ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಹೊನ್ನಾಳಿಯಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಕದ್ದಿದ್ದ ದಾವಣಗೆರೆಯ ನಾಲ್ವರ ಬಂಧನ: ಸಿಕ್ಕಿಬಿದ್ದಿದ್ದೇಗೆ ಕಳ್ಳರು?

On: August 10, 2025 9:31 PM
Follow Us:
Davanagere
---Advertisement---

SUDDIKSHANA KANNADA NEWS/ DAVANAGERE/DATE:10_08_2025

ದಾವಣಗೆರೆ: ಅಂಗಡಿಗಳಿಗೆ ಕನ್ನ ಹಾಕಿ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕದ್ದಿದ್ದ ದಾವಣಗೆರೆಯ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅಪಾರ ಪ್ರಮಾಣದ ಎಲೆಕ್ಟ್ರಿಕಲ್ ಸಾಮಗ್ರಿಗಳನ್ನು ಹೊನ್ನಾಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

READ ALSO THIS STORY: ಮುನಿಸು ಮರೆತು ಒಂದೇ ವೇದಿಕೆಯಲ್ಲಿ ಬಿಜೆಪಿ ನಾಯಕರು: ಹಾಲಿ, ಮಾಜಿ ಸಂಸದರಿಂದ 2ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸ್ವಾಗತ!

ಮುಕ್ತೇನಹಳ್ಳಿ ಗ್ರಾಮದ ಸುನೀಲ್ ಕುಮಾರ (23), ನಿಟ್ಟೂರು ಗ್ರಾಮದ ಗಿರೀಶ ಟಿ. ಎನ್. (25), ಬೆಳ್ಳೂಡಿ ಗ್ರಾಮದ ಅನಿಲ್ ಕುಮಾರ್ ಬಿ. ಸಿ. (21), ಭಾನುವಳ್ಳಿ ಗ್ರಾಮದ ಬಿ. ಎ. ರಾಕೇಶ್ (23) ಬಂಧಿತ ಆರೋಪಿಗಳು. ಬಂಧಿತರಿಂದ ಒಟ್ಟು 6.78 ಲಕ್ಷ ಮೌಲ್ಯದ 33 ಮೊಬೈಲ್ ಗಳು, 6 ಮಿಕ್ಸರ್ ಗ್ರೈಂಡರ್ ಗಳು, 4 ಹೋಂ ಥಿಯೇಟರ್ ಗಳು, 1 ಗೀಸರ್, 1 ಎಲೆಕ್ಟ್ರಿಕ್ ಸ್ಟೌ, 1 ಸೆಟ್ ಕುಕ್ ವೇರ್ ಗಳನ್ನು ಮತ್ತು ಆರೋಪಿತರು ಕಳ್ಳತನ ಕೃತ್ಯಕ್ಕೆ ಉಪಯೋಗಿಸಿದ 3 ಲಕ್ಷ ಮೌಲ್ಯದ ಓಮಿನಿ, ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆ ಹಿನ್ನೆಲೆ:

ಹೊನ್ನಾಳಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಶ್ರೀ ಶಿವು ಎಂಟರ್ ಪ್ರೈಸಸ್ ಅಂಗಡಿಯ ಹಿಂದಿನ ಕಿಟಕಿಯ ಸರಳು ಬೆಂಡ್ ಮಾಡಿ ಕಳ್ಳರು ಒಳಗೆ ಪ್ರವೇಶಿಸಿ ರೂ 5.5 ಲಕ್ಷ ಮೌಲ್ಯದ ಮೊಬೈಲ್ ಗಳು, ಮಿಕ್ಸಿರ್ ಗಳು, ಹೋಂ
ಥಿಯೇಟರ್ ಗಳು ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ವೀರೇಶಪ್ಪ ಸಿ. ಅವರು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಹೊನ್ನಾಳಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ ಹೆಚ್. ಮತ್ತು ಸಿಬ್ಬಂದಿಯವರನ್ನೊಳಗೊಂಡ ತಂಡವು ಕೃತ್ಯ ನಡೆದ ಸ್ಥಳದಲ್ಲಿ ದೊರೆತ ಖಚಿತ ಸಾಕ್ಷ್ಯಗಳ ಸಹಾಯದಿಂದ ಆರೋಪಿಗಳನ್ನು ಬಂಧಿಸಿದೆ.

ಆರೋಪಿತ ಹಿನ್ನೆಲೆ:

ಆರೋಪಿತ ರಾಕೇಶ್ ವಿರುದ್ಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ 2023 ರಲ್ಲಿ ಕೊಲೆಗೆ ಯತ್ನ ಸಂಬಂಧ ಪ್ರಕರಣ ದಾಖಲಾಗಿದೆ.

ಆರೋಪಿಗಳು ಮತ್ತು ಮಾಲು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಹೊನ್ನಾಳಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ ಹೆಚ್, ಪಿಎಸ್ಐಗಳಾದ ಕುಮಾರ ಎನ್. ಮತ್ತು ನಿರ್ಮಲ, ಎಎಸ್ಐ ಹರೀಶ ಹೆಚ್.ವಿ, ಸಿಬ್ಬಂದಿಗಳಾದ
ರಾಜಶೇಖರ, ರವಿ, ಬಸವರಾಜ ಕೋಟೆಪ್ಪನವರ, ಅಮ್ಜದ್ ಖಾನ್, ಹೇಮಾನಾಯ್ಕ, ಮಹೇಂದ್ರ, ಮನೋಹರ,  ಕೃಷ್ಣನಾಯ್ಕ, ರಾಮಚಂದ್ರ, ಚೇತನ್, ಪ್ರವೀಣ್, ಚಾಲಕ ವೆಂಕಟೇಶ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ಪೊಲೀಸ್ ನಿರೀಕ್ಷಕ ಇಸ್ಮಾಯಿಲ್, ಪಿ.ಎಸ್.ಐ ಮಂಜುನಾಥ ಕಲ್ಲೆದೇವರ, ಎ.ಎಸ್ಐ ರಾಜ್ ನಾಗ್, ಸಿಬ್ಬಂದಿಗಳಾದ ರಾಮಚಂದ್ರ ಜಾಧವ್, ನಾಗರಾಜ, ವಿರೇಶ, ರಮೇಶ ಎಂ.ಪಿ, ಸಿದ್ದಾರ್ಥ ಅವರನ್ನು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ದಸರಾ

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ವಿರೋಧ ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು: ಮೊಹಮ್ಮದ್ ಜಿಕ್ರಿಯಾ

ನಡುಕ

“ಮತದಾರರ ಅಧಿಕಾರ ಯಾತ್ರೆ”ಗೆ ಭಾರೀ ಬೆಂಬಲ, ಬಿಜೆಪಿಗೆ ನಡುಕ: ಸೈಯದ್ ಖಾಲಿದ್ ಅಹ್ಮದ್

ಶಿವಾಜಿ

“ಅಫ್ಜಲ್ ಗುರು ವಧೆ ಮಾಡುವ ಶಿವಾಜಿ ಮಹಾರಾಜರ ಪೋಸ್ಟರ್”: ತೆರವಿಗೆ ಪೊಲೀಸರು ಬರುತ್ತಿದ್ದಂತೆ ಮಟಿಕಲ್ ನಲ್ಲಿ ಉದ್ವಿಗ್ನ ವಾತಾವರಣ!

RASHI

ಈ ರಾಶಿಯವರಿಗೆ ವ್ಯಾಪಾರದಲ್ಲಿ ದ್ವಿಗುಣ: ಶುಕ್ರವಾರದ ರಾಶಿ ಭವಿಷ್ಯ 29 ಆಗಸ್ಟ್ 2025

ಟಿಕ್ಕಿ

“ಕಪ್ಪಗಿದ್ದೆಯಾ ಮಗನಿಗೆ ಒಳ್ಳೆಯ ಜೋಡಿಯಲ್ಲ, ಬೇರೆ ಮದ್ವೆ ಮಾಡ್ತೀವಿ ಬಿಟ್ಬಿಡು”: ಟೆಕ್ಕಿ ಸೂಸೈಡ್ ಸ್ಫೋಟಕ ಕಾರಣ ಬಹಿರಂಗ!

ಹಿಂದೂ

ಆ. 29ಕ್ಕೆ ಹಳೇಕುಂದುವಾಡಕ್ಕೆ ಹಿಂದೂ “ಫೈರ್” ಬಾಂಡ್ ಹಾರಿಕಾ ಮಂಜುನಾಥ್: ಯುವಕರಲ್ಲಿ ದೇಶಭಕ್ತಿ, ಸಂಸ್ಕೃತಿ ಮೂಡಿಸುವುದು ಹೇಗೆ? ವಿಷಯದ ಬಗ್ಗೆ ದಿಕ್ಸೂಚಿ ಭಾಷಣ

Leave a Comment