SUDDIKSHANA KANNADA NEWS/ DAVANAGERE/ DATE:23_07_2025
ದಾವಣಗೆರೆ: ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಸಂತೇಬೆನ್ನೂರು ಮತ್ತು ಬಸವಾಪಟ್ಟಣ ಪೊಲೀಸರು, 3,75,400 ರೂ ಮೌಲ್ಯದ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
READ ALSO THIS STORY: ಕಡೂರಿನಲ್ಲಿ ಅಪಘಾತ: ದಾವಣಗೆರೆಯ ರಿಯಲ್ ಎಸ್ಟೇಟ್ ಉದ್ಯಮಿ ಪ್ರತಾಪ್ ಪವಾರ್ ದಾರುಣ ಸಾವು
ಹೂವಿನಹಡಗಲಿ ತಾಲೂಕಿನ ನಡುವಿನ ತಾಂಡಾದ ಸಂತೋಷ್ ಕುಮಾರ್ (32), ಕೊಟ್ಟೂರು ತಾಲೂಕಿನ ಬೇವೂರು ಗ್ರಾಮದ ಬಿ. ಪಿ. ಹರೀಶ್ (37), ಕುಕ್ಕವಾಡ ಗ್ರಾಮದ ಕುಬೇರಪ್ಪ (60), ಕೊಟ್ಟೂರು ತಾಲೂಕಿನ ಬೇವೂರು ಗ್ರಾಮದ ಹನುಮಂತಪ್ಪ (75) ಬಂಧಿತ ಆರೋಪಿಗಳು.
ಕಳೆದ 19ರಂದು ಚಿರಡೋಣಿ ಗ್ರಾಮದ ಸಪ್ತಗಿರಿ ಬಾರ್ ಅಂಡ್ ರೆಸ್ಟೋರೆಂಟ್ ಎದುರಿನ ರಸ್ತೆಯಲ್ಲಿ ಯಾರೋ ಇಬ್ಬರು ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಸಂತೆಬೆನ್ನೂರು ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಬಸವಾಪಟ್ಟಣ ಪೊಲೀಸ್ ಠಾಣೆಯ ಪಿ.ಎಸ್.ಐ ಇಮ್ತಿಯಾಜ್ ಹಾಗೂ ಸಿಬ್ಬಂದಿ ಒಳಗೊಂಡ ತಂಡವನ್ನು ರಚಿಸಿದ್ದು,ಚಿರಡೋಣಿ ಗ್ರಾಮದ ಚಿರ ಶಾಂತಿವನದ
ಸ್ಮಶಾನ ಹತ್ತಿರ ದೊಡ್ಡಘಟ್ಟ ರಸ್ತೆಯಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನಿಸುತ್ತಿದ್ದವರ ಮೇಲೆ ದಾಳಿ ಮಾಡಿ ಬಂಧಿಸಲಾಗಿದೆ.
ಆರೋಪಿಗಳ ಬಳಿ ಇದ್ದ 500 ರೂಪಾಯಿ ಮುಖಬೆಲೆಯ 2 ಲಕ್ಷ ಮೌಲ್ಯದ ಖೋಟಾ ನೋಟುಗಳು ಹಾಗೂ ಕೃತ್ಯಕ್ಕೆ ಬಳಸಿದ ಕೆಎ-27 ಕ್ಯೂ 1629 ನೇ ಮೋಟಾರ್ ಸೈಕಲ್ ಅನ್ನು ವಶ ಪಡೆಸಿಕೊಂಡ ಪೊಲೀಸರು, ಆರೋಪಿಗಳು ನೀಡಿದ
ಮಾಹಿತಿಯ ಮೇರೆಗೆ ಕಬ್ಬಳ ಗ್ರಾಮದ ಕರೆಕಟ್ಟೆ ರಸ್ತೆಯಲ್ಲಿದ್ದ ಕುಕ್ಕವಾಡ ಗ್ರಾಮದ ಕುಬೇರಪ್ಪ (60), ಕೊಟ್ಟೂರು ತಾಲೂಕಿನ ಬೇವೂರು ಗ್ರಾಮದ ಹನುಮಂತಪ್ಪ (75) ಅವರ ಮೇಲೆ ದಾಳಿ ನಡೆಸಿ ಆರೋಪಿಗಳ ಬಳಿ ಇದ್ದ 500 ರೂ ಮುಖ ಬೆಲೆಯ 28 ಸಾವಿರ ಮೌಲ್ಯದ ಹಾಗೂ 200 ರೂ ಮುಖ ಬೆಲೆಯ 47,400 ರೂ ಮೌಲ್ಯದ ಖೋಟಾ ನೋಟುಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಪ್ರಕರಣದ ಮೂರನೇ ಆರೋಪಿತನು ಕುಕ್ಕವಾಡ ಗ್ರಾಮದ ತನ್ನ ಮನೆಯಲ್ಲಿಟ್ಟಿದ್ದ 500 ರೂ ಮುಖ ಬೆಲೆಯ 1 ಲಕ್ಷ ಮೌಲ್ಯದ ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಂದ ಒಟ್ಟು ರೂ. 500 ಹಾಗೂ 200 ರೂ ಮುಖ ಬೆಲೆಯ ಒಟ್ಟು 3,75,400 ರೂ ಮೌಲ್ಯದ ಖೋಟಾ ನೋಟುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿತ ಹಿನ್ನೆಲೆ:
ಮೂರನೇ ಆರೋಪಿಯಾದ ಕುಬೇರಪ್ಪ ಈತನ ಮೇಲೆ ದಾವಣಗೆರೆ ಜಿಲ್ಲೆಯ ಹರಿಹರ ನಗಹರದಲ್ಲಿ 1 ಪ್ರಕರಣ, ವಿಜಯನಗರ ಜಿಲ್ಲೆಯ ಹೊಸಪೇಟೆ ನಗರ ಠಾಣೆಯಲ್ಲಿ 1 ಪ್ರಕರಣ, ಮೈಸೂರು ಜಿಲ್ಲೆಯಲ್ಲಿ 1 ಪ್ರಕರಣ ಸೇರಿ ಒಟ್ಟು 3 ಖೋಟಾನೋಟು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಪತ್ತೆ ಕಾರ್ಯದಲ್ಲಿ ಭಾಗಿಯಾದ ಸಂತೆಬೆನ್ನೂರು ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು, ಬಸವಾಪಟ್ಟಣ ಠಾಣೆಯ ಇಮ್ಮಿಯಾಜ್, ಪಿ.ಎಸ್.ಐ (ಕಾಹಿಸು), ಎಸ್ಐ ಭಾರತಿ ಜೆ.ಇ, ಸಿಬ್ಬಂದಿಯವರಾದ ರಂಗನಾಥ, ಶಂಕರಗೌಡ, ಬಸವರಾಜ್, ಬಾಲಾಜಿ, ಇಬ್ರಾಹಿಂ, ಅಣ್ಣೇಶ, ಮೋಹನ್, ಅಂಜಿನಪ್ಪ, ಪ್ರಕಾಶ್, ಎಂ.ಎಂ. ಖಾನ್, ತಿಮ್ಮರಾಜು, ವೆಂಕಟೇಶ್ ಹಾಗೂ ಇರ್ಷಾದ್ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.