SUDDIKSHANA KANNADA NEWS/ DAVANAGERE/ DATE:16-03-2025
ದಾವಣಗೆರೆ: ರಾಜ್ಯ ಮಾತ್ರವಲ್ಲ, ಬೇರೆ ರಾಜ್ಯಗಳಲ್ಲಿಯೂ ಬ್ಯಾಂಕ್ ರಾಬರಿ ಕೇಸ್ ಗಳು ನಡೆಯುತ್ತಲೇ ಇವೆ. ಪೊಲೀಸರಿಗೂ ಸವಾಲಾಗಿ ಪರಿಣಮಿಸಿದೆ. ಆರೋಪಿಗಳನ್ನು ಹಿಡಿಯುವುದು ಅಷ್ಟು ಸುಲಭವಾಗಿರಲಿಲ್ಲ. ದಾವಣಗೆರೆ ಪೊಲೀಸರ ಭರ್ಜರಿ ಬೇಟೆಯಿಂದ ತುಸು ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ.
ಕರ್ನಾಟಕ ರಾಜ್ಯವಲ್ಲದೇ ಹೊರ ರಾಜ್ಯಗಳಾದ ತಮಿಳುನಾಡು, ಉತ್ತರ ಪ್ರದೇಶ, ಆಂದ್ರಪ್ರದೇಶ, ತೆಲಂಗಾಣ, ಮದ್ಯಪ್ರದೇಶ, ದೆಹಲಿ ಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಅಲ್ಲಿನ ಪೊಲೀಸರಿಗೂ ಬೇಕಾಗಿದ್ದರು.
ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕಿನ ಪೊಲೀಸರು ಖತರ್ನಾಕ್ ಗ್ಯಾಂಗ್ ಅನ್ನು ಸೆದೆಬಡಿದಿದ್ದು, ಪೊಲೀಸರ ಚಾಕಚಕ್ಯತೆಯೇ ಕಾರಣ.
ಜಿಲ್ಲೆಯಲ್ಲಿ ಸಂಭವಿಸಬಹುದಾಗಿದ್ದ ಸಾರ್ವಜನಿಕರು ಭಯಗೊಳಿಸಬಹುದಾಗಿದ್ದ ಬ್ಯಾಂಕ ದರೋಡೆ ಪ್ರಕರಣವನ್ನು ತಡೆಗಟ್ಟುವಲ್ಲಿ ಹಾಗೂ ಕುಖ್ಯಾತ ಅಂತರ್ ರಾಜ್ಯ ಬ್ಯಾಂಕ್ ಕಳ್ಳತನ ಮಾಡುವ ಆರೋಪಿತರನ್ನು ಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸ್ ತಂಡವು ಅದ್ಭುತ ಕಾರ್ಯ ಮಾಡಿದೆ.
ಚನ್ನಗಿರಿ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್, ದಾವಣಗೆರೆ ಗ್ರಾಮಾಂತರ ವಿಭಾಗದ ಪೊಲೀಸ್ ಉಪಾಧೀಕ್ಷ ಬಸವರಾಜ್ ಬಿ.ಎಸ್., ನ್ಯಾಮತಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರವಿ ಎನ್. ಎಸ್.,
ಹೊನ್ನಾಳಿ ಪೊಲೀಸ್ ಠಾಣೆಯ ಪಿಎಸ್ಐ ಸಂಜೀವ್ ಕುಮಾರ, ಕೆಟಿಜೆ ನಗರ ಪೊಲೀಸ್ ಠಾಣೆಯ ಪಿಎಸ್ಐ ಸಾಗರ್ ಅತ್ತರವಾಲಾ, ಡಿಸಿಆರ್ ಬಿ ಘಟಕದ ಸಿಬ್ಬಂದಿಗಳಾದ ಮಜೀದ್ ಕೆ ಸಿ, ಆಂಜನೇಯ, ರಾಘವೇಂದ್ರ, ಬಾಲಾಜಿ, ರಮೇಶ್ ನಾಯ್ಕ್, ಮಲ್ಲಿಕಾರ್ಜುನ ಮತ್ತು ನ್ಯಾಮತಿ ಪೊಲೀಸ್ ಠಾಣೆಯ ಮಹೇಶ್ ನಾಯ್ಕ್, ಆನಂದ, ಶಿವರಾಜ್, ದೇವರಾಜ್, ನಾಗರಾಜ್ ನಾಯ್ಕ್,ಮುರಳಿ, ಹೊನ್ನಾಳಿ ಪೊಲೀಸ್ ಠಾಣೆಯ ಬಸವರಾಜ್ ಮತ್ತು ರಾಜಶೇಖರ್ ಅವರನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.