Home ದಾವಣಗೆರೆ ಅಸ್ಸಾಂ ವ್ಯಕ್ತಿ ರಷ್ಯಾದಲ್ಲಿ ನಾಪತ್ತೆ, ಉಕ್ರೇನ್ ಯುದ್ಧಭೂಮಿಗೆ ಕಳುಹಿಸಿರುವ ಶಂಕೆ: ಸುರಕ್ಷಿತವಾಗಿ ಪತಿ ವಾಪಸ್ ಕರೆಸುವಂತೆ ಪ್ರಧಾನಿ ಮೋದಿ ಹಾಗೂ ಸಿಎಂ ಹಿಮಂತ ಬಿಸ್ವಾ ಶರ್ಮಾ ಬಳಿ ಪತ್ನಿಯ ಕಣ್ಣೀರಿನ ಮನವಿ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಅಸ್ಸಾಂ ವ್ಯಕ್ತಿ ರಷ್ಯಾದಲ್ಲಿ ನಾಪತ್ತೆ, ಉಕ್ರೇನ್ ಯುದ್ಧಭೂಮಿಗೆ ಕಳುಹಿಸಿರುವ ಶಂಕೆ: ಸುರಕ್ಷಿತವಾಗಿ ಪತಿ ವಾಪಸ್ ಕರೆಸುವಂತೆ ಪ್ರಧಾನಿ ಮೋದಿ ಹಾಗೂ ಸಿಎಂ ಹಿಮಂತ ಬಿಸ್ವಾ ಶರ್ಮಾ ಬಳಿ ಪತ್ನಿಯ ಕಣ್ಣೀರಿನ ಮನವಿ!

Share
ಅಸ್ಸಾಂ
Share

ಕಾಚಾರ್ (ಅಸ್ಸಾಂ): ಅಸ್ಸಾಂನ ಕಾಚಾರ್ ಜಿಲ್ಲೆಯ ವ್ಯಕ್ತಿಯೊಬ್ಬರು ಕೆಲಸದ ಆಮಿಷಕ್ಕೆ ಬಲಿಪಶುವಾಗಿ ರಷ್ಯಾದಲ್ಲಿ ನಾಪತ್ತೆಯಾಗಿದ್ದಾರೆ. ಅಜೆರ್ಬೈಜಾನ್‌ನಲ್ಲಿ ಉದ್ಯೋಗ ದೊರೆಯಲಿದೆ ಎಂದು ನಂಬಿಸಿ ಕರೆದೊಯ್ಯಲಾಗಿದ್ದು, ಬಳಿಕ ಅವರನ್ನು ರಷ್ಯಾ ಸೇನೆಗೆ ಬಲವಂತವಾಗಿ ಸೇರಿಸಿ ಉಕ್ರೇನ್ ಯುದ್ಧಭೂಮಿಗೆ ಕಳುಹಿಸಿರಬಹುದು ಎಂಬ ಗಂಭೀರ ಆತಂಕವನ್ನು ಅವರ ಕುಟುಂಬ ವ್ಯಕ್ತಪಡಿಸಿದೆ.

ಕಾಚಾರ್ ಜಿಲ್ಲೆಯ ತುಲಾರ್‌ಗ್ರಾಮ್ ಭಾಗ-1 ರ ನಿವಾಸಿ ಅಬ್ದುಲ್ ಮುಕ್ತಾದಿರ್ ಲಸ್ಕರ್ (ಮುನ್ನಾ) ಅಜೆರ್ಬೈಜಾನ್‌ಗೆ ತೆರಳಿದ್ದರು. ಆದರೆ ಕುಟುಂಬಸ್ಥರು ಪರಿಶೀಲಿಸಿದ ಪ್ರಯಾಣ ದಾಖಲೆಗಳ ಪ್ರಕಾರ, ಮುಂಬೈನಿಂದ ಬಾಕು ಮಾರ್ಗವಾಗಿ  ಮಾಸ್ಕೋಗೆ ಜುಲೈ 14ರಂದು ವಿಮಾನದ ಟಿಕೆಟ್ ಬುಕ್ ಮಾಡಲಾಗಿತ್ತು.

ಜುಲೈ 30ರಂದು ವಾಪಸ್ ಬರುವುದಕ್ಕೆ ರಿಟರ್ನ್ ಟಿಕೆಟ್ ಕೂಡ ಕಾಯ್ದಿರಿಸಲಾಗಿತ್ತು. ಆದರೆ ಅವರು ಭಾರತಕ್ಕೆ ವಾಪಸ್ ಬಂದರೆಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ರಷ್ಯಾದ ಮಿಲಿಟರಿ ಸಮವಸ್ತ್ರದಲ್ಲಿ ವಿದೇಶಿ ಪ್ರಜೆಗಳೊಂದಿಗೆ ಅಬ್ದುಲ್ ಮುಕ್ತಾದಿರ್ ಇರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಕುಟುಂಬದವರ ಆತಂಕ ಇಮ್ಮಡಿಸಿದೆ.

ಕಳೆದ ಆಗಸ್ಟ್ 26ರಂದು ಪತ್ನಿ ಸಲ್ಮಾ ಅವರೊಂದಿಗೆ ಕೊನೆಯದಾಗಿ ಮಾತನಾಡಿದ್ದ ಮುನ್ನಾ, ಆ ಬಳಿಕ ಸಂಪರ್ಕಕ್ಕೆ ಸಿಕ್ಕಿಲ್ಲ. ಸಣ್ಣ ಮಕ್ಕಳಾದ 3 ವರ್ಷದ ಮಗ ಹಾಗೂ 1 ವರ್ಷದ ಮಗಳೊಂದಿಗೆ ಅತಂತ್ರರಾಗಿರುವ ಪತ್ನಿ ಸಲ್ಮಾ, ಪತಿಯನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಲ್ಲಿ ಕಣ್ಣೀರಿನ ಮೂಲಕ ಮನವಿ ಮಾಡಿದ್ದಾರೆ.

ಕೆಲಸದ ಆಮಿಷ ಹಾಗೂ ವಂಚನೆ: ಅಜೆರ್ಬೈಜಾನ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ರಷ್ಯಾಕ್ಕೆ ಕರೆದೊಯ್ದು ಮೋಸ ಮಾಡಲಾಗಿದೆ ಎಂದು ಕುಟುಂಬ ಆರೋಪಿಸಿದೆ.

ಸೋಶಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್: ರಷ್ಯನ್ ಮಿಲಿಟರಿ ಸಮವಸ್ತ್ರದಲ್ಲಿ ಇತರ ವಿದೇಶಿ ಪ್ರಜೆಗಳ ಜತೆ ಅಬ್ದುಲ್ ಮುಕ್ತಾದಿರ್ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಸರ್ಕಾರಕ್ಕೆ ಕುಟುಂಬದ ಮನವಿ: ರಷ್ಯಾ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ, ನಾಪತ್ತೆಯಾಗಿರುವ ಮುಕ್ತಾದಿರ್ ಅವರನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಲಾಗಿದೆ.

Share
Related Articles