ದಾವಣಗೆರೆ: ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬದಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿರ್ಸಜನೆ ಅವಧಿಯನ್ನು 25 ದಿನಗಳಿಗೆ ಸೀಮಿತಗೊಳಿಸಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಆದೇಶಿಸಿದ್ದಾರೆ.
ಆಗಸ್ಟ್ 27 ರ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಗಣೇಶಮೂರ್ತಿ ಪ್ರತಿಷ್ಠಾಪಿಸಿ ವಿಸರ್ಜನೆ ಮಾಡುವ ಅವಧಿಯನ್ನು ಸೆ.20 ರವರೆಗೆ ಮಾತ್ರ ಮುಂದುವರೆಸಬೇಕೆಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
READ ALSO THIS STORY: ಬೆಂಗಳೂರಿನಲ್ಲಿ 18,000 ರೂ.ನಲ್ಲೇ ಬಿಂದಾಸ್ ಲೈಫ್: ದುಬೈನಲ್ಲಿ ಹೆಚ್ಚು ದುಡಿದ್ರೂ ಇಲ್ಲ ಸಂತೋಷ, ನೆಮ್ಮದಿ!
ಡಿಜೆ ಸಿಸ್ಟಂ ಬಳಕೆ ನಿಷೇಧ:
ದಾವಣಗೆರೆ ಜಿಲ್ಲೆಯಾದ್ಯಂತ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗಳು ಪೂರ್ಣಗೊಳ್ಳುವವರೆಗೆ ಸಾರ್ವಜನಿಕರ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಗಣೇಶಮೂರ್ತಿ ವಿಸರ್ಜನೆ ಮುಕ್ತಾಯಗೊಳ್ಳುವವರೆಗೆ ಜಿಲ್ಲೆಯಾದ್ಯಂತ ಡಿಜೆ ಸಿಸ್ಟಂ ಬಳಕೆ ನಿಷೇಧಗೊಳಿಸಿ ಜಿಲ್ಲಾ ದಂಡಾಧಿಕಾರಿ ಗಂಗಾಧರಸ್ವಾಮಿ ಜಿ. ಎಂ. ಆದೇಶ ಹೊರಡಿಸಿದ್ದಾರೆ.