ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

School: ಸರ್ಕಾರಿ ಶಾಲೆಯ ಬಡಮಕ್ಕಳಿಗೆ ನೆರವಾದ ಭಗತ್ ಸಿಂಗ್ ಯುವ ಬ್ರಿಗೇಡ್ ಫೌಂಡೇಶನ್: 230 ಮಕ್ಕಳಿಗೆ ನೋಟ್ ಬುಕ್ ವಿತರಿಸಿ ಮಾದರಿ ಕಾರ್ಯ

On: August 17, 2023 3:22 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:17-08-2023

ದಾವಣಗೆರೆ: ಸರ್ಕಾರಿ ಶಾಲೆ(School)ಯಲ್ಲಿ ಓದುವ ಮಕ್ಕಳು ಅಷ್ಟೇನೂ ಸಿರಿವಂತರಲ್ಲ. ಅಲ್ಲಿ ಬಡ ವಿದ್ಯಾರ್ಥಿಗಳು ಬರುತ್ತಾರೆ. ಅಂಥವರಿಗೆ ನೆರವಿಗೆ ನಿಂತಿದೆ ಭಗತ್ ಸಿಂಗ್ ಯುವ ಬ್ರಿಗೇಡ್ ಫೌಂಡೇಶನ್. ಎಂದಿಗೂ ಪ್ರಚಾರ ಬಯಸದ ಸಂಸ್ಥೆ ಇದು. ಮಕ್ಕಳಿಗೆ ತನ್ನ ಕೈಯಲ್ಲಾದಷ್ಟು ಸಹಾಯ ಮಾಡುತ್ತಲೇ ಬರುತ್ತಿದೆ. ಸರ್ಕಾರಿ  ಶಾಲೆ(School)ಗಳಲ್ಲಿ ಅಭ್ಯಾಸ ಮಾಡುವ ಮಕ್ಕಳ ನೆರವಿಗೆ ಧಾವಿಸುತ್ತಲೇ ಇದೆ.

ಅದೇ ರೀತಿಯಲ್ಲಿ ತಾಲೂಕಿನ ಹಳೇ ಬಾತಿ ಗುಡ್ಡದ ಕ್ಯಾಂಪ್ ಸರ್ಕಾರಿ ಪಾಥಮಿಕ ಶಾಲೆ(School)ಯಲ್ಲಿ ನೋಟ್ ಬುಕ್ ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರೂ ಆದ ಪಾಲಿಕೆ ಸದಸ್ಯ ಪ್ರಸನ್ನಕುಮಾರ ಅವರು ಮಾತನಾಡಿ ಯುವ ಬ್ರಿಗೇಡ್ ಪ್ರಚಾರಕ್ಕಾಗಿ ಕಾರ್ಯನಿರ್ವಹಿಸದೆ ಸುಮಾರು 230 ವಿದ್ಯಾರ್ಥಿಗಳಿಗೆ ಅವಶ್ಯಕತೆ ಇರುವ ಶಾಲೆಗೆ ನೋಟ್ ಬುಕ್‌ ಅನ್ನು ವಿತರಿಸುವ ಕೆಲಸವನ್ನು ಮಾಡುತ್ತಿದೆ. ವಿದ್ಯಾರ್ಥಿಗಳು ಏಕಲವ್ಯ ರೀತಿಯಲ್ಲಿ ಒಂದೇ ಗುರಿಯನ್ನು ನಿಶ್ಚಯ ಮಾಡಿಕೊಂಡ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನಹರಿಸುವಂತೆ ಸಲಹೆ ನೀಡಿದರು.

ಈ ಸುದ್ದಿಯನ್ನೂ ಓದಿ: 

Intelligence Dog : ಒಸಮಾ ಬಿನ್ ಲಾಡೆನ್ ಸಂಹಾರಕ್ಕೆ ಬಳಸಿದ್ದ ಶ್ವಾನ ದಾವಣಗೆರೆಯಲ್ಲಿ: ಅಪರಾಧಿಗಳಿಗೆ ನಡುಕ ಹುಟ್ಟಿಸಿರೋ ಚಾಣಾಕ್ಷ ಡಾಗ್ ಗೆ ಟ್ರೈನಿಂಗ್ ಹೇಗಿರುತ್ತೆ, ಆಹಾರ ಏನು, ಆಯಸ್ಸು ಎಷ್ಟು..? ಕುತೂಹಲಕಾರಿ ಸ್ಟೋರಿ ಇದು

 

ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ ಮಾತನಾಡಿ ಶಿಕ್ಷಣಕ್ಕೆ ಬಡತನ ಎಂದು ಅಡ್ಡಿಬರುವುದಿಲ್ಲ. ಸತತ ಪರಿಶ್ರಮ, ಆತ್ಮವಿಶ್ವಾಸದಿಂದ ಓದಿದರೆ ಭವಿಷ್ಯದಲ್ಲಿ ಉತ್ತಮ ಸಾಧಕರಾಗಬಹುದು ಎಂದು ಕಿವಿಮಾತು ಹೇಳಿದರು.

ಭಗತ್ ಸಿಂಗ್ ಯುವ ಬ್ರಿಗೇಡ್ ಸಮಾಜ ಸೇವೆಗೆ ಮಾದರಿ ಆಗಿದೆ. ಶಿಕ್ಷಣದಿಂದ ಯಾರೂ ಕೂಡ ವಂಚಿತರಾಗಬಾರದೆಂಬ ಉದ್ದೇಶವನ್ನು ಇಟ್ಟುಕೊಂಡು ಅವಶ್ಯಕತೆ ಇರುವ ಸರ್ಕಾರಿ ಶಾಲೆ (School) ಮಕ್ಕಳಿಗೆ ನೋಟ್ ಬುಕ್ ವಿತರಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕೆಲಸಗಳು ಮುಂದುವರಿಯಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಭಗತ್ ಸಿಂಗ್ ಯುವ ಬ್ರಿಗೇಡ್ ಫೌಂಡೇಶನ್ ನ ಅಧ್ಯಕ್ಷ ಜಿ. ಪಿ. ಸಚಿನ್ ಕುಮಾರ್, ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಚಿಗಟೇರಿ, ಸದಸ್ಯರಾದ ಗುರು, ಶಾಮ್ ಸುಂದರ್, ಸಂತೋಷ್, ಪ್ರಶಾಂತ್, ಮಧು, ಕಿಶನ್ ಅಜಯ್, ಅರುಣ್, ಶಾಲೆಯ ಮುಖ್ಯೋಪಾಧ್ಯಾಯರಾದ ಹನುಮಕ್ಕ, ರವಿಶಂಕರ್, ಶಿಕ್ಷಕ ವೃಂದದವರು ಮತ್ತು ಮಕ್ಕಳು ಉಪಸ್ಥಿತರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment