ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

23 ವರ್ಷದಿಂದ ದಾವಣಗೆರೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಕಳ್ಳ ಸಿಕ್ಕಿಬಿದ್ದಿದ್ದೇ ರೋಚಕ!

On: July 16, 2025 10:18 PM
Follow Us:
ದಾವಣಗೆರೆ
---Advertisement---

SUDDIKSHANA KANNADA NEWS/ DAVANAGERE/ DATE:16_07_2025

ದಾವಣಗೆರೆ: ಕಳೆದ 23 ವರ್ಷಗಳ ಹಿಂದೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ದಾವಣಗೆರೆ ಪೊಲೀಸರು ಯಶಸ್ವಿಯಾಗಿದ್ದು, ಈತನನ್ನು ಸೆರೆಹಿಡಿದಿದ್ದೇ ರೋಚಕ.

2002 ನೇ ಸಾಲಿನಿಂದ ವಿವಿಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಅರೋಪಿತನ ಬಂಧಿಸಲಾಗಿದೆ. ಬಸವನಗರ ಪೊಲೀಸ್ ಠಾಣೆ ಗುನ್ನೆ ನಂ 133/2002 ಕಲಂ 380 ಐಪಿಸಿ, ಬಡಾವಣೆ ಪೊಲೀಸ್ ಠಾಣೆ ಗುನ್ನೆ ನಂ 215/2002 ಕಲಂ 380
ಐಪಿಸಿ ಮತ್ತು ಆಜಾದ್ ನಗರ ಪೊಲೀಸ್ ಠಾಣೆ ಗುನ್ನೆ ನಂ 152/2002 ಕಲಂ 380 ಐಪಿಸಿ ಸೆಕ್ಷನ್ ನಡಿ ಪ್ರಕರಣಗಳು ದಾಖಲಾಗಿದ್ದವು.

ಘಟನೆ ಹಿನ್ನೆಲೆ:

29-01-2002 ರಂದು ಬಡಾವಣೆ ಪೊಲೀಸ್ ಠಾಣಾ ಗುನ್ನೆ ನಂ. 215/2002 ಕಲಂ. 380 ಐಪಿಸಿ ಪ್ರಕರಣದ ಕಾಗದ ಪತ್ರಗಳನ್ನು ಕೃತ್ಯ ಸ್ಥಳದ ಆಧಾರದ ಮೇಲೆ ಕಳಿಸಿದ್ದನ್ನು ಸ್ವೀಕರಿಸಿ ಪರಿಶೀಲಿಸಲಾಗಿದೆ. ಆಗ ಶಿವಾಲಿ ಟಾಕೀಸ್ ಬಳಿ ಇರುವ ತ್ರಿನೇತ್ರ ವಿಸಿಡಿ ಅಂಡ್ ಕ್ಯಾಸೆಟ್ ಅಂಗಡಿಯಲ್ಲಿ ಸುಮಾರು 3000 ರೂ ಬೆಲೆ ಬಾಳುವ ವಿಸಿಡಿ ಪ್ಲೇಯರ್ ನ್ನು ಕಳವು ಮಾಡಿಕೊಂಡು ಹೋಗಿದ್ದರ ಮೇರೆಗೆ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಚಿಕ್ಕಮಗಳೂರು ಜಿಲ್ಲೆಯ ಡಾ. ರಾಜ್ ಕುಮಾರ್ ರಸ್ತೆಯ ಎರಡನೇ ಕ್ರಾಸ್ ನ ಬಸವನಹಳ್ಳಿ ಬಡಾವಣೆಯ ವಾಸಿಯಾಗಿದ್ದ ಪ್ರಕರಣದ ಆರೋಪಿ ರಾಜೇಶ್ ಕುಮಾರ್ ಯರಗುಂಟೆ ಗ್ರಾಮದಲ್ಲಿದ್ದ. ಪ್ರಕರಣ ದಾಖಲಾಗಿನಿಂದಲೂ ಘನ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಘನ ನ್ಯಾಯಾಲಯವು ದಿ:-24-08-2004 ರಂದು ಎಲ್.ಪಿ.ಆರ್ ಪ್ರಕರಣ ಅಂತಾ ಆದೇಶಿಸಿತ್ತು.

ಎಲ್.ಪಿ.ಆರ್ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ಆರೋಪಿತನ ಪತ್ತೆ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕಿಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ ಜಿ, ಡಿವೈಎಸ್ಪಿ ಶರಣ ಬಸವೇಶ್ವರ ಅವರ ಮಾರ್ಗದರ್ಶನದಲ್ಲಿ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ನಂಜುಂಡಸ್ವಾಮಿ ಎಂ. ಹಾಗೂ ಬಡಾವಣೆ ಪೊಲೀಸ್ ನಿರೀಕ್ಷಕಿಎಂ.ಆರ್ ಚೌಬೆ ರವರ ನೇತೃತ್ವದಲ್ಲಿ ಎಎಸ್ಐ ಹೊನ್ನೂರು ಸಾಬ್ ಮತ್ತು ಬಡಾವಣೆ ಪೊಲೀಸ್ ಠಾಣೆಯ ಎಎಸ್ಐ ಎಸ್.ಬಿ. ರಾಜಪ್ಪ, ಹೆಡ್ ಕಾನ್ಸ್ಟೇಬಲ್ ಕುಮಾರ ಡಿ.ಹೆಚ್. ರವರನ್ನೊಳಗೊಂಡ ತಂಡವನ್ನು ರಚಿಸಿ ಆರೋಪಿ ಪತ್ತೆ ಕಾರ್ಯ ಕೈಗೊಳ್ಳಲಾಗಿತ್ತು.

ಆರೋಪಿತನ ಬಗ್ಗೆ ವಿವಿಧ ಕಡೆ ಮಾಹಿತಿಯನ್ನು ಸಂಗ್ರಹಿಸಿ, ಭಾತ್ಮಿದಾರರ ಖಚಿತ ಮಾಹಿತಿ ಮೇರೆಗೆ ಚಿಕ್ಕಮಗಳೂರು ಪಟ್ಟಣದಲ್ಲಿ ಅರೋಪಿತನಾದ ರಾಜೇಶ್ ಕುಮಾರ್ (47) ಪತ್ತೆ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪ್ರರಕಣದ ಅರೋಪಿತನ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ನಂಜುಂಡಸ್ವಾಮಿ ಹಾಗೂ ಬಡಾವಣೆ ಪೊಲೀಸ್ ನಿರೀಕ್ಷಕಿ ಎಂ.ಆರ್ ಚೌಬೆ ರವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಎಸ್ಪಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment