ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಚನ್ನಗಿರಿಯ ಮನೆಯಲ್ಲಿಟ್ಟಿದ್ದ 100 ಗ್ರಾಂ ತೂಕದ ಬಂಗಾರ ಕದ್ದಿದ್ದ ಆರೋಪಿ ಸೆರೆ: 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

On: August 19, 2025 11:19 AM
Follow Us:
Channagiri
---Advertisement---

SUDDIKSHANA KANNADA NEWS/ DAVANAGERE/DATE:19_08_2025

ದಾವಣಗೆರೆ: ಚನ್ನಗಿರಿ ಪಟ್ಟಣದ ಲಷ್ಕರ್ ಮೊಹಲ್ಲಾದಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 10 ಲಕ್ಷ ರೂಪಾಯಿ ಮೌಲ್ಯದ 100 ಗ್ರಾಂ ತೂಕದ ಬಂಗಾರದ ಒಡವೆಗಳು ಹಾಗೂ 20 ಸಾವಿರ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

READ ALSO THIS STORY: ದಾವಣಗೆರೆ ಜಿಲ್ಲೆಯಲ್ಲಿ 28 ಮಂದಿ ಗಡೀಪಾರು, ಡಿಜೆ ನಿಷೇಧ: ಡಿಸಿ ಕೊಟ್ಟ ಕಟ್ಟುನಿಟ್ಟಿನ ಎಚ್ಚರಿಕೆಗಳು ಯಾವುವು?

ಚನ್ನಗಿರಿಯ ಲಷ್ಕರ್ ಮೊಹಲ್ಲಾ ನಿವಾಸಿ ಬಿಲಾಲ್ ಹೊಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಮ್ಮದ್ ಸಾಧಿಕ್ (37) ಬಂಧಿತ ಆರೋಪಿ.

ಘಟನೆ ಹಿನ್ನೆಲೆ:

ಚನ್ನಗಿರಿಯ ಲಷ್ಕರ್ ಮೊಹಲ್ಲಾದ ಆಟೋ ಮೆಕಾನಿಕ್ ಮಹಮ್ಮದ್ ಅಲೀಂವುಲ್ಲಾ ಅವರು ತನ್ನ ಮನೆಯಲ್ಲಿ ಕಳವು ಆಗಿದೆ. ಬೀಗ ಹಾಕಿದ್ದ ಮನೆಯೊಳಗೆ ನುಗ್ಗಿ ಗಾಡ್ರೇಜ್ ಮುರಿದು ಬಂಗಾರದ ಒಡವೆಗಳು ಹಾಗೂ ನಗದು ಕಳವು ಮಾಡಿಕೊಂಡು ಹೋಗಿರುವ ಕುರಿತಂತೆ ದೂರು ನೀಡಿದ್ದರು. ಆರೋಪಿಯನ್ನು ಬಂಧಿಸಿ ಸ್ವತ್ತು ವಾಪಸ್ ಕೊಡಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದರು.

ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹಾಗೂ ಚನ್ನಗಿರಿ ಉಪ-ವಿಭಾಗದ ಎ.ಎಸ್.ಪಿ. ಸ್ಯಾಮ್ ವರ್ಗೀಸ್ ಅವರ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಕೆ. ಎನ್. ರವೀಶ್
ನೇತೃತ್ವದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಅಧಿಕಾರಿ-ಸಿಬ್ಬಂದಿಯವರನ್ನೊಳಗೊಂಡ ತಂಡ ರಚಿಸಲಾಗಿತ್ತು.

ತಂಡವು ಕಾರ್ಯಚರಣೆ ನಡೆಸಿ, ಸಾಕ್ಷ್ಯಗಳನ್ನು ಸಂಗ್ರಹಿಸಿ ಈ ಪ್ರಕರಣದಲ್ಲಿ ಮಹಮ್ಮದ್ ಸಾಧಿಕ್ ನನ್ನು ಪತ್ತೆ ಹಚ್ಚಿ ಆರೋಪಿಯಿಂದ 10 ಲಕ್ಷ ರೂಪಾಯಿ ಮೌಲ್ಯದ 100 ಗ್ರಾಂ ತೂಕದ ಬಂಗಾರದ ಒಡವೆಗಳು ಮತ್ತು 20 ಸಾವಿರ ನಗದು
ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದಾನೆ.

ಆರೋಪಿತನನ್ನು ಪತ್ತೆ ಹಚ್ಚಿ ಸ್ವತ್ತು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಚನ್ನಗಿರಿ ಉಪ-ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್, ತನಿಖಾಧಿಕಾರಿ ಕೆ. ಎನ್. ರವೀಶ್, ಎಎಸ್ಐ. ಶಶಿಧರ್ ಮತ್ತು ಸಿಬ್ಬಂದಿಯರಾದ
ರೇವಣಸಿದ್ದಪ್ಪ, ರಮೇಶ್ ಜೆ, ಚನ್ನಕೇಶವ, ಪ್ರಶಾಂತ್, ರೇವಣಸಿದ್ದಪ್ಪ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ದಸರಾ

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ವಿರೋಧ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು: ಮೊಹಮ್ಮದ್ ಜಿಕ್ರಿಯಾ

ನಡುಕ

“ಮತದಾರರ ಅಧಿಕಾರ ಯಾತ್ರೆ”ಗೆ ಭಾರೀ ಬೆಂಬಲ, ಬಿಜೆಪಿಗೆ ನಡುಕ: ಸೈಯದ್ ಖಾಲಿದ್ ಅಹ್ಮದ್

ಶಿವಾಜಿ

“ಅಫ್ಜಲ್ ಗುರು ವಧೆ ಮಾಡುವ ಶಿವಾಜಿ ಮಹಾರಾಜರ ಪೋಸ್ಟರ್”: ತೆರವಿಗೆ ಪೊಲೀಸರು ಬರುತ್ತಿದ್ದಂತೆ ಮಟಿಕಲ್ ನಲ್ಲಿ ಉದ್ವಿಗ್ನ ವಾತಾವರಣ!

RASHI

ಈ ರಾಶಿಯವರಿಗೆ ವ್ಯಾಪಾರದಲ್ಲಿ ದ್ವಿಗುಣ: ಶುಕ್ರವಾರದ ರಾಶಿ ಭವಿಷ್ಯ 29 ಆಗಸ್ಟ್ 2025

ಟಿಕ್ಕಿ

“ಕಪ್ಪಗಿದ್ದೆಯಾ ಮಗನಿಗೆ ಒಳ್ಳೆಯ ಜೋಡಿಯಲ್ಲ, ಬೇರೆ ಮದ್ವೆ ಮಾಡ್ತೀವಿ ಬಿಟ್ಬಿಡು”: ಟೆಕ್ಕಿ ಸೂಸೈಡ್ ಸ್ಫೋಟಕ ಕಾರಣ ಬಹಿರಂಗ!

ಹಿಂದೂ

ಆ. 29ಕ್ಕೆ ಹಳೇಕುಂದುವಾಡಕ್ಕೆ ಹಿಂದೂ “ಫೈರ್” ಬಾಂಡ್ ಹಾರಿಕಾ ಮಂಜುನಾಥ್: ಯುವಕರಲ್ಲಿ ದೇಶಭಕ್ತಿ, ಸಂಸ್ಕೃತಿ ಮೂಡಿಸುವುದು ಹೇಗೆ? ವಿಷಯದ ಬಗ್ಗೆ ದಿಕ್ಸೂಚಿ ಭಾಷಣ

Leave a Comment