ದಾವಣಗೆರೆ: ಸುಲಿಗೆ ಮತ್ತು ಮನೆ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸಿರುವ ಪೊಲೀಸರು 12,28,000 ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
READ ALSO THIS STORY: 150 ಕೋಟಿ ರೂ. ವಂಚನೆ, ಖಾತೆಯಲ್ಲಿ 18 ಕೋಟಿ ರೂ. ಹಣ ಹೊಂದಿದ್ದ ವಂಚಕರು: ಸೆರೆ ಸಿಕ್ಕ ಆರೋಪಿ ಹಿಸ್ಟರಿ ಕೇಳಿದ್ರೆ ಬೆಚ್ಚಿ ಬೀಳ್ತೀರಾ!
ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದ ಶಿವಮೂರ್ತಿ ಅಲಿಯಾಸ್ ಮುರುಡ, ರಮೇಶ್ ಅಲಿಯಾಸ್ ಗಿಡ್ಡ ರಾಮ ಬಂಧಿತ ಆರೋಪಿಗಳು. ಚಿರಡೋಣಿ ಗ್ರಾಮದ ಸತ್ಯನಾರಾಯಣ ಅವರ ಮನೆಯ ಸುಲಿಗೆ ಪ್ರಕರಣದಲ್ಲಿ ಹಾಗೂ ಆರೋಪಿತರೊಂದಿಗೆ ಶಾಮಿಲಾಗಿದ್ದ ಪ್ರಕರಣದ ಮೂರನೇ ಆರೋಪಿ ರುದ್ರೇಶ ಎಂಬಾತನೂ ಸಿಕ್ಕಿಬಿದ್ದಿದ್ದಾನೆ. ಚಿರಡೋಣಿ ಗ್ರಾಮದ ಹಂಸತಾರಕಂ ಮನೆಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ.
ಆರೋಪಿತರು ಕೃತ್ಯಕ್ಕೆ ಬಳಸಿದ್ಗ ಮಚ್ಚು, ಸುಲಿಗೆ ಮತ್ತು ಮನೆಕಳ್ಳತನ ಮಾಡಿದ್ದ ಒಟ್ಟು 12,28,000 ರೂಪಾಯಿ ಬೆಲೆ ಬಾಳುವ 2 ಮಾಂಗಲ್ಯ ಸರಗಳು, ಒಂದು ಜೊತೆ ಬೆಂಡೋಲೆ, ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಏಪ್ರಿಲ್ 27ರಂದು ಹಂಸತಾರಕಂ ಕುಟುಂಬ ಸಮೇತ ಮನೆಗೆ ಬೀಗ ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದಾಗ ಚಿರಡೋಣಿ ಕ್ಯಾಂಪ್ ನಲ್ಲಿನ ವಾಸದ ಮನೆಯಲ್ಲಿ ಯಾರೋ ಕಳ್ಳರು ಮನೆಯ ಬೀಗವನ್ನು ಹೊಡೆದು ಮನೆಯ ಬೀರುವನ್ನು ಓಪನ್ ಮಾಡಿ ಅದರಲ್ಲಿದ್ದ ಬೆಳ್ಳಿ ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಸಂಬಂಧ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಆಗಸ್ಟ್ 14ರಂದು ರಾತ್ರಿ 7.40ರ ಸಮಯದಲ್ಲಿ ಸುಮಲತಾ ಅವರು ಚಿರಡೋಣಿ ಕ್ಯಾಂಪ್ ನ ತಮ್ಮ ಮನೆಯಲ್ಲಿದ್ದಾಗ ಯಾರೋ ಇಬ್ಬರು ಅಪರಿಚಿತರು ಕಪ್ಪು ಬಣ್ಣದ ಬಟ್ಟೆ ಮಾಸ್ಕ್ ಹಾಕಿಕೊಂಡು ಕೈಯಲ್ಲಿ ಅಡಿಕೆ ಸುಲಿಯುವ ಕತ್ತಿ ಮತ್ತು ಚಾಕುಗಳನ್ನು ಹಿಡಿದುಕೊಂಡು ಮನೆಯ ಹಿಂಬಾಗಿಲಿನ ಮೂಲಕ ಪ್ರವೇಶಿಸಿದ್ದರು. ಸುಮಲತಾ ಹಾಗೂ ಅತ್ತೆ ವೀರಯಮ್ಮ ಅವರ ಮೇಲೆ ಹಲ್ಲೆ ನಡೆಸಿ, ಕೊರಳಿನಲ್ಲಿದ್ದ 2 ಬಂಗಾರದ ಮಾಂಗಲ್ಯ ಸರಗಳನ್ನು ಕಿತ್ತುಕೊಂಡು ಹೋಗಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಸಂತೇಬೆನ್ನೂರು ಸಿಪಿಐ ಲಿಂಗನಗೌಡ ನೆಗಳೂರು ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.