ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಹಸಿರು ಶಾಲಿನ ಮುಳ್ಳಿನ ಹಾದಿಯ ಯಶಸ್ಸಿನ ಬಸವರಾಜಪ್ಪ ಹೆಚ್. ಆರ್. ಯಶೋಗಾಥೆ!

On: August 3, 2025 2:43 PM
Follow Us:
ಬಸವರಾಜಪ್ಪ ಹೆಚ್. ಆರ್.
---Advertisement---

ಕರ್ನಾಟಕದ ಕಳೆದ ಐದು ದಶಕಗಳ ರೈತ ಹೋರಾಟದ ಚರಿತ್ರೆಯ ಚಿತ್ರಣದಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷರು,ಸಾಧು ಸದ್ಧರ್ಮ ಸಮಾಜದ ರಾಜ್ಯಾಧ್ಯಕ್ಷರು, ಬೀಗದೆ ಭಾಗುವ, ಅಜಾತ ಶತ್ರು ರೈತ ಮುಖಂಡರು, ಹಿರಿಯರಾದ ಬಸವರಾಜಪ್ಪ ಹೆಚ್. ಆರ್. ಅವರ ಬದುಕು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯ ಪಟ್ಟಂತೆ ‘ಹಸಿರು ಶಾಲಿನ ಮುಳ್ಳಿನ ಹಾದಿಯ ಕಥನ’ ಉಪಮೇ ಅತ್ಯಂತ ಅರ್ಥಪೂರ್ಣವಾಗಿದೆ. ಅವರ ಆತ್ಮಕಥೆಯಾದ ‘ಹಸಿರು ಹಾದಿಯ ಕಥನ’ ಪುಸ್ತಕವು ಇಂದಿನ ಹೋರಾಟಗಾರರಿಗೆ ಮಾರ್ಗದರ್ಶಿ ಗ್ರಂಥವಾಗಿದೆ.

ಹಳ್ಳಿಯ ಮಧ್ಯಮವರ್ಗದ ರೈತ ಕುಟುಂಬದಲ್ಲಿ ಜನಿಸಿ, ಕನ್ನಡ ಮಾಧ್ಯಮದಲ್ಲೇ ಓದಿ ಮುಂದೆ ರೈತ ಹೋರಾಟದ ಹಾದಿಯಲ್ಲಿ ಮುನ್ನುಗ್ಗಿದ ಬಸವರಾಜಪ್ಪ ಹೆಚ್. ಆರ್. ಅವರ ಜೀವನ ಇಂದಿನ ಪೀಳಿಗೆಗೆ ನಿಜಕ್ಕೂ ಪ್ರೇರಣೆಯಾಗಿದೆ.

READ ALSO THIS STORY: ಮರುವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮೆ ನೋಂದಣಿಗೆ ಯಾವೆಲ್ಲಾ ದಾಖಲೆಗಳು ಬೇಕು?

ಬಸವರಾಜಪ್ಪನವರು 14 ವರ್ಷದ ಬಾಲಕನಾಗಿದ್ದಾಗ ತಹಶೀಲ್ದಾರ್ ಬಲವಂತಪೂರ್ವಕವಾಗಿ ದವಸ ಧಾನ್ಯವನ್ನು ಲೆವಿಗೆಂದುತೆಗೆದುಕೊಂಡು ಹೋಗಿದ್ದು, ಮುಂದೆ ಅವರಿಗೆ ರೈತಪರ ಹೋರಾಟಕ್ಕೆ ಅವರ ನಾಂದಿ ಹಾಡಲು ಪ್ರೇರೇಪಿಸಿತು.

ನಾಡು ಎಂದೂ ಮರೆಯದ ರೈತ ಮುಕುಟ ಮಣಿಗಳು ಸ್ಮರಣೀಯರಿದ ಕಡಿದಾಳು ಶಾಮಣ್ಣ, ಪ್ರೊ.ನಂಜುಂಡಸ್ವಾಮಿ ಹಾಗೂ ಸುಂದರೇಶ್ ಅವರಿಂದ ಸ್ಫೂರ್ತಿ ಪಡೆದ ಬಸವರಾಜಪ್ಪ ಪ್ರತಿಭಟನೆ ಸ್ವರೂಪವಾಗಿ ಅಲ್ಲ, ಜಾಗೃತಿ ಮೂಡಿಸುವ ಸದುದ್ದೇಶದೊಂದಿಗೆ ಚಳವಳಿಯ ಹಾದಿ ಹಿಡಿದರು.

