SUDDIKSHANA KANNADA NEWS/ DAVANAGERE/DATE:31_08_2025
ದಾವಣಗೆರೆ: ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಜಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
READ ALSO THIS STORY: ಡಿಜೆ ಸೌಂಡ್ ಸಿಸ್ಟಂ ಹೊತ್ತೊಯ್ಯುತ್ತಿದ್ದ ಲಾರಿ ಸೀಜ್: ಮೂವರ ವಿರುದ್ಧ ಕೇಸ್!
ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಮೆಹಬೂಬ್ ನಗರ ಪಿಒಪಿ ಕೆಲಸ ಮಾಡುತ್ತಿದ್ದ ಹನೀಫ್ (24), ಗೌಸ್ ಅಲಿಯಾಸ್ ಗೌಸ್ ಪಾಷಾ (28), ಗಂಗಾವತಿಯ ಗ್ಯಾರೇಜ್ ಮೆಕಾನಿಕ್ ಸುಹೇಲ್ (22) ಬಂಧಿತ ಆರೋಪಿಗಳು.
ಘಟನೆ ಹಿನ್ನೆಲೆ:
ಜಗಳೂರು ಪಟ್ಟಣದ ಉಜ್ಜಿನಿ ರಸ್ತೆಯ ಹೊರಕೆರೆಯ ವೈ. ಕೆ. ಉಮಾ ಶಂಕರ ಅವರು ಕಳೆದ ಆಗಸ್ಟ್ 27ರಂದು ರಾತ್ರಿ 1.30 ಗಂಟೆಯ ಸಮಯದಲ್ಲಿ ಜಗಳೂರು ಪಟ್ಟಣದ ಹೊರಕೆರೆಯ ಮನೆಯಲ್ಲಿ ಕಳ್ಳತನವಾಗಿದ್ದು ಈ ಬಗ್ಗೆ ಜಗಳೂರು ಪೊಲೀಸ್ ಠಾಣೆಯಲ್ಲಿ ಠಾಣೆಗೆ ದೂರು ನೀಡಿದ್ದರು.
ಆರೋಪಿತರ ಬಂಧನ, ಸ್ವತ್ತು ವಶ:
ಪ್ರಕರಣದ ಆರೋಪಿಗಳು ಹಾಗೂ ಸ್ವತ್ತು ಪತ್ತೆಗೆ ಜಗಳೂರು ಪೊಲೀಸ್ ಠಾಣೆಯ ನಿರೀಕ್ಷಕ ಸಿದ್ರಾಮಯ್ಯರ ನೇತೃತ್ವದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡವು ಪ್ರಕರಣದ ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಮೆಹಬೂಬ್ ನಗರ ಪಿಒಪಿ ಕೆಲಸ ಮಾಡುತ್ತಿದ್ದ ಹನೀಫ್ (24), ಗೌಸ್ ಅಲಿಯಾಸ್ ಗೌಸ್ ಪಾಷಾ (28), ಗಂಗಾವತಿಯ ಗ್ಯಾರೇಜ್ ಮೆಕಾನಿಕ್ ಸುಹೇಲ್ (22) ಬಂಧಿತ ಆರೋಪಿಗಳಾಗಿದ್ದು, ಕಳವು ಮಾಡಿದ್ದ 1500 ಗ್ರಾಂ ಬೆಳ್ಳಿಯ ಸಾಮಾಗ್ರಿ ಅಂದಾಜು ಬೆಲೆ 1,85,000, ಕೃತ್ಯಕ್ಕೆ ಬಳಸಿದ ಸುಜುಕಿ ಕಂಪನಿಯ ಸ್ಕೂಟಿ ಅಂದಾಜು ಬೆಲೆ 1,15,000, ಕೃತ್ಯಕ್ಕೆ ಬಳಸಿದ್ದ 1 ಕಬ್ಬಿಣದ ರಾಡ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿತರ ಹಿನ್ನೆಲೆ:
ಈ ಮೂವರು ಆರೋಪಿಗಳು ಈ ಹಿಂದೆ ಮುನಿರಾಬಾದ್ ನಲ್ಲಿ ಹೆದ್ದಾರಿಯಲ್ಲಿ ದರೋಡೆ ಪ್ರಕರಣ, ಕುಷ್ಟಗಿಯಲ್ಲಿ, ಗಂಗಾವತಿ ಟೌನ್, ಗಂಗಾವತಿ ಗ್ರಾಮಾಂತರ, ಕೊಪ್ಪಳ ಗ್ರಾಮಾಂತರ ಠಾಣೆಗಳಲ್ಲಿ ಮನೆಕಳ್ಳತನ ಪ್ರಕರಣಗಳು ಸೇರಿದಂತೆ ಒಟ್ಟು 7 ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿದು ಬಂದಿದೆ.
ಪತ್ತೆ ಕಾರ್ಯ ತಂಡಕ್ಕೆ ಶ್ಲಾಘನೆ:
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಿದ ಜಗಳೂರು ಪೊಲೀಸ್ ನಿರೀಕ್ಷಕ ಸಿದ್ರಾಮಯ್ಯ, ಪಿಎಸ್ಐ ಗಾದಿಲಿಂಗಪ್ಪ, ಶರಣಬಸಪ್ಪ, ಆಶಾ ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ. ವೆಂಕಟೇಶ, ಎ.ಎಸ್.ಐ. ನಟರಾಜ್ ಹಾಗೂ ನಾಗಭೂಷಣ್, ನಾಗರಾಜಯ್ಯ, ಮಾರಪ್ಪ, ಯಶವಂತ್, ಚೈತ್ರಾ, ಕರಿಬಸವರಾಜ, ಜಿಲ್ಲಾ ಪೊಲೀಸ್ ಕಛೇರಿಯ ಪಿ.ಎಸ್.ಐ. ಮಂಜುನಾಥ ಕಲ್ಲೇದೇವರ, ಎಎಸ್ಐ ರಾಜು ನಾಗ, ರಾಮಚಂದ್ರ ಬಿ ಜಾಧವ್, ನಾಗರಾಜ್ ಕುಂಭಾರ, ಹೆಚ್.ಸಿ. ಅಖ್ತರ್, ಪಿಸಿ ವಿರೇಶ, ಶ್ರೀ ರಮೇಶ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.