SUDDIKSHANA KANNADA NEWS/ DAVANAