Home ಉದ್ಯೋಗ ವಾರ್ತೆ ಜಿಟಿಟಿಸಿ ಕೇಂದ್ರದಲ್ಲಿ ಉದ್ಯೋಗಾಧಾರಿತ ವಿವಿಧ ಅಲ್ಪಾವಧಿ ಕೋರ್ಸ್‌ಗಳ ತರಬೇತಿ: ಅರ್ಜಿ ಆಹ್ವಾನ
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

ಜಿಟಿಟಿಸಿ ಕೇಂದ್ರದಲ್ಲಿ ಉದ್ಯೋಗಾಧಾರಿತ ವಿವಿಧ ಅಲ್ಪಾವಧಿ ಕೋರ್ಸ್‌ಗಳ ತರಬೇತಿ: ಅರ್ಜಿ ಆಹ್ವಾನ

Share
ಕೇಂದ್ರ
Share

ಬಳ್ಳಾರಿ: ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಡಿಯಲ್ಲಿ ಬರುವ ಬಳ್ಳಾರಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು (GTTC) 2026ನೇ ಸಾಲಿನ ವಿವಿಧ ಉದ್ಯೋಗಾಧಾರಿತ ಅಲ್ಪಾವಧಿ ತರಬೇತಿ ಕೋರ್ಸ್‌ಗಳಿಗೆ ಚಾಲನೆ ನೀಡುತ್ತಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ಕಂಪ್ಯೂಟರ್ ಅಪ್ಲಿಕೇಶನ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗಗಳಲ್ಲಿ 2 ರಿಂದ 4 ತಿಂಗಳ ಅವಧಿಯ ತರಬೇತಿಯನ್ನು ನೀಡಲಾಗುತ್ತದೆ. ಈ ಕೇಂದ್ರದಲ್ಲಿ ಆಧುನಿಕ ತಂತ್ರಜ್ಞಾನದ ಸುಸಜ್ಜಿತ ಪ್ರಯೋಗಾಲಯಗಳಿದ್ದು, ನುರಿತ ತರಬೇತುದಾರರಿಂದ ನೇರ ಪ್ರಾಯೋಗಿಕ ಶಿಕ್ಷಣ ದೊರೆಯಲಿದೆ.

ಅರ್ಹತೆ: 8ನೇ ತರಗತಿಯಿಂದ ಹಿಡಿದು ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ ಮತ್ತು ಬಿ.ಇ ಪದವೀಧರರು ತಮ್ಮ ಆಸಕ್ತಿಯ ಕೋರ್ಸ್‌ಗಳಿಗೆ ಸೇರಬಹುದಾಗಿದೆ.

ಸಂಪರ್ಕ ಮಾಹಿತಿ: ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಜಿಟಿಟಿಸಿ, ಐ.ಟಿ.ಐ ಕಾಲೇಜು ಆವರಣ, ಕಂಟೋನ್ ಮೆಂಟ್, ಬಳ್ಳಾರಿ ವಿಳಾಸಕ್ಕೆ ಭೇಟಿ ನೀಡಬಹುದು ಅಥವಾ ಮೊಬೈಲ್ ಸಂಖ್ಯೆ: 9620057086, 6361880236 ಗೆ ಕರೆ ಮಾಡಬಹುದು ಎಂದು ಪ್ರಾಂಶುಪಾಲರಾದ ಮುತ್ತಣ್ಣ ದರ್ಮಂತಿ ಅವರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *