ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಪ್ಲಾಸ್ಟಿಕ್ ಕಪ್, ಮೇಣಲೇಪಿತ ಪೇಪರ್ ಲೋಟ, ಚಮಚ, ಸ್ಟ್ರಾ, ಕ್ಯಾರಿ ಬ್ಯಾಗ್ ನಿಷೇಧ

On: December 27, 2024 9:23 AM
Follow Us:
---Advertisement---

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬೀದಿಬದಿ ವ್ಯಾಪಾರಸ್ಥರು, ತಿಂಡಿ-ತಿನಿಸು ಮಾರಾಟಗಾರರು, ಹೋಟೆಲ್ ಉದ್ದಿಮೆದಾರರು ಕಾಫಿ, ಚಹಾ, ಪಾನೀಯ, ತಿಂಡಿ-ತಿನಿಸು ಆಹಾರ ಪಧಾರ್ಥಗಳಿಗೆ ಕಪ್, ಮೇಣಲೇಪಿತ ಪೇಪರ್ ಕಪ್ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಚಮಚ, ಸ್ಟ್ರಾ ಗಳ ಬಳಕೆಯನ್ನು ನಿಷೇದಿಸಲಾಗಿದೆ.

ನಗರದ ಯಾವುದೇ ಬೀದಿ ಬದಿ ಮಾರಾಟಗಾರರು, ಹೋಟೆಲ್ ಉದ್ದಿಮೆದಾರರು ಪ್ಲಾಸ್ಟಿಕ್ ಕಪ್, ಮೇಣಲೇಪಿತ ಪೇಪರ್ ಕಪ್ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಚಮಚ, ಸ್ಟ್ರಾಗಳನ್ನು ಉಪಯೋಗಿಸದಂತೆ ಸೂಚಿಸಿದ್ದು, ನಗರದ ಸ್ವಚ್ಛತೆ, ಸೌಂದರ್ಯ ಹಾಗೂ ನಗರದ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯ ಕಾಪಾಡಲು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಉಪಯೋಗಿಸುತ್ತಿರುವುದು ಕಂಡು ಬಂದಲ್ಲಿ ನಿಷೇಧಿತ ಪ್ಲಾಸ್ಟಿಕ್ ಸಾಮಗ್ರಿಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ ನಿಯಮಾನುಸಾರ ದಂಡ ವಿಧಿಸಲಾಗುವುದು. ಆದ್ದರಿಂದ ಎಲ್ಲಾ ಬೀದಿ ಬದಿ ಮಾರಾಟಗಾರರು, ಹೋಟೆಲ್ ಉದ್ದಿಮೆದಾರರು ತ್ಯಾಜ್ಯನಿರ್ವಹಣಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment