SUDDIKSHANA KANNADA NEWS/ DAVANAGERE/DATE:03_09_2025
ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಸಿಸ್ಟಂ ಬಳಕೆಗೆ ಅವಕಾಶ ನೀಡುವುದಿಲ್ಲ. ಈಗಿರುವ ಆದೇಶ ಮುಂದುವರಿಯುತ್ತದೆ ಎಂದು ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: “ಪೊಮೆರೇನಿಯನ್ ನಾಯಿ”ಗೆ ಎಸ್ಪಿ ಹೋಲಿಸಿದ್ದು ಬಿ. ಪಿ. ಹರೀಶ್ ಮನಸ್ಥಿತಿ ತೋರಿಸುತ್ತೆ: ಡಾ. ಪ್ರಭಾ ಮಲ್ಲಿಕಾರ್ಜುನ್ ತಿರುಗೇಟು!
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಣೇಶೋತ್ಸವ ಮೆರವಣಿಗೆ ವೇಳೆ ಯಾವುದೇ ಕಾರಣಕ್ಕೂ ಡಿಜೆ ಸಿಸ್ಟಂ ಬಳಕೆಗೆ ಅನುಮತಿ ನೀಡುವುದಿಲ್ಲ. ವಿನೋಬನಗರದ ವರಸಿದ್ಧಿ ವಿನಾಯಕ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯು ಗುರುವಾರ ನಡೆಯಲಿದ್ದು, ಇದಕ್ಕೂ ಅನುಮತಿ ಕೊಟ್ಟಿಲ್ಲ. ಯಾವ ಗಣೇಶೋತ್ಸವ ಮೆರವಣಿಗೆಗೂ ಡಿಜೆ ಸಿಸ್ಟಂಗೆ ಅನುಮತಿ ಕೊಡುವುದಿಲ್ಲ, ಮುಂದೆಯೂ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ನಮ್ಮ ಕೆಲಸ ಮಾತನಾಡುತ್ತದೆ. ನಾನು ಹೆಚ್ಚು ಮಾತನಾಡಲ್ಲ. ಡಿಜೆ ನೀಡುವ ವಿಚಾರದಲ್ಲಿನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಜಿಲ್ಲಾಡಳಿತ ತೆಗೆದುಕೊಂಡಿರುವ ನಿರ್ಧಾರಕ್ಕೆ ಬದ್ಧ ಎಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಇದು ಒಬ್ಬರ ನಿರ್ಧಾರ ಅಲ್ಲ. ಜಿಲ್ಲಾ ಪೊಲೀಸ್ ಇಲಾಖೆ, ಸಮಾಜದ ಹಿರಿಯ ಮುಖಂಡರ ಜೊತೆ ಸಮಾಲೋಚನೆ ನಡೆಸಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ನಾವೆಲ್ಲರೂ ಸೇರಿ ಒಟ್ಟಾಗಿ ತೆಗೆದುಕೊಂಡ ನಿರ್ಧಾರ ಆಗಿದ್ದು, ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸರ್ಕಾರದ ಆದೇಶ ಪಾಲನೆ ಮಾಡುತ್ತೇವೆ. ಜನರ ಆರೋಗ್ಯ ದೃಷ್ಟಿ ಗಮನದಲ್ಲಿಟ್ಟುಕೊಳ್ಳಬೇಕು. ಮನೋಬಲ, ಮನಸ್ಥಿತಿ ಕಾಪಾಡಲೇಬೇಕು. ಅಧಿಕಾರಿಯಾಗಿ ಹೆಚ್ಚು ಮಾತನಾಡಲು ಹೋಗಲ್ಲ. ನಮ್ಮ ಕಾರ್ಯ ಮಾತನಾಡಬೇಕೇ ಹೊರತು ಮಾತು ಮಾತನಾಡಲ್ಲ ಎಂದು ಗಂಗಾಧರ ಸ್ವಾಮಿ ಹೇಳಿದರು.