Home ದಾವಣಗೆರೆ “ತಿಂದ ಪ್ಲೇಟ್‌ಗಳನ್ನೇ ಮತ್ತೆ ಬಳಸಿ”, “ಇನ್ಮುಂದೆ ಯಾರೂ ಪಾತ್ರೆ ತೊಳೆಯಬೇಡಿ”: ಬಿಗ್ ಬಾಸ್ ಮನೆಯ ಸ್ಪರ್ಧಿಗಳ ವರ್ತನೆಗೆ ಕಿಚ್ಚ ಸುದೀಪ್ ತೀಕ್ಷ್ಣ ತರಾಟೆ!
ದಾವಣಗೆರೆಬೆಂಗಳೂರುಸಿನಿಮಾ

“ತಿಂದ ಪ್ಲೇಟ್‌ಗಳನ್ನೇ ಮತ್ತೆ ಬಳಸಿ”, “ಇನ್ಮುಂದೆ ಯಾರೂ ಪಾತ್ರೆ ತೊಳೆಯಬೇಡಿ”: ಬಿಗ್ ಬಾಸ್ ಮನೆಯ ಸ್ಪರ್ಧಿಗಳ ವರ್ತನೆಗೆ ಕಿಚ್ಚ ಸುದೀಪ್ ತೀಕ್ಷ್ಣ ತರಾಟೆ!

Share
ಬಿಗ್ ಬಾಸ್
Share

ಬೆಂಗಳೂರು: ಬಿಗ್‌ ಬಾಸ್‌ ಮನೆಯಲ್ಲಿ ಪ್ರತಿದಿನವೂ ಸ್ಪರ್ಧಿಗಳ ನಡುವೆ ಅಡುಗೆ ಮನೆ ಹಾಗೂ ಪಾತ್ರೆ ತೊಳೆಯುವ ವಿಚಾರವಾಗಿ ನಡೆಯುತ್ತಿರುವ ಗಲಾಟೆಗಳು ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಈ ಬಾರಿಯ ಸೀಸನ್‌ನಲ್ಲಿ ಪಾತ್ರೆ ತೊಳೆಯುವುದು ಮತ್ತು ತೊಳೆಸುವುದೇ ದೊಡ್ಡ ಟಾಸ್ಕ್ ಆಗಿ ಬದಲಾಗಿದ್ದು, ಪ್ರತಿದಿನ ಒಬ್ಬರಲ್ಲ ಒಬ್ಬರು ಇದೇ ವಿಷಯಕ್ಕೆ ಜಟಾಪಟಿ ನಡೆಸುತ್ತಿದ್ದಾರೆ. ವಿಶೇಷವಾಗಿ ಗಗನ್ ಚಿನ್ನಪ್ಪ ಹಾಗೂ ಆಸಿಯಾ ನಡುವೆ ಮತ್ತು ಸೌಂದರ್ಯ ಹಾಗೂ ಗಗನ್ ನಡುವೆ ಪಾತ್ರೆ ವಿಚಾರವಾಗಿಯೇ ತೀವ್ರ ವಾಗ್ವಾದ ಹಾಗೂ ಜಗಳಗಳು ಏರ್ಪಟ್ಟಿದ್ದವು.

ಸ್ಪರ್ಧಿಗಳ ಈ ಕ್ಷುಲ್ಲಕ ಜಂಜಾಟ ಹಾಗೂ ನಿತ್ಯದ ಜಗಳಗಳನ್ನು ಹತ್ತಿರದಿಂದ ವೀಕ್ಷಿಸಿದ ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್, ವಾರದ ಕತೆಯ ಮೂಲಕ ಸ್ಪರ್ಧಿಗಳ ವರ್ತನೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಸ್ಪರ್ಧಿಗಳ ಈ ವರ್ತನೆಯನ್ನು ವ್ಯಂಗ್ಯವಾಡಿದ ಸುದೀಪ್, “ಇನ್ಮುಂದೆ ಯಾರೂ ಪಾತ್ರೆ ತೊಳೆಯಬೇಡಿ, ಪಾತ್ರೆಗಳನ್ನ ತೊಳೆದು ಊಟ ಮಾಡುವಂತಿಲ್ಲ, ತಿಂದಿರೋ ಪ್ಲೇಟ್‌ನ್ನೇ ಮತ್ತೆ ಮತ್ತೆ ಬಳಸಿ, ಆಗ ಯಾರಿಗೂ ಸಮಸ್ಸೆನೇ ಅಗಲ್ಲವಲ್ಲ” ಎಂದು ಮಾರ್ಮಿಕವಾಗಿ ಆಜ್ಞೆ ಮಾಡುವ ಮೂಲಕ ಸ್ಪರ್ಧಿಗಳ ಅತಿವರ್ತನೆ ಹಾಗೂ ಜಗಳದ ಮನಸ್ಥಿತಿಯನ್ನು ಕನ್ನಡಿ ಹಿಡಿದು ತೋರಿಸಿದ್ದಾರೆ.

ನಿತ್ಯದ ಪಾತ್ರೆ ಜಗಳ: ಈ ಬಾರಿಯ ಬಿಗ್‌ಬಾಸ್ ಮನೆಯಲ್ಲಿ ಅಡುಗೆ ಮನೆ ಹಾಗೂ ಪಾತ್ರೆ ತೊಳೆಯುವ ವಿಚಾರವೇ ಸ್ಪರ್ಧಿಗಳ ನಡುವಿನ ಬಹುತೇಕ ಜಗಳಗಳಿಗೆ ಪ್ರಮುಖ ಕಾರಣವಾಗಿದೆ.

ಸ್ಪರ್ಧಿಗಳ ನಡುವಿನ ವಾಕ್ಸಮರ: ಗಗನ್ ಚಿನ್ನಪ್ಪ, ಆಸಿಯಾ ಹಾಗೂ ಸೌಂದರ್ಯ ಅವರಂತಹ ಪ್ರಮುಖ ಸ್ಪರ್ಧಿಗಳ ನಡುವೆ ಪಾತ್ರೆ ತೊಳೆಯುವ ವಿಚಾರವಾಗಿ ತೀವ್ರ ಜಟಾಪಟಿಗಳು ನಡೆದಿವೆ.

ಕಿಚ್ಚ ಸುದೀಪ್ ವ್ಯಂಗ್ಯಾತ್ಮಕ ತರಾಟೆ: ಸ್ಪರ್ಧಿಗಳ ಈ ಬಾಲಲೀಲೆ ಹಾಗೂ ಜಂಜಾಟವನ್ನು ಕಂಡು ಬೇಸತ್ತ ಕಿಚ್ಚ ಸುದೀಪ್, ತಿಂದ ಪ್ಲೇಟ್‌ನಲ್ಲೇ ಮತ್ತೆ ಮತ್ತೆ ತಿನ್ನಿ ಎಂದು ವ್ಯಂಗ್ಯವಾಗಿ ಸಲಹೆ ನೀಡಿ, ಎಲ್ಲರಿಗೂ ಚಾಟಿ ಬೀಸಿದ್ದಾರೆ.

ಮನೆಯಲ್ಲಿ ಸಣ್ಣಪುಟ್ಟ ವಿಷಯಗಳಿಗೂ ದೊಡ್ಡ ಗಲಾಟೆ ಮಾಡಿಕೊಳ್ಳುವ ಸ್ಪರ್ಧಿಗಳಿಗೆ ಸುದೀಪ್ ಅವರ ಈ ಮಾತಿನ ಮೂಲಕ ಗಂಭೀರ ಸಂದೇಶ ರವಾನೆಯಾಗಿದ್ದು, ಇನ್ನು ಮುಂದಾದರೂ ಸ್ಪರ್ಧಿಗಳು ಅನಗತ್ಯ ಜಗಳಗಳನ್ನು ಬಿಟ್ಟು ಉತ್ತಮ ಆಟದತ್ತ ಗಮನಹರಿಸುತ್ತಾರಾ ಕಾದು ನೋಡಬೇಕಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles