ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದಾವಣಗೆರೆ ಅಭಿವೃದ್ಧಿ ಸಹಿಸಲಾಗದೇ ಬಿ. ಪಿ. ಹರೀಶ್ ರಿಂದ ಹತಾಶೆ ಮಾತು: ಗಜೇಂದ್ರ ಜಗನ್ನಾಥ ಕಿಡಿಕಿಡಿ

On: September 3, 2025 4:03 PM
Follow Us:
---Advertisement---

SUDDIKSHANA KANNADA NEWS/ DAVANAGERE/DATE:03_09_2025

ದಾವಣಗೆರೆ: ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಮನೆತನ ಕಟಿಬದ್ಧವಾಗಿದ್ದು, ಹಗಲಿರುಳು ಶ್ರಮಿಸುತ್ತಿರುವುದರಿಂದ ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಹತಾಶೆಗೊಂಡಿದ್ದಾರೆ. ಹರಿಹರದಲ್ಲಿ ಅಭಿವೃದ್ಧಿ ಮಾಡದೇ ಬಿಜೆಪಿ ನಾಯಕರ ವಿರುದ್ಧವೇ ತೊಡೆ ತಟ್ಟಿ ಓಡಾಡುತ್ತಿರುವ ಹರೀಶ್ ಮೊದಲು ತನ್ನ ಕ್ಷೇತ್ರದ ಜನರ ಕಷ್ಟ, ನೋವಿಗೆ ಸ್ಪಂದಿಸಲಿ ಎಂದು ದಾವಣಗೆರೆ ಉತ್ತರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, 28 ಮತ್ತು 37ನೇ ವಾರ್ಡ್ ಪ್ರಬಲ ಟಿಕೆಟ್ ಆಕಾಂಕ್ಷಿ ಗಜೇಂದ್ರ ಜಗನ್ನಾಥ ಕಿಡಿಕಾರಿದ್ದಾರೆ.

READ ALSO THIS STORY: BIG BREAKING: ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ “ಪೊಮೆರೇನಿಯನ್ ನಾಯಿ” ಎಂದಿದ್ದ ಶಾಸಕ ಬಿ. ಪಿ. ಹರೀಶ್ ವಿರುದ್ಧ ಎಸ್ಪಿ ದೂರು!

ಶಾಮನೂರು ಕುಟುಂಬದ ಮೇಲೆ ಬಿ. ಪಿ. ಹರೀಶ್ ಮಾಡಿರುವ ಆರೋಪಗಳೆಲ್ಲವೂ ಸುಳ್ಳು. ಹರಿಹರ ತಾಲೂಕಿನಲ್ಲಿ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಶಾಸಕರಾದ ಬಳಿಕ ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡಿಲ್ಲ. ಬಿಜೆಪಿ ನಾಯಕರ ವಿರುದ್ಧ ನವದೆಹಲಿ, ಬೆಂಗಳೂರು, ಬೆಳಗಾವಿ, ದಾವಣಗೆರೆ ಸೇರಿದಂತೆ ಎಲ್ಲೆಂದರಲ್ಲಿ ಭಿನ್ನಮತೀಯ ಸಭೆಗೆ ಹೋಗುವ ಬಿ. ಪಿ. ಹರೀಶ್ ಗೆ ಶಾಮನೂರು ಶಿವಶಂಕರಪ್ಪರ ಕುಟುಂಬದ ಬಗ್ಗೆ ಮಾತನಾಡುವಷ್ಟು ನೈತಿಕತೆ ಉಳಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

ಎಸ್. ಎಸ್. ಮಲ್ಲಿಕಾರ್ಜುನ್ ಅವರು ಶಾಸಕರಾಗಿ, ಸಚಿವರಾಗಿ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅಪಾರ. ಕುಂದುವಾಡ ಕೆರೆ, ಗಾಜಿನ ಮನೆ, ಡಾಂಬರು, ಕಾಂಕ್ರಿಟ್ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಶ್ರಮಿಸುತ್ತಲೂ ಇದ್ದಾರೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಯಾವಾಗಲೂ ಬೆಂಕಿ ಹಚ್ಚುವ ಗುಣ ಹೊಂದಿರುವ ಬಿ. ಪಿ. ಹರೀಶ್, ತನ್ನ ಪಕ್ಷದ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹಾಗೂ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪರ ವಿರುದ್ಧ ಮಸಲತ್ತು, ಸಂಚು ರೂಪಿಸಿದ್ದಂಥವರು. ಇಂಥವರ ಯೋಗ್ಯತೆ ಏನು ಎಂಬುದು ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ ಏನೆಲ್ಲಾ ಮಾತನಾಡಿದ್ದಾರೆ ಎಂಬುದನ್ನು ಹರೀಶ್ ನೆನಪಿಸಿಕೊಳ್ಳಲಿ. ಅದನ್ನು ಬಿಟ್ಟು ತನ್ನ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಬೇರೆಯವರ ತಟ್ಟೆಯಲ್ಲಿ ನೊಣ ಹುಡುಕುವಂಥ ನಡವಳಿಕೆ ಬದಲಿಸಿಕೊಳ್ಳಲಿ. ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರರ ಚೇಲಾನಂತೆ ವರ್ತಿಸುವುದನ್ನು ಬಿಟ್ಟು ಹರಿಹರ ಕ್ಷೇತ್ರದ ಬಗ್ಗೆ ಗಮನ ಹರಿಸಲಿ ಎಂದು ಗಜೇಂದ್ರ ಜಗನ್ನಾಥ ಅವರು ಪತ್ರಿಕಾ ಹೇಳಿಕೆಯಲ್ಲಿ ಕಿಡಿಕಾರಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment