SUDDIKSHANA KANNADA NEWS/ DAVANAGERE/ DATE:13-10-2023
ಬೆಂಗಳೂರು (Bangalore): ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ವಿದ್ಯುತ್ ವ್ಯವಸ್ಥೆಯನ್ನು ರಚಿಸಲು ದೀರ್ಘಾವಧಿಯ ಅವಶ್ಯಕತೆಯಿರುವುದರಿಂದ ಯೋಜನೆಗಳನ್ನು ಸಮರ್ಪಕವಾಗಿ ರೂಪಿಸಬೇಕಾಗಿದೆ. ನವೀಕರಿಸಬಹುದಾದ ಇಂಧನದಲ್ಲಿ ಖಾಸಗಿ ವಲಯದಲ್ಲಿ ಸಹ ಯಾವುದೇ ಹೊಸ ವಿದ್ಯುತ್ ಖರೀದಿ ಒಪ್ಪಂದಗಳು ಆಗಿಲ್ಲ. ಛತ್ತೀಸ್ಗಢ ಪಿಟ್ ಹೆಡ್ ಪವರ್ ಪ್ಲಾಂಟ್ – ಯಾವುದೇ ಪ್ರಗತಿಯನ್ನು ಮಾಡಲಾಗಿಲ್ಲ. ಒರಿಸ್ಸಾದಲ್ಲಿರುವ ಮಂದಾಕಿನಿ Captive ಗಣಿಯಿಂದ ಕಲ್ಲಿದ್ದಲು ಪಡೆಯಲು ಯಾವುದೇ ಅನುಸರಣೆಯಾಗಿಲ್ಲ. KUSUM Cಅಡಿಯಲ್ಲಿ ಸೌರ ವಿಕೇಂದ್ರೀಕೃತ ಸ್ಥಾವರವನ್ನು 3,37,508 ಪಂಪ್ಸೆಟ್ಗಳಿಗೆ ಮಂಜೂರು ಮಾಡಲಾಗಿದೆ. ಆದರೆ ಅನುಷ್ಠಾನವಾಗಿರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
Read Also This Story:
ಸುರಂಗಗಳಲ್ಲಿ ಅಡಗಿ ಕೂತಿರುವ ಹಮಾಸ್ ಉಗ್ರರು: ಉತ್ತರ ಗಾಜಾ ಪ್ರದೇಶದ 1.1 ಮಿಲಿಯನ್ ಜನರ ಸ್ಥಳಾಂತರಕ್ಕೆ ಇಸ್ರೇಲ್ (Israel)ಮಿಲಿಟರಿ ಸೂಚನೆ..?
2020-21 ರಲ್ಲಿ ರಾಜ್ಯಕ್ಕೆ ಹಂಚಿಕೆಯಾಗಿದ್ದ 7000 ಸಂಖ್ಯೆಯ off grid/Stand-alone ಸೌರ ಪಂಪ್ ಗಳ ಅಳವಡಿಕೆಯಾಗಿರುವುದಿಲ್ಲ. ಇತರೆ ರಾಜ್ಯಗಳಿಗೆ 1 ಲಕ್ಷ ಪಂಪ್ ಗಳ ಹಂಚಿಕೆಯಾಗಿದೆ. ರಾಜ್ಯದ ಪಾಲಾದ 150 MW ವಿದ್ಯುತ್ತನ್ನು ನವದೆಹಲಿಗೆ ಹಂಚಿಕೆ ಮಾಡಲಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೇಡಿಕೆ 40-50% ಹೆಚ್ಚಾಗಿದೆ. ಮಳೆಯ ಕೊರತೆಯುಂಟಾಗಿದೆ. ಕೃಷಿ ಪಂಪ್ ಸೆಟ್ ಗಳ ಹೆಚ್ಚಿನ ವಿದ್ಯುತ್ ಬೇಡಿಕೆ ಇದ್ದು, ಆರ್ಥಿಕತೆಯಲ್ಲಿ ಕೋವಿಡ್ ನಂತರದ ಪ್ರಬಲ ಚೇತರಿಕೆ ಆಗಿದೆ.
