SUDDIKSHANA KANNADA NEWS/ DAVANAGERE/ DATE:07-04-2023
SHIVAMOGGA: ಕಾಂಗ್ರೆಸ್ (CONGRESS) ಪಕ್ಷ (PARTY)ಕ್ಕೆ ಸುಮಾರು 60ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಗಳಿಲ್ಲ. ಮೇ (MAY)10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆ(ELECTION)ಯಲ್ಲಿ ಕಾಂಗ್ರೆಸ್ (CONGRESS) ಪಕ್ಷವು ಕಳೆದ ಬಾರಿಗಿಂತ ಹೀನಾಯವಾಗಿ ಸೋಲಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಗುಡುಗಿದ್ದಾರೆ.
ಕಾಂಗ್ರೆಸ್ (CONGRESS)ಗೆ ಕೇವಲ ಅಭ್ಯರ್ಥಿಗಳ ಕೊರತೆಯಿದೆ, ಆದರೆ ರಾಜ್ಯದಲ್ಲಿ ನೆಲೆಯೂರಿದೆ ಅಷ್ಟೇ. ಆ ಪಕ್ಷಕ್ಕೆ ಜನರ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಸುಳ್ಳು ಹೇಳಿಕೊಂಡು, ವಿನಾಕಾರಣ ಆರೋಪ ಮಾಡುತ್ತಾ ಕಾಲಹರಣ ಮಾಡಿದೆಯೇ ಹೊರತು ಜನಪರ ಆಡಳಿತ ಎಂದಿಗೂ ನೀಡಿಲ್ಲ ಎಂದುವಾಗ್ದಾಳಿ ನಡೆಸಿದರು.
ಸುಮಾರು 60 ಸ್ಥಾನಗಳಲ್ಲಿ ಕಾಂಗ್ರೆಸ್ (CONGRESS)ಗೆ ಸೂಕ್ತ ಅಭ್ಯರ್ಥಿಗಳಿಲ್ಲ, ಹೀಗಾಗಿ ಅವರು ಅಲ್ಲೊಂದು ಇಲ್ಲಿಂದ ಒಬ್ಬೊಬ್ಬರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಬೊಮ್ಮಾಯಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
“ನಾನು ಮೊದಲೇ ಹೇಳಿದಂತೆ, ಕಾಂಗ್ರೆಸ್ (CONGRESS)ನ ಎರಡನೇ ಪಟ್ಟಿಯನ್ನು ಸಿದ್ಧಪಡಿಸುವಾಗ ಡಿ ಕೆ ಶಿವಕುಮಾರ್ (D. K. SHIVAKUMAR) ಅವರು ನಮ್ಮ ಬಹುತೇಕ ಎಲ್ಲಾ ಶಾಸಕರನ್ನು ಸಂಪರ್ಕಿಸಿದರು, ‘ಸೀಟುಗಳು ನಿಮಗೆ ಮೀಸಲಿಡಲಾಗಿದೆ, ನೀವು ಸೇರುತ್ತೀರಾ?’ ಎಂದು ಕೇಳಿದ್ದಾರೆ. ಆದ್ರೆ, ಯಾರೂ ಹೋಗಿಲ್ಲ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ (CONGRESS) ನಾಯಕರು ಮತ್ತು ಶಿವಕುಮಾರ್ (SHIVAKUMAR) ವೀರಾವೇಶದಿಂದ ಮಾತನಾಡುತ್ತಾರೆ. ಆದರೆ ಒಳಗಿನ ವಾಸ್ತವ ಬೇರೆಯೇ ಇತ್ತು. ಕಾಂಗ್ರೆಸ್ ಕಳೆದ ಬಾರಿಗಿಂತ ಹೀನಾಯವಾಗಿ ಸೋಲುತ್ತೆ, ಅದರಲ್ಲಿ ಯಾವುದೇ ಸಂದೇಹವಿಲ್ಲ, ಏಕೆಂದರೆ ಅವರಿಗೆ ಅಭ್ಯರ್ಥಿಗಳಿಲ್ಲ, ಅಥವಾ ನೀತಿಗಳ ಬಗ್ಗೆ ಆಧಾರವಿಲ್ಲ, ಸ್ಪಷ್ಟತೆ ಇಲ್ಲ ಎಂದು ಹೇಳಿದರು.
ಮೀಸಲಾತಿ ಅಥವಾ ಅಭಿವೃದ್ಧಿಯ ಬಗ್ಗೆ. ಅವರು ಅಸಡ್ಡೆಯಿಂದ ಮಾತನಾಡುವ ಮೂಲಕ ಜನರ ಮನಸ್ಸು ಗೆಲ್ಲುವುದಿರಲಿ, ಸಂಕಷ್ಟ ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗಿಲ್ಲ. ಚುನಾವಣೆಯಲ್ಲಿ ಕೆಲ ಸ್ಥಾನಗಳಲ್ಲಿ ಗೆಲ್ಲಬಹುದು, ಆದ್ರೆ, CONGRESS ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಒಟ್ಟು 224 ಸ್ಥಾನಗಳ ಪೈಕಿ 166 ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದ್ದು, ಉಳಿದ 58 ಸ್ಥಾನಗಳಿಗೆ ಇನ್ನೂ ಪಟ್ಟಿಯನ್ನು ಅಂತಿಮಗೊಳಿಸಬೇಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಸರ್ಕಾರದ ಮೀಸಲಾತಿ ಸಂಬಂಧಿತ ನಿರ್ಧಾರಗಳನ್ನು ರದ್ದುಪಡಿಸುವುದಾಗಿ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಅವರು ಮಾಡಲಿ, ನೋಡೋಣ… ಸಾಧ್ಯವಿಲ್ಲ ಎಂದರು.