ಅನ್ನದಾತರು ಯಾರ ಮನೆಯ ಜೀತದಾಳುಗಳಲ್ಲ, ಈ ದೇಶದ ಮಾಲಿಕರು ಎಂಬ ಹೆಚ್.ಆರ್.ಬಿ. ಅವರ ಚಿಂತನೆಗಳು, ಅಧ್ಯಯನ ಶೀಲತೆ, ಕಾರ್ಯ ವೈಖರಿ, ರೈತ ಪರ ಕಾಳಜಿಗೆ, ಬಗರ್‌ಹುಕುಂ ಜಮೀನುಗಳು ಉಳಿವಿಕೆ,ಏತ ನೀರಾವರಿ ಯೋಜನೆ ಜಾರಿ,ಬರಗಾಲ ಇರುವುದರಿಂದ ಬ್ಯಾಂಕ್‌ನವರು ರೈತರ ಸಾಲ ವಸೂಲಿ ಬಗ್ಗೆ ಬಲವಂತ ಮಾಡಬಾರದು, ರೈತರ ಖಾತೆಗೆ ಬರುವ ಪರಿಹಾರ ಹಣ, ವೃದ್ಧಾಪ್ಯ ವೇತನ, ಹಾಲಿನ ಹಣವನ್ನು ಸಾಲಕ್ಕೆ ಜಮೆ ಮಾಡಬಾರದು, ರೈತರೇ ಸ್ವಯಂ ವೆಚ್ಚ ಯೋಜನೆ ಅಡಿ ಐಪಿ ಸೆಟ್‌ಗಳನ್ನು ಹಾಕಿಸಿಕೊಳ್ಳುವ ಆದೇಶವನ್ನು ಹಿಂಪಡೆಯಬೇಕು. ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯಬೇಕು. ಬಿತ್ತನೆ ಬೀಜ, ರಸಗೊಬ್ಬರಗಳ ದರ ಏರಿಕೆಯಾಗಿದ್ದು, ದರ ಏರಿಕೆಯನ್ನು ಸರ್ಕಾರ ಕೂಡಲೇ ಕಡಿಮೆ ಮಾಡಬೇಕು, ಪಾರದರ್ಶಕವಾಗಿ ರೈತರಿಗೆ ಪರಿಹಾರ ದೊರಕಬೇಕು, ಇತ್ಯಾದಿ ಹೋರಾಟಗಳು,ಹಲವಾರು ಯೋಜನೆಗಳು ಫಲಶೃತಿಯಾಗಿ ಅಸಂಖ್ಯಾತ ರೈತದ ಸುಖ ಶಾಂತಿಗೆ ಕಾರಣೀಕೃತವಾಗಿವೆ.

ಸಾಲ ತೀರಿಸಲಾರದೇ ರೈತರ ಚರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಲದ ಸಂಸ್ಥೆಗಳವಿರುದ್ಧ ಕಾನೂನಾತ್ಮಕವಾಗಿ ನಡೆಸಿದ ಹೋರಾಟನಡೆಸಿಯಶಸ್ಸು ಸಾಧಿಸಿದ್ದು, ಅನೇಕ ಆಮಿಷ ಹಾಗೂ ಒತ್ತಡಗಳಿದ್ದರೂ ರಾಜಿ ಮಾಡಿಕೊಳ್ಳದೇ ರೈತಪರ ಹೋರಾಟವನ್ನೇ ಜೀವನವಾಗಿಸಿಕೊಂಡಿದ್ದು, ರಾಜ್ಯ ರೈತ ಸಂಘ ಉದಯಕ್ಕೆ ಕಾರಣಗಳು, ಬಸವರಾಜಪ್ಪನವರು ಈ ರೈತ ಸಂಘಕ್ಕೆ ದಿಟ್ಟನಾಯಕತ್ವ ಒದಗಿಸಿದ್ದು ಅವರ ಬದ್ಧತೆಗೆ ಹಿಡಿದ ಕನ್ನಡಿ.

ಏರೋಪಾರ್ಕ್ ಮತ್ತು ಸಂಬಂಧಿತ ಕೈಗಾರಿಕೆಗಳನ್ನು ಸ್ಥಾಪಿಸಲು ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ13 ಹಳ್ಳಿಗಳ ರೈತರ 1,777 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ಸರ್ಕಾರ ಆದೇಶಿಸಿತ್ತು.

ಈ ನಿರ್ಧಾರವನ್ನು ವಿರೋಧಿಸಿ ರಾಜ್ಯ ರೈತ ಸಂಘವು1198 ದಿನಗಳ ಹೋರಾಟವನ್ನು ಮಾಡಿದ ಪರಿಣಾಮವಾಗಿ ಈ ಯೋಜನೆಯನ್ನು ಜುಲೈ 25 ರಂದು ರದ್ದುಗೊಳಿಸಿತು. ಇದರ ನೇತೃತ್ವ ವಹಿಸಿದ್ದು ಹೆಚ್ ಆರ್ ಬಸವರಾಜಪ್ಪರವರು ಅವರ ಹೋರಾಟಕ್ಕೆ ಐತಿಹಾಸಿಕ ಜಯ ಸಿಕ್ಕಿದ್ದು, ಅಂದು ವಿಧಾನ ಸೌಧದಲ್ಲಿ ರೈತರೊಂದಿಗೆ ನಡೆದ ಸಭೆಯಲ್ಲಿ ಕೆಐಎಡಿಬಿ ಅಂತಿಮ ಅಧಿಸೂಚನೆ ರದ್ದುಮಾಡುವುದಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಿಳಿಸಿದರು.

ನಾಡಿನ ಪೂಜ್ಯ ಮಠಾಧೀಶರು ಗಳು, ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ನಾಡಿನ ಎಲ್ಲಾ ಸಚಿವರುಗಳು, ಹಿರಿಯರಿಂದ ಕಿರಿಯರ ವರೆಗೆ ಗೌರವಾಭಿಮಾನ ಹೊಂದಿರುವ ಶ್ರೀಯುತರು ನಮ್ಮ ಸಮಾಜದ ಸಾಕ್ಷಿ ಪ್ರಜ್ಞೆಯಾಗಿದ್ದಾರೆ. ಅವರ ಸರಳತೆ, ಕಪಟತನ ಇಲ್ಲದ ಪ್ರೀತಿ ವಿಶ್ವಾಸ, ಅವರ ಸಾಂಗತ್ಯವನ್ನು ಒಪ್ಪಿಕೊಳ್ಳುತ್ತದೆ.

ಶ್ರೀ ತರಳಬಾಳು ಜಗದ್ಗುರುಗಳವರೊಂದಿಗೆ ಸಮಾಜದ ಕಷ್ಟ ಸುಖಗಳಿಗೆ ಹೆಗಲಾಗಿ ನಿಂತು ಸಮಾಜದ ಉನ್ನತಿಗೆ ಪರಿಶ್ರಮ ಪಡುತ್ತಿರುವ ಶ್ರೀಯುತರ ಸೇವೆ ಸದಾ ಸ್ಮರಣೀಯವಾದುದು. ಸಾರ್ಥಕ ಸಾಧನೆಯ ಸುವರ್ಣ ಸಾಧಿಸಿರುವ ಹಿರಿಯರಾದ ಶ್ರೀಯುತ ಹೆಚ್. ಆರ್ ಬಸವರಾಜಪ್ಪನವರು ಇಂದು ಹುಟ್ಟಿದ ದಿನ. ಅವರ ಹುಟ್ಟು, ಹೋರಾಟ, ಬದುಕು, ಯಶಸ್ಸು. ನಮಗೆಲ್ಲಾ ಮಾರ್ಗದರ್ಶಿ.

ಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳವರ ಕೃಪಾಶೀರ್ವಾದವು ಹೆಚ್ ಆರ್ ಬಸವರಾಜಪ್ಪನವರಿಗೆ ಸದಾ ಸಂಪನ್ನವಾಗಿರಲೆಂಬ ಮನದುಂಬಿದ ಪ್ರಾರ್ಥನೆಗಳೊಂದಿಗೆ ಶ್ರೀಯುತರಿಗೆ ಜನ್ಮ ದಿನದ ಹಾರ್ಧಿಕ ಶುಭಾಶಯಗಳು.

ವಿಶೇಷ ಲೇಖನ: ಬಸವರಾಜ ಸಿರಿಗೆರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment