SUDDIKSHANA KANNADA NEWS/ DAVANAGERE/ DATE:12-02-2025
ವಿಜಯಪುರ: ಭೀಮಾತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ನಟೋರಿಯಸ್ ಬಾಗಪ್ಪ ಹರಿಜನ ಅವರನ್ನು ಮಾಡಲಾಗಿದೆ. 8ರಿಂದ ಹತ್ತು ಮಂದಿ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಇಷ್ಟು ದಿನ ಶಾಂತವಾಗಿದ್ದ ಭೀಮಾ ತೀರ ಈಗ ಮತ್ತೆ ಬಾಗಪ್ಪ ಹರಿಜನ ಹತ್ಯೆಯಿಂದಾಗಿ ಆತಂಕ ಉಂಟು ಮಾಡಿದೆ. ನಡುರಸ್ತೆಯಲ್ಲಿ ಕುತ್ತಿಗೆ ಕೊಯ್ದು ಹಂತಕರು ಹತ್ಯೆ ಮಾಡಿದ್ದಾರೆ.
ಭೀಮಾ ತೀರದ ಕುಖ್ಯಾತಿಯ ಬಾಗಪ್ಪ ಹರಿಜನ ಕೊಲೆ ರವಿ ಅಗರಖೇಡ್ ಹತ್ಯೆಗೆ ಪ್ರತೀಕಾರ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೂರು ಆಯಾಮಗಳಲ್ಲಿಯೂ ತನಿಖೆ ನಡೆಯುತ್ತಿದೆ. ಚಂದಪ್ಪ ಅಣ್ಣ ಯಲ್ಲಪ್ಪ ಮಕ್ಕಳ ಮೇಲೆ ಅನುಮಾನ ಮೂಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಚಂದಪ್ಪ ಹರಿಜನ ಭೀಮಾ ತೀರದಲ್ಲಿ ಹವಾ ಸೃಷ್ಟಿಸಿದ್ದರು. ಈತನ ಮೇಲೆಯೂ ಹಲವು ಕೊಲೆ ಪ್ರಕರಣಗಳಿದ್ದವು. ಆದ್ರೆ, ಈ ಹತ್ಯೆ ಸ್ಥಳೀಯರು ನಡೆಸಿರುವ ಸಾಧ್ಯತೆ ಕಡಿಮೆ. ಹಣ ನೀಡಿ ಕೊಲೆ ಮಾಡಿಸಿರಬಹುದು ಎಂಬ ಆಯಾಮದಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾತ್ರಿ 8.50 ರ ಸುಮಾರಿಗೆ ಈ ಕೊಲೆ ನಡೆದಿರಬಹುದು ಎಂದು ಮಾಹಿತಿ ಸಿಕ್ಕಿದೆ. ವಿಜಯಪುರದ ರೇಡಿಯೋ ಹೌಸ್ ಬಳಿ ನಾಗಪ್ಪ ಹರಿಜನ ಬಾಡಿಗೆ ಮನೆಯಲ್ಲಿ ವಾಸವಿದ್ದ.