SUDDIKSHANA KANNADA NEWS/ DAVANAGERE/ DATE:20-07-2023
ದಾವಣಗೆರೆ: ವಿಧಾನಸಭೆ ಉಪಸಭಾಪತಿ ರುದ್ರಪ್ಪ ಲಮಾಣಿ ಅವರನ್ನು ವಿಧಾನಸಭಾ ಕಲಾಪದ ವೇಳೆ ಅವಮಾನಿಸಿದ ಬಿಜೆಪಿ ಹಾಗೂ ಜೆಡಿಎಸ್ ಶಾಸಕರ ದುರ್ವತನೆ ಸಹಿಸುವಂಥದ್ದಲ್ಲ. ಜನಪ್ರತಿನಿಧಿಗಳು ತಮ್ಮ ಘನತೆಗೆ ತಕ್ಕಂತೆ ವರ್ತಿಸದೇ ಕೆಟ್ಟದಾಗಿ ನಡೆದುಕೊಂಡಿದ್ದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಎಂದು ಜಿಲ್ಲಾ ಬಂಜಾರ (Banjara) ಸಂಘ ಆಕ್ರೋಶ ವ್ಯಕ್ತಪಡಿಸಿದ್ದು, ದಮನಿತ, ದಲಿತ, ಅಲೆಮಾರಿ ಹಾಗೂ ತುಳಿತಕ್ಕೆ ಒಳಗಾದ ಎಲ್ಲಾ ಸಮಾಜಗಳು ಒಗ್ಗೂಡಿ ಈ ವರ್ತನೆ ವಿರುದ್ಧ ಪ್ರತಿಭಟಿಸಬೇಕು ಎಂದು ಕರೆ ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಎಸ್.ನಂಜಾನಾಯ್ಕ ಹಾಗೂ ಕಾರ್ಯದರ್ಶಿ ಕೆ.ಆರ್. ಮಲ್ಲೇಶ್ ನಾಯ್ಕ ಅವರು, ಕಳೆದ ಬುಧವಾರ ವಿಧಾನಸಭಾ ಕಲಾಪದ ವೇಳೆ ಕಾಂಗ್ರೆಸ್ ಸರ್ಕಾರ ಮಂಡಿಸಿದ ಕೆಲ ಮಸೂದೆಗಳ ಜಾರಿ
ಸಂಬಂಧದ ಪತ್ರಗಳನ್ನು ಹರಿದು ಸಭಾಧ್ಯಕ್ಷರ ಪೀಠದತ್ತ ಎಸೆದು, ಬಿಜೆಪಿ, ಜೆಡಿಎಸ್ ಶಾಸಕರು ಪ್ರತಿಭಟನೆ ನಡೆಸಿದರು. ಆ ಸಮಯದಲ್ಲಿ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅಧ್ಯಕ್ಷ ಪೀಠದಲ್ಲಿದ್ದರು. ಹರಿದ ಪ್ರತಿಗಳನ್ನು ಅವರ ಮುಖಕ್ಕೆ,
ದೇಹದ ಮೇಲೆ, ಹಾರಾಡುವಂತೆ ತೂರಿ, ಅವಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭಾಧ್ಯಕ್ಷರ ಪೀಠ ಮತ್ತು ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿಯವರ ಮೇಲೆ ನಡೆದ ಕೃತ್ಯ ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಮಾಡಿದ ಅಕ್ಷಮ್ಯ ಅಪರಾಧ. ಈ ಘಟನೆಗೆ ಕಾರಣರಾಗಿ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಶಾಸಕರಾದ ಆರ್. ಅಶೋಕ್, ಡಾ. ಸಿ. ಎನ್. ಆಶ್ವತ್ ನಾರಾಯಣ್, ಅರಗ ಜ್ಞಾನೇಂದ್ರ, ಸುನೀಲ್ ಕುಮಾರ್, ವೇದವ್ಯಾಸ ಕಾಮತ್, ಯಶಪಾಲ್ ಸುವರ್ಣ, ಧೀರಜ್, ಮುನಿರಾಜು, ಭರತ್ ಶೆಟ್ಟಿ, ಅರವಿಂದ ಬೆಲ್ಲದ್, ಉಮಾನಾಥ್ ಕೊಟ್ಯಾನ್ ಮತ್ತು ಇದರಲ್ಲಿ ಭಾಗಿಯಾದ ಎಲ್ಲಾ ಶಾಸಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿಯನ್ನೂ ಓದಿ:
ಅಷ್ಟೇ ಅಲ್ಲದೆ ಅವರೆಲ್ಲ ಮುಗ್ಧ, ಸರಳ ಸಜ್ಜನಿಕೆಯ ಲಂಬಾಣಿ ಜನಾಂಗದ ರಾಜಕಾರಣಿ ರುದ್ರಪ್ಪ ಲಮಾಣಿಯವರು ಸಭಾಪತಿ ಪೀಠದಲ್ಲಿರುವಾಗಲೇ ನಡೆದಿರುವ ಈ ಕೃತ್ಯ ಅತ್ಯಂತ ಖಂಡನೀಯ, ಎಲ್ಲರೂ ಕ್ಷಮೆ ಕೇಳಬೇಕು. ಈ ಕೃತ್ಯ ಇತಿಹಾಸದಲ್ಲಿಯೇ ಮೊದಲ ಕೃತ್ಯವಾಗಿದೆ. ಕೂಡಲೇ ದುರ್ವರ್ತನೆ ತೋರಿದ ಶಾಸಕರ ಶಾಸಕತ್ವ ಸ್ಥಾನವನ್ನು ಈ ತಕ್ಷಣವೇ ರದ್ದುಗೊಳಿಸಬೇಕು. ಹಾಗೇ ಸುಮ್ಮನೆ ಬಿಟ್ಟರೆ ಬೇರೆ ರಾಜ್ಯಗಳಲ್ಲಿಯೂ ಸಹ ಈ ರೀತಿಯ ಪ್ರಜಾಪ್ರಭುತ್ವ, ಸಂವಿಧಾನ ಅವಮಾನಿಸುವ ಕೃತ್ಯ ಮುಂದುವರೆದು ಪ್ರಜಾಪ್ರಭುತ್ವಕ್ಕೆ ಮತ್ತು ಸಂವಿಧಾನಕ್ಕೆ ಗೌರವ ಇಲ್ಲದಂತಾಗುತ್ತದೆ ಎಂದರು.
ಬಿಜೆಪಿಯವರಿಗೆ ದಮನಿತರು, ದಲಿತರು, ಅಲೆಮಾರಿಗಳು ಮತ್ತು ತುಳಿತಕ್ಕೆ ಒಳಗಾದ ಸಮಾಜದವರು, ಮೇಲ್ಮಟ್ಟದ ರಾಜಕಾರಣದ ಅಧಿಕಾರದಲ್ಲಿ ಇರುವುದನ್ನು ಸಹಿಸುವುದಿಲ್ಲ ಎಂಬುದು ಇವರ ಈ ಕೆಳದರ್ಜೆಯ ವರ್ತನೆಯಿಂದ
ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದನ್ನು ಸಹಿಸಲಾಗದ ಇವರು ಹೇಗೆ ತಾನೆ ಪ್ರಜಾಪ್ರಭುತ್ವಕ್ಕೆ, ಸಂವಿಧಾನದ ಆಶಯ ಗೌರವಿಸಲು ಸಾಧ್ಯ, ಸಂಸ್ಕಾರ, ಸಂಸ್ಕೃತಿ ಇಲ್ಲದ ಇಂತಹವರು ಶಾಸಕರಾಗಿ ಇರಲು ಅನರ್ಹರು. ಈ ಕುರಿತು ರಾಜ್ಯದ ಎಲ್ಲಾ ತುಳಿತ, ದಮನಿತ ಸಮಾಜದ ಮುಖಂಡರೊಂದಿಗೆ ಚರ್ಚಿಸಿ, ಮುಂದಿನ ಹೋರಾಟದ ರೂಪು ರೇಷೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಗೋಷ್ಟಿಯಲ್ಲಿ ಸಂಘದ ಎಸ್. ಬಸವರಾಜ ನಾಯ್ಕ ಕುರ್ಕಿ, ಲಕ್ಷ್ಮಣ್ ರಾಮವತ್, ಗುರುಮೂರ್ತಿ, ಸಂದೇಶ ನಾಯ್ಕ, ಕರ್ನಾಟಕ ರಾಜ್ಯ ತಾಂಡಾ ರಕ್ಷಣಾ ವೇದಿಕೆ ಅಧ್ಯಕ್ಷ ಹೆಚ್. ಕೆ. ಲಿಂಗರಾಜ್ ನಾಯ್ಕ, ರವಿನಾಯ್ಕ ತೋಳಹುಣಸೆ ಮತ್ತಿತರರು ಹಾಜರಿದ್ದರು.
Banjara, Banjara Leaders Pressmeet, Banjara News, Banjara News Updates, Banjara News, Banjara Leaders Pressmeet