ಪ್ರಭು ರಾಜ್ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಡಿಯೋ ವೈರಲ್: ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಈ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಪೊಲೀಸ್ ತನಿಖೆ: ಸಂತ್ರಸ್ತೆ ಗಾಯಗಳಿಲ್ಲದೆ ಸುರಕ್ಷಿತವಾಗಿದ್ದು, ಆರೋಪಿಯ ಮಾನಸಿಕ ಸ್ಥಿತಿಗತಿ ಹಾಗೂ ಹಿನ್ನೆಲೆಯನ್ನು ಇಂದಿರಾನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





Leave a comment