SUDDIKSHANA KANNADA NEWS/DAVANAGERE/DATE:14_10_2025
ದಾವಣಗೆರೆ: ಎಸ್.ಟಿ.ಪಿ.ಐ, ಇಂಟೆಲ್ ಕಂಪನಿ ಹಾಗೂ ವಿಷನ್ ದಾವಣಗೆರೆ ಸಂಯುಕ್ತಾಶ್ರಯದಲ್ಲಿ ವಿವಿಧ ಕೋರ್ಸ್‍ಗಳ ಇಂಜಿನಿಯರಿಂಗ್ ಮತ್ತು ಎಂ.ಸಿ.ಎ, ಬಿ.ಸಿಎ ವಿದ್ಯಾರ್ಥಿಗಳಿಗಾಗಿ ಅಕ್ಟೋಬರ್ 15 ಮತ್ತು 16 ರಂದು ಕೃತಕ ಬುದ್ದಿಮತ್ತೆ ಭವಿಷ್ಯದ ಕಾರ್ಯಪಡೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಈ ಸುದ್ದಿಯನ್ನೂ ಓದಿ: ನಿರ್ಭಯದಿಂದ ಮುನ್ನಡೆದರೆ ಜೀವನದಲ್ಲಿ ಯಶಸ್ಸು ಸಾಧಿಸಲು, ನಾಯಕರಾಗಲು ಸಾಧ್ಯ: ಜಿ. ಬಿ. ವಿನಯ್ ಕುಮಾರ್
ಅಕ್ಟೋಬರ್ 15 ರಂದು ಬೆಳಗ್ಗೆ 10 ಗಂಟೆಗೆ ಬಿಐಇಟಿ ಆವರಣದ ಎಂಇ ಬ್ಲಾಕ್, ನಾಲ್ಕನೇ ಮಹಡಿಯ ಪ್ಲೇಸ್‍ಮೆಂಟ್ ಸೆಮಿನಾರ್ ಹಾಲ್‍ನಲ್ಲಿ ನಡೆಯಲಿದ್ದು ಆಸಕ್ತರುhttps;//rb.gy/2efs3a ಲಿಂಕ್ ಮೂಲಕ ನೊಂದಣಿ ಮಾಡಿಕೊಳ್ಳಬಹುದು.
ಅ.16 ರಂದು ಬೆಳಗ್ಗೆ 10 ಗಂಟೆಗೆ ಬಿಐಇಟಿ ಎಸ್.ಎಸ್.ಎಂ. ಸಾಂಸ್ಕೃತಿಕ ಸಭಾಂಗಣದಲ್ಲಿ ಕಾರ್ಯಗಾರ ನಡೆಯಲಿದೆ. ಆಸಕ್ತ ವಿದ್ಯಾರ್ಥಿಗಳು https;//h1.nu/1cAOA ಲಿಂಕ್ ಮೂಲಕ ನೊಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.