ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಬಿಜೆಪಿ ಶಿಸ್ತಿನ “ಸಿಪಾಯಿ”, ಸಂಘಟನಾ “ಚತುರ” ಆವರಗೆರೆ ರುದ್ರೇಶ್

On: July 13, 2025 11:01 AM
Follow Us:
ಸಂಘ
---Advertisement---

SUDDIKSHANA KANNADA NEWS/ DAVANAGERE/ DATE_13_07_2025

ದಾವಣಗೆರೆ: ಬಿಜೆಪಿಗೆ ಯುವಶಕ್ತಿಯೇ ಆಧಾರ. ಮೊದಲಿನಿಂದಲೂ ಭಾರತೀಯ ಜನತಾ ಪಕ್ಷದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ಪಕ್ಷಕ್ಕಾಗಿ ಹಗಲಿರುಳು ದುಡಿಯುವವರೇ ಯುವ ನಾಯಕರು. ಸಂಘಟನಾ ಚತುರ, ಪಕ್ಷ ನಿಷ್ಠೆ ಹೊಂದಿರುವ ಆವರಗೆರೆ ರುದ್ರೇಶ್ ಕೇಸರಿ ಪಡೆಯ ಯುವನಾಯಕ.

ಆವರಗೆರೆಯ ಮಹೇಶ್ವರಪ್ಪ ಮತ್ತು ಕಲ್ಲಮ್ಮ ದಂಪತಿಯ ಪುತ್ರ ರುದ್ರೇಶ್. ಅಜ್ಜನಗೌಡ್ರು ಮಾರ್ಗದರ್ಶನ, ಆಶೀರ್ವಾದದಿಂದ ರಾಜಕಾರಣ ಮಾಡುತ್ತಿರುವ ರುದ್ರೇಶ್ ಆವರಗೆರೆ ರುದ್ರೇಶ್ ಅಂತಾನೇ ಪ್ರಸಿದ್ಧಿ. ದಾವಣಗೆರೆಯ
ಎಲ್ಲಾ ನಾಯಕರನ್ನು ಸೂಜಿಗಲ್ಲಿನಂತೆ ಸೆಳೆಯುವ ಯುವ ಧುರೀಣ.

READ ALSO THIS STORY: ಒಂದಾಗೋಣ ಬಾ: ನಾನೊಂದು ತೀರ ನೀನೊಂದು ತೀರ ಆಗಿ ವಿಚ್ಛೇದನ ಕೋರಿದ್ದ 23 ಜೋಡಿ ಮತ್ತೆ ವೈವಾಹಿಕ ಜೀವನಕೆ…!

ಮೋದಿ ಭಕ್ತ:

ಪ್ರಧಾನಿ ನರೇಂದ್ರ ಮೋದಿಯ ಪರಮ ಭಕ್ತ ಆವರಗೆರೆ ರುದ್ರೇಶ್. ಮೊದಲಿನಿಂದಲೂ ಹಿಂದುತ್ವ, ಬಿಜೆಪಿ ತತ್ವ, ಸಿದ್ಧಾಂತಗಳನ್ನು ಒಪ್ಪಿ ದುಡಿಯುತ್ತಿರುವ ರುದ್ರೇಶ್ ಪಕ್ಷ ನಿಷ್ಠೆಗೆ ಹೆಸರುವಾಸಿ. ಕೆಲವರು ಬಿಜೆಪಿ ಹೆಸರು ಹೇಳಿಕೊಂಡು ಹಣ ಮಾಡಿರುವುದು ಹಳೆಯ ವಿಚಾರ. ಪಕ್ಷದ ವಿಚಾರ ಬಂದರೆ ತನಗೆ ವಹಿಸಿದ ಜವಾಬ್ದಾರಿ ಚಾಚೂ ತಪ್ಪದೇ ನಿರ್ವಹಿಸುವುದಕ್ಕೆ ಖ್ಯಾತಿ ಪಡೆದಿದ್ದಾರೆ. ಮೊದಲಿನಿಂದಲೂ ನರೇಂದ್ರ ಮೋದಿ ಅವರ ಭಾಷಣ, ಬದುಕಿನ ಹಾದಿ, ತತ್ವ, ಸಿದ್ಧಾಂತ, ಆದರ್ಶಗಳೆಂದರೆ ಅಚ್ಚುಮೆಚ್ಚು. ಮೋದಿ ಅವರು ಮುಖ್ಯಮಂತ್ರಿ ಆದಾಗಿನಿಂದಲೂ ಅವರೆಂದರೆ ತುಂಬಾನೇ ಇಷ್ಟ.

2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಎಂಬಂತೆ ಬಿಂಬಿತವಾಗುತ್ತಿದ್ದಂತೆ ಯುವ ಸಮುದಾಯದಲ್ಲಿ ಕಿಚ್ಚು ಬಡಿದೆಬ್ಬಿಸಿದ್ದರು. ಮೋದಿ ಅವರು ಪ್ರಧಾನಿಯಾಗಲು ದೇಶದೆಲ್ಲೆಡೆ ಕೊಡುಗೆ ಅಪಾರ. ತನ್ನ ಕೈಯಲ್ಲಾದಷ್ಟು, ಹಗಲಿರುಳು ಎಷ್ಟು ಸಾಧ್ಯವೋ ಅಷ್ಟು ಬಿಜೆಪಿ ಮತ ಬರುವಂತೆ ಮಾಡುವಲ್ಲಿ ಯಶಸ್ವಿಯಾದವರು. ಆಗಿನಿಂದಲೂ ಎಲ್ಲರ ರುದ್ರೇಶ್ ಗಮನ ಸೆಳೆದರು.

ಅಜ್ಜಯ್ಯ ಗೌಡ್ರೇ ಗುರುಗಳು:

ಇನ್ನು ಆವರಗೆರೆಯಲ್ಲಿ ಅಜ್ಜಯ್ಯ ಗೌಡ್ರು ಅಂದ್ರೆ ಕಿಮ್ಮತ್ತಿದೆ. ಮಾತಿಗೆ ಬೆಲೆ ಇದೆ. ಯಾವುದಕ್ಕೂ ಆಸೆ ಪಡದೇ ತನಗೆ ವಹಿಸಿದ ಜವಾಬ್ದಾರಿ ನಿರ್ವಹಿಸುವ ಜೊತೆಗೆ ಪಕ್ಷದ ವಿರುದ್ಧ ಹೋದವರಲ್ಲ ಅಜ್ಜಯ್ಯ ಗೌಡ್ರ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ಆವರಗೆರೆ ರುದ್ರೇಶ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅವರ ಮಾರ್ಗದರ್ಶನ, ಆಶೀರ್ವಾದದಿಂದ ಮುನ್ನಡೆಯುತ್ತಿದ್ದೇವೆ. ಎಲ್ಲೇ ಪ್ರತಿಭಟನೆ, ರ್ಯಾಲಿ, ಪಕ್ಷದ ಕಾರ್ಯಕ್ರಮಗಳಿರಲಿ ಹಾಜರಾಗಿಬಿಡುವ ಅಜ್ಜಯ್ಯ ಗೌಡ್ರ ಜೊತೆ ಮುಂಚೂಣಿಯಲ್ಲಿ ಇದ್ದೇನೆ ಅಂತಾರೆ ಆವರಗೆರೆ ರುದ್ರೇಶ್.

ಆವರೆಗೆರೆ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಜೆಪಿ ಸಂಘಟಿಸುವ ಮಹತ್ತರ ಪಾತ್ರ ವಹಿಸಿರುವ ರುದ್ರೇಶ್ ಅವರು ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮಾರ್ಗದರ್ಶನ ಹಾಗೂ ದಾವಣಗೆರೆ ಜಿಲ್ಲೆಯ ಹಿರಿಯ ಬಿಜೆಪಿ ನಾಯಕರ ನೇತೃತ್ವದಲ್ಲಿ ಪಕ್ಷ ಸಂಘಟನೆಗೆ ದುಡಿಯುತ್ತಿದ್ದಾರೆ. ಯಾವುದಕ್ಕೂ ಆಸೆ ಪಡದೇ ಪ್ರಾಮಾಣಿಕ ಕೆಲಸ ಮಾಡುವ ಬಿಜೆಪಿಯ ಶಿಸ್ತಿನ ಸಿಪಾಯಿ.

ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಕೆಲಸ:

ಮೊದಲಿನಿಂದಲೂ ಬಿಜೆಪಿಯಲ್ಲಿಯೇ ಗುರುತಿಸಿಕೊಂಡಿರುವ ಆವರಗೆರೆ ರುದ್ರೇಶ್ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ತಮ್ಮ ಕೈಯಲ್ಲಾದಷ್ಟು ಕೊಡುಗೆ ನೀಡಿದ್ದಾರೆ. ಗೆಲುವಿಗೆ ಹಗಲಿರುಳು ಓಡಾಡಿದ್ದಾರೆ. ಯಾವ ಕೆಲಸ ವಹಿಸಿದರೂ ನಿಭಾಯಿಸುವವರೆಗೆ ವಿರಮಿಸುವುದಿಲ್ಲ. ಕೆಲಸ ಪೂರ್ಣಗೊಳಿಸಿ ಜವಾಬ್ದಾರಿ ವಹಿಸಿದವರಿಗೆ ಮಾಹಿತಿ ನೀಡುವ ಛಾತಿ ಎಲ್ಲರಿಗೂ ಇಷ್ಟವಾಗುತ್ತದೆ.

READ ALSO THIS STORY: ಡಾ. ಜಿ. ಎಂ. ಸಿದ್ದೇಶ್ವರರ 74ನೇ ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಕೆ ಪತ್ರ!

ಉತ್ತರ ವಿಧಾನಸಭಾ ಕ್ಷೇತ್ರದ ರೈತ ಮೋರ್ಚಾ ಉಪಾಧ್ಯಕ್ಷರಾಗಿಯೂ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಾಜಿ ಸಂಸದ ಡಾ. ಜಿ. ಎಂ. ಸಿದ್ದೇಶ್ವರ್, ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ಲೋಕಿಕೆರೆ ನಾಗರಾಜ್, ಅಜ್ಜನಗೌಡ್ರು ಮಾರ್ಗದರ್ಶನದಲ್ಲಿ ನಡೆಯುತ್ತಿರುವ ರುದ್ರೇಶ್ ಯುವಕರ ಕಣ್ಮಣಿ.

ಗಣೇಶೋತ್ಸವ ಆಯೋಜಕರು:

ಗಣೇಶೋತ್ಸವ ಆಚರಣೆ ವಿಚಾರ ಬಂದರೆ ಮೊದಲ ಹೆಸರು ಆವರಗೆರೆಯಲ್ಲಿ ನೆನಪಾಗುವುದೇ ರುದ್ರೇಶ್. ಯುವಕರನ್ನು ಸಂಘಟಿಸಿ ಗಣೇಶೋತ್ಸವ ಹಬ್ಬವನ್ನು ವಿಜೃಂಭಣೆಯಿಂದ ನಡೆಸುತ್ತಾರೆ. ಇದರಲ್ಲಿ ರುದ್ರೇಶ್ ಶ್ರಮ ಅಪಾರ.

ಸ್ನೇಹಜೀವಿ:

ಇನ್ನು ಆವರಗೆರೆ ಸ್ನೇಹಜೀವಿ ಯುವಕರ ಸಂಘದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿರುವ ರುದ್ರೇಶ್ ಸ್ನೇಹಜೀವಿ. ಪ್ರತಿಯೊಬ್ಬರನ್ನೂ ಸ್ನೇಹದಿಂದಲೇ ಮಾತನಾಡಿಸುವ, ಹಿರಿಯರಿಗೆ ಗೌರವ ಕೊಡುವ, ಸಂಘಟನೆಯಲ್ಲಿ ನಿಪುಣರಾಗಿದ್ದಾರೆ. ಈ ಯುವ ನಾಯಕನಿಗೆ ಜನುಮದಿನದ ಶುಭಾಶಯಗಳನ್ನು ಸ್ನೇಹ ಬಳಗ ಯುವಕರ ಸಂಘದವರು, ಸ್ನೇಹಿತರು ಸೇರಿದಂತೆ ಹಲವಾರು ಮಂದಿ ಕೋರಿದ್ದಾರೆ. ಯುವ ನಾಯಕನಿಗೆ ರಾಜಕಾರಣದಲ್ಲಿ ಮತ್ತಷ್ಟು ಅವಕಾಶ ಹುಡುಕಿ ಬರಲಿ, ಆರೋಗ್ಯ, ಆಯಸ್ಸು, ಐಶ್ವರ್ಯ ಸಿಗುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment