ಭಾರತ ದೇಶದ ರಕ್ಷಣಾ ಸಚಿವಾಲಯದ ಅಡಿ ಕಾರ್ಯನಿರ್ವಹಿಸುತ್ತಿರುವಂತಹ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಕಿರಿಯ ಸಹಾಯಕ, ಟೆಕ್ನಿಶಿಯನ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ(BEL Recruitment 2024)ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸುವ ಬೇಕಾಗಿರುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
ಈ ನೇಮಕಾತಿಗೆ ಆನ್ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಲು ಜೂನ್ 25 2024 ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಜುಲೈ 11 ಕೊನೆಯ ದಿನಾಂಕವಾಗಿ ನಿಗದಿಪಡಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ನಿಗದಿಪಡಿಸಿದ ಕೊನೆಯ ದಿನಾಂಕದ ಮುಂಚಿತವಾಗಿಯೇ ಅರ್ಜಿ ಸಲ್ಲಿಸಿ.
BEL Recruitment 2024 – ಸಂಕ್ಷಿಪ್ತ ವಿವರ :

• ನೇಮಕಾತಿ ಇಲಾಖೆ : ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
• ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ : ೩೨
• ಉದ್ಯೋಗ ಸ್ಥಳ : All India
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳ ವಿವರ:
• ಕಿರಿಯ ಸಹಾಯಕರು : 03 ಹುದ್ದೆಗಳು
• ಟೆಕ್ನಿಷಿಯನ್ ಗ್ರೂಪ್ ಸಿ : 17 ಹುದ್ದೆಗಳು
• ಇಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನಿ : 12 ಹುದ್ದೆಗಳು
Education qualification-ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ವಿದ್ಯಾರ್ಹತೆ:
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನ ಈ ನೇಮಕಾತಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು 10ನೇ ತರಗತಿ ಐಟಿಐ, ಬಿ.ಕಾಂ ಪದವಿ ಅಥವಾ ಸಂಬಂಧಪಟ್ಟ ವಿಷಯದಲ್ಲಿ ಡಿಪ್ಲೋಮಾ ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.
Age limit-ವಯೋಮಿತಿ: ಕನಿಷ್ಠ 18 ವರ್ಷದಿಂದ ಗರಿಷ್ಠ 28 ವರ್ಷದ ಒಳಗಿರಬೇಕು.
Age Relaxation –
• SC / ST ಹಾಗೂ ಪ್ರವರ್ಗ 1 – 05 ವರ್ಷ
• 2a, 2b, 3a ಹಾಗೂ 3b ವರ್ಗ – 03 ವರ್ಷ
• Pwd ವರ್ಗದ ಅಭ್ಯರ್ಥಿಗಳು – 10 ವರ್ಷ
ಆಯ್ಕೆಯಾದವರಿಗೆ ಸಿಗುವ ವೇತನ:
• ಇಂಜಿನಿಯರಿಂಗ್ ಅಸಿಸ್ಟೆಂಟ್ ಟ್ರೈನಿ ಆಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ – 24,500/- ರಿಂದ 90,000/- ವರೆಗೆ• ಟೆಕ್ನಿಷಿಯನ್ ಹುದ್ದೆಗಳಿಗೆ ಹಾಗೂ ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 21,500/- ರಿಂದ 82,000/- ರವರೆಗೆ
ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು :
• ಆನ್ಲೈನ್ ಅರ್ಜಿ ನೋಂದಣಿಗೆ ಆರಂಭ ದಿನಾಂಕ : 25 ಜೂನ್ 2024
• ಆನ್ಲೈನ್ ಅರ್ಜಿ ನೊಂದಣಿಗೆ ಕೊನೆಯ ದಿನಾಂಕ : 11 ಜುಲೈ 2024
ನೇಮಕಾತಿಯ ಪ್ರಮುಖ ಲಿಂಕುಗಳು:
• ಅರ್ಜಿ ಸಲ್ಲಿಸುವ ಲಿಂಕ್ : https://jobapply.in/bel2024HYDEATTECHJA/
• ಅಧಿಸೂಚನೆ : https://drive.google.com/file/d/1JxP0gn4b76tNSPJYvELNQC3pU1OrE68I/view