SUDDIKSHANA KANNADA NEWS/ DAVANAGERE/ DATE:16-03-2025
ದಾವಣಗೆರೆ: ದಾವಣಗೆರೆ ನಗರದ ಜಿದ್ದಾಜಿದ್ದಿನ ಕಣವಾದ ಪಿಎಲ್ ಡಿ ಬ್ಯಾಂಕ್ ನ ನಿರ್ದೇಶಕರ ಚುನಾವಣೆಯಲ್ಲಿ ಕಬ್ಬೂರು ಕ್ಷೇತ್ರದಿಂದ ಸ್ಪರ್ಧಿಸಿ ಅತ್ಯಂತ ಬಹುಮತದಿಂದ ಹೆಚ್. ಆರ್. ಅಶೋಕ್ ಗೋಪನಾಳ್ ಭರ್ಜರಿ ಜಯಭೇರಿ ಬಾರಿಸಿದ್ದಾರೆ.
ಅತ್ಯಂತ ಬಹುಮತದಿಂದ ಗೆದ್ದಿರುವ ಅಶೋಕ್ ಗೋಪಾನಾಳ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಎಚ್. ಆರ್. ಅಶೋಕ್ ಗೋಪನಾಳ್ ಅವರನ್ನು ಕೇಂದ್ರದ ಮಾಜಿ ಸಚಿವ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರ ಅವರು ಸನ್ಮಾನಿಸಿ ಗೌರವಿಸಿ, ಶುಭ ಕೋರಿದರು.
ಈ ಸಂದರ್ಭದಲ್ಲಿ ಶಿಮುಲ್ ಮಾಜಿ ಅಧ್ಯಕ್ಷ ಎಚ್. ಕೆ. ಪಾಲಾಕ್ಷಪ್ಪ, ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ಶ್ಯಾಗಳೇ ದೇವೇಂದ್ರಪ್ಪ, ಬೇತೂರು ಸಂಗನಗೌಡರು ಮತ್ತಿತರರು ಉಪಸ್ಥಿತರಿದ್ದರು.