ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ತನ್ನ ಕುತಂತ್ರಿ ಬುದ್ದಿಯನ್ನು ಮತ್ತೆ ಪ್ರದರ್ಶಿಸಿದ ಆಸ್ಟ್ರೇಲಿಯಾ

On: December 24, 2024 6:58 PM
Follow Us:
---Advertisement---

ಬಾಕ್ಸಿಂಗ್​ ಡೇ ಟೆಸ್ಟ್​ ಪಂದ್ಯಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಮೆಲ್ಬರ್ನ್​ನಲ್ಲಿ ಬೀಡು ಬಿಟ್ಟಿರುವ ಉಭಯ ತಂಡಗಳು, ಅಭ್ಯಾಸದ ಅಖಾಡದಲ್ಲಿ ಬೆವರಿಳಿಸುತ್ತಿದ್ದಾರೆ. ಗೆಲುವೊಂದೇ ಗುರಿ ಎಂಬ ಮಂತ್ರದೊಂದಿಗೆ ತೆರೆ ಹಿಂದೆ ನಾನಾ ತಂತ್ರಗಳನ್ನೇ ಅನುಸರಿಸ್ತಿವೆ. ಆಸ್ಟ್ರೇಲಿಯಾ ಮಾತ್ರ ಗೆಲುವಿಗಾಗಿ ಬೇರೆಯದ್ದೇ ದಾರಿಯ ಮೊರೆ ಹೋಗಿದೆ.

ಹೌದು! ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಶತಯ ಗತಾಯ ಗೆಲ್ಲಬೇಕೆಂಬ ಹಠದಲ್ಲಿರುವ ಆಸ್ಟ್ರೇಲಿಯಾ, ಸಕಲ ಸಿದ್ದತೆ ನಡೆಸ್ತಿದೆ. ಏನಾದರೂ ಮಾಡಿ ಟೀಮ್ ಇಂಡಿಯಾವನ್ನು ಸೋಲಿಸಬೇಕೆಂಬ ಹಠದಲ್ಲಿದೆ. ಮ್ಯಾಚ್ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾವನ್ನು ಖೆಡ್ಡಾಗೆ ಕೆಡವಲು ಕುತಂತ್ರಿ ಬುದ್ಧಿ ತೋರಿಸಿದೆ. ಎಲ್ಲಾ ಟೀಮ್​​ಗಳು ಗೇಮ್​ನಲ್ಲಿ ಆಟವಾಡಿ ಗೆಲ್ಲೋಕೆ ನೋಡಿದ್ರೆ, ಈ ಕಾಂಗರೂಗಳು ಪ್ರ್ಯಾಕ್ಟೀಸ್ ಪಿಚ್​ನಲ್ಲೇ ಆಟವಲ್ಲ. ಕಳ್ಳಾಟ ಶುರು ಮಾಡಿದ್ದಾರೆ.

ಬಳಸಿದ ಬೀಸಾಕಿರುವ ಕಳಪೆ ಪಿಚ್​ನಲ್ಲೇ ಟೀಮ್ ಇಂಡಿಯಾಗೆ ಅಭ್ಯಾಸ ಮಾಡಲು ಆಸ್ಟ್ರೇಲಿಯಾ ನೀಡಿದೆ. ಟೀಮ್ ಇಂಡಿಯಾ ಅಭ್ಯಾಸಕ್ಕೆ ನೀಡಿರೋ ಈ ಪಿಚ್​ನಲ್ಲಿ ಪೇಸ್​, ಬೌನ್ಸ್ ಅನ್ನೋ ಅಂಶವೇ ಇಲ್ಲ. ಅಕ್ಷರಶಃ ಡೆಡ್​ ಪಿಚ್​ ಇದು. ಅಸಲಿ ಮ್ಯಾಚ್​​ನಲ್ಲಿ ಬಿರುಗಾಳಿಯಂತೆ ಬಂದ್ರೆ, ಭಾರತದ ಅಭ್ಯಾಸಕ್ಕೆ ನೀಡಿರೋ ಪಿಚ್​ನಲ್ಲಿ ಬಾಲ್ ಲೋ ಲೆವೆಲ್​​ನಲ್ಲೇ ಬ್ಯಾಟ್​ಗೆ ಬರ್ತಿತ್ತು. ಶಾರ್ಟ್ ಬಾಲ್​​​​ ಸಹ ಸೊಂಟಕ್ಕಿಂತ ಮೇಲೆ ಪುಟಿಯುತ್ತಿರಲಿಲ್ಲ. ಪಿಚ್​ನಲ್ಲಿನ ಬೌನ್ಸ್ ಅರ್ಥ ಮಾಡಿಕೊಳ್ಳಲು ಪರದಾಡಿದ ರೋಹಿತ್, ಕೆ.ಎಲ್.ರಾಹುಲ್​ ಇಂಜುರಿಗೆ ತುತ್ತಾಗಿದ್ದರು.

ಕ್ರಿಕೆಟ್ ಆಸ್ಟ್ರೇಲಿಯಾದ ಈ ತಾರತಮ್ಯ ನೀತಿಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಷ್ಟೇ ಅಲ್ಲ. ವಿವಾದಕ್ಕೂ ಎಡೆ ಮಾಡಿಕೊಟ್ಟಿದೆ. ಪ್ರವಾಸಿ ತಂಡಕ್ಕೊಂದು ನ್ಯಾಯ? ಹೋಮ್​ ಟೀಮ್​ಗೊಂದು ನ್ಯಾಯ? ಅಂದ್ರೆ ಹೇಗೆ ಹೇಳಿ? ಇದಕ್ಕೂ ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್​ನ ಪಿಚ್ ಕ್ಯುರೇಟರ್ ಮ್ಯಾಟ್ ಪೇಜ್, ತಮ್ಮದೇ ಆದ ಸ್ಪಷ್ಟನೆ ನೀಡಿದ್ದಾರೆ.

ನಮ್ಮ ನಿಯಮದ ಪ್ರಕಾರ ಪಂದ್ಯ ಶುರುವಾಗುವ 3 ದಿನ ಮುಂಚಿತವಾಗಿ ಹೊಸ ಪಿಚ್ ನೀಡುವ ಕ್ರಮವಿದೆ. ನಮಗೆ ಟೀಮ್ ಇಂಡಿಯಾ ಅಭ್ಯಾಸದ ವೇಳಾಪಟ್ಟಿ ಕೈಗೆ ಬಂದಿದ್ದು, ಪಂದ್ಯ ಆರಂಭಕ್ಕೂ 3 ದಿನ ಮುನ್ನ ಹೊಸ ಪಿಚ್ ನೀಡುತ್ತೇವೆ. ಈ ನಿಯಮ ಎಲ್ಲಾ ತಂಡಗಳಿಗೂ ಅನ್ವಯವಾಗುತ್ತದೆ. ಟೀಮ್ ಇಂಡಿಯಾ ಇನ್ನು ಯಾವಾಗ ನೆಟ್ಸ್​ನಲ್ಲಿ ಅಭ್ಯಾಸ ನಡೆಸಿದರೂ, ಹೊಸ ಪಿಚ್ ನೀಡಲಾಗುತ್ತದೆ ಎಂದರು.

Join WhatsApp

Join Now

Join Telegram

Join Now

Leave a Comment