ದೈನಂದಿನ ಬಳಕೆಯು 180 ಮಿಲಿಯನ್ ಯೂನಿಟ್ ನಿಂದ 260 ಮಿಲಿಯನ್ ಯೂನಿಟ್ ಗಳಿಗೆ ಏರಿಕೆಯಾಗಿದೆ. ಗರಿಷ್ಠ ಹಗಲಿನ ವಿದ್ಯುತ್ ಬೇಡಿಕೆ 11000MW ನಿಂದ 16000MW ಗೆ ಏರಿಕೆಯಾಗಿದೆ (ಮಳೆಗಾಲದಲ್ಲಿ). ಜಲವಿದ್ಯುತ್ ಮತ್ತು
ಪವನ ವಿದ್ಯುತ್ ಲಭ್ಯತೆಯಲ್ಲಿನ ಕೊರತೆಯಿಂದಾಗಿ, ರಾತ್ರಿಯ ವೇಳೆಯಲ್ಲಿ ಸುಮಾರು 10,000MW ವಿದ್ಯುತ್ ಕೊರತೆ ಎದುರಿಸಲಾಗುತ್ತಿದೆ. ವಿದ್ಯುತ್ ವಿನಿಮಯ ಕೇಂದ್ರಗಳಲ್ಲಿಯೂ ಸಹ ಹೆಚ್ಚಿನ ಬೇಡಿಕೆಯಿರುತ್ತದೆ – ಅದರ ಹೊರತಾಗಿಯೂ
ರಾಜ್ಯದಿಂದ 1000 ರಿಂದ 1500MW ಖರೀದಿಸಲು ಪ್ರಯತ್ನಗಳು ನಡೆಯುತ್ತಿವೆ. ಜಲವಿದ್ಯುತ್ ಲಭ್ಯತೆಯಲ್ಲಿ 3000 MU ರಷ್ಟು ಕಡಿಮೆಯಾಗಿದೆ – ಪ್ರತಿ ದಿನಕ್ಕೆ ಸರಾಸರಿ 10MUs. ಜಲವಿದ್ಯುತ್ತನ್ನು ಗರಿಷ್ಠ ಬೇಡಿಕೆ ಪೂರೈಸಲು ಮತ್ತು ವಿದ್ಯುತ್ ಜಾಲದ ನಿರ್ವಹಣೆಗಾಗಿ ಮಾತ್ರ ಬಳಸಲಾಗುತ್ತಿದೆ.
ಶಾಖೋತ್ಪನ್ನ ಘಟಕಗಳು:
- ಹಲವಾರು ಶಾಖೋತ್ಪನ್ನ ಘಟಕಗಳಿಗೆ AOH ಅನ್ನು ಮಳೆಗಾಲದಲ್ಲಿ ನಿಗದಿಪಡಿಸಲಾಗಿತ್ತು.
- ಹೆಚ್ಚಿನ ಬೇಡಿಕೆಯ ಕಾರಣದಿಂದ ಶಾಖೋತ್ಪನ್ನ ಘಟಕಗಳನ್ನು ಮರುಚಾಲನೆಗೊಳಿಸಲಾಗಿದೆ.
- ನಾಗಪುರ / ರಾಮಗೊಂಡಂ ಪ್ರದೇಶದಲ್ಲಿ ಮಳೆಯಿಂದಾಗಿ ಕಲ್ಲಿದ್ದಲಿನ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ, ವಿದ್ಯುತ್ ಉತ್ಪಾದನೆ ಕುಂಠಿತವಾಗಿದೆ. ಸದರಿ ಸಮಸ್ಯೆಗಳ ಬಗ್ಗೆ ಕಲ್ಲಿದ್ದಲು ಮಂತ್ರಾಲಯದೊಂದಿಗೆ
ವ್ಯವಹರಿಸಲಾಗಿದೆ. - ಅಸ್ತಿತ್ವದಲ್ಲಿರುವ ಎಲ್ಲಾ ಕಲ್ಲಿದ್ದಲು ಸಂಸ್ಥೆಗಳಿಂದ ತಿಂಗಳಿಗೆ 15 ಲಕ್ಷ MT ಪಡೆಯಲು ದಿನವಹಿ ಕ್ರಮವಹಿಸಲಾಗಿದೆ ಹಾಗೂ ನಿಗದಿಯಂತೆ ಪಡೆಯಲಾಗುತ್ತಿದ್ದು, ಪ್ರಸ್ತುತ ಕೊರತೆಯಿರುವುದಿಲ್ಲ
- ನಿರಂತರ ಪರಿಶ್ರಮದಿಂದ ಸೆಪ್ಟೆಂಬರ್ ತಿಂಗಳಿನಲ್ಲಿ MCL – RSR ನಿಂದ 2 ಲಕ್ಷ MT ಹೆಚ್ಚುವರಿ ಕಲ್ಲಿದ್ದಲು ಪಡೆಯಲಾಗಿದೆ.
- 2.5 ಲಕ್ಷ ಟನ್ ಆಮದು ಮಾಡಿದ ಕಲ್ಲಿದ್ದಲು ಪಡೆಯಲು ಟೆಂಡರ್ ಮಾಡಲಾಗಿದ್ದು ಮೌಲ್ಯಮಾಪನ ಮಾಡಲಾಗುತ್ತಿದೆ, ಆಮದು ಕಲ್ಲಿದ್ದಲಿನಲ್ಲಿ high Calorific Value ಇರುವುದರಿಂದ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ವರ್ಧಿಸುತ್ತದೆ.
- ಗುಣಮಟ್ಟವನ್ನು ಸುಧಾರಿಸಲು ತೊಳೆದ ಕಲ್ಲಿದ್ದಲನ್ನು ಪಡೆಯುವ ಪ್ರಸ್ತಾವನೆಯನ್ನು ಸಕ್ರಿಯವಾಗಿ ಪರಿಗಣಿಸಲಾಗುತ್ತಿದೆ.
ವಿನಿಮಯ / ದ್ವಿಪಕ್ಷೀಯ ವಿನಿಮಯದಿಂದ ವಿದ್ಯುತ್ತನ್ನು ಪಡೆಯುವುದು:
- ವಿದ್ಯುತ್ ವಿನಿಮಯದಲ್ಲಿನ ವಿದ್ಯುತ್ ಲಭ್ಯತೆಯ ಮೇಲ್ವಿಚಾರಣೆಯನ್ನು ಪ್ರತಿ ಗಂಟೆಯ ಆಧಾರದಲ್ಲಿ ಕೈಗೊಳ್ಳಲಾಗುತ್ತಿದ್ದು, SLDC ಯ projections ಹಾಗೂ ಅವಶ್ಯಕತೆ ಅನುಗುಣವಾಗಿ ವಿದ್ಯುತ್ ಖರೀದಿಸಲು Bid ಗಳನ್ನು ಕರೆಯಲಾಗುತ್ತಿದೆ.
- ಉತ್ತರ ಪ್ರದೇಶ ಹಾಗೂ ಪಂಜಾಬ್ ರಾಜ್ಯಗಳೊಂದಿಗೆ bilateral power swapping ಆಧಾರದಲ್ಲಿ ವಿದ್ಯುತ್ ಪಡೆಯಲಾಗುತ್ತಿದೆ. – ಈಗ ಪಡೆಯುತ್ತಿರುವ ವಿದ್ಯುತ್ ಅನ್ನು ಮುಂದಿನ ಮುಂಗಾರು ಅವಧಿಗಳಲ್ಲಿ ಹಿಂತಿರುಗಿಸಲಾಗುವುದು.
- ಅಲ್ಪಾವಧಿ ಆಧಾರದಲ್ಲಿ 1300 MW ವಿದ್ಯುತ್ ಖರೀದಿ ಕೈಗೊಳ್ಳಲು KERC ರವರ ಅನುಮೋದನೆ ಪಡೆಯಲಾಗಿದ್ದು, ಟೆಂಡರ್ ಕರೆಯಲಾಗುತ್ತಿದೆ.
- ರಾಜ್ಯದಲ್ಲಿನ open access generators (ಶಾಖೋತ್ಪನ್ನ, ಸಹ-ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಮೂಲ) ಗಳಿಂದ ವಿದ್ಯುತ್ ಪಡೆಯಲು “ರಾಷ್ಟ್ರೀಯ ವಿಪತ್ತಿನ ಅಡಿಯಲ್ಲಿ” ವಿದ್ಯುತ್ ಕಾಯ್ದೆಯ ಸೆಕ್ಷನ್ 11 ಅನ್ನು ಜಾರಿಗೊಳಿಸಲಾಗುತ್ತಿದೆ. ಇದರಿಂದ ಸುಮಾರು 800 MW ವಿದ್ಯುತ್ ಸಿಗಲಿದೆ.
ರಾಜ್ಯದಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಬಲವರ್ಧನೆ:
- KPCLನ 370MW ಅನಿಲ ವಿದ್ಯುತ್ ಉತ್ಪಾದನಾ ಘಟಕವನ್ನು (YCCP) ಕಾರ್ಯಾಚರಣೆಗೊಳಿಸಲು ಕ್ರಮ ವಹಿಸಲಾಗಿದೆ.
- ವಿಕೇಂದ್ರಿಕೃತ ಸೌರ ವಿದ್ಯುತ್ ಮೂಲಕ IP ಸೆಟ್ಗಳಿಗೆ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ KUSUM-C ಅಡಿಯಲ್ಲಿ ಮೊದಲ ಹಂತದಲ್ಲಿ 1300MW ಹಾಗೂ ಎರಡನೇ ಹಂತದಲ್ಲಿ 1200MW ಕೈಗೆತ್ತಿಕೊಳ್ಳಲಾಗುವುದು.
- ಪಾವಗಡದಲ್ಲಿ ಹೆಚ್ಚುವರಿಯಾಗಿ 300MW ಮತ್ತು ಕಲಬುರ್ಗಿಯಲ್ಲಿ 500MW ಸೋಲಾರ್ ಪಾರ್ಕ್ ಸ್ಥಾಪನೆ.
- ಶರಾವತಿಯಲ್ಲಿ 2000MW ಪಂಪ್ಡ್ ಹೈಡ್ರೋ ಪ್ಲಾಂಟ್ ಕೈಗೆತ್ತಿಕೊಳ್ಳಲಾಗುತ್ತಿದೆ –ಇದಕ್ಕೆ ಬೇಕಾದ CEA, CWC ಮತ್ತು MOEFCC ಅನುಮೋದನೆಗಳ ಬಗ್ಗೆ ಶೀಘ್ರವಾಗಿ ಕ್ರಮವಹಿಸಲಾಗುತ್ತಿದ್ದು, ಡಿಸೆಂಬರ್-2023 ರೊಳಗೆ ಪಡೆಯಲಾಗುವುದು.
- ಛತ್ತೀಸ್ಗಢದ ಗೋದ್ನಾದಲ್ಲಿ ರಾಜ್ಯದ ಕ್ಯಾಪ್ಟಿವ್ ಕಲ್ಲಿದ್ದಲು ಗಣಿಯನ್ನು ಖಾಸಗಿ ಹೂಡಿಕೆ / ಜಂಟಿ ಹೂಡಿಕೆಯಡಿ ಕೈಗೊಳ್ಳಲು ಕ್ರಮವಹಿಸಲಾಗುತ್ತಿದೆ.
- ಇತರ ರಾಜ್ಯಗಳಲ್ಲಿನ stressed out ವಿದ್ಯುತ್ ಸ್ಥಾವರಗಳಿಂದ ವಿದ್ಯುತ್ ಖರೀದಿಸಲು ಪ್ರಸ್ತಾಪಿಸಲಾಗಿದೆ.
ವಿದ್ಯುತ್ ಸರಬರಾಜು / ವಿದ್ಯುತ್ ವಿತರಣೆಯ ಮೇಲ್ವಿಚಾರಣೆ:
- ವಿದ್ಯುತ್ ಪೂರೈಕೆಯ ದೈನಂದಿನ ಮೇಲ್ವಿಚಾರಣೆಯನ್ನು ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ ಹಾಗೂ ವ್ಯವಸ್ಥಾಪಕ ನಿರ್ದೇಶಕರು KPTCL ರವರ ನೇತೃತ್ವದಲ್ಲಿ ನಿರ್ವಹಿಸಲಾಗುತ್ತಿದೆ.
- ಪ್ರತಿ ಜಿಲ್ಲೆಯಲ್ಲಿ ಉಪಕೇಂದ್ರವಾರು ಮತ್ತು ಫೀಡರ್ವಾರು ವಿದ್ಯುತ್ ಪೂರೈಕೆ ಬಗ್ಗೆ ಮೇಲ್ವಿಚಾರಣೆ ನಡೆಸಲು KPTCL / ESCOM ಗಳ ಮುಖ್ಯ ಇಂಜಿನಿಯರ್ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
- ವಿದ್ಯುತ್ ಸರಬರಾಜು ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರುಗಳು, ಎಲ್ಲಾ ಭಾಗೀದಾರರೊಂದಿಗೆ ಸಮರ್ಪಕ ರೀತಿಯಲ್ಲಿ ಸಂವಹನವನ್ನು ಮತ್ತು ವಿದ್ಯುತ್ ಪೂರೈಕೆಯ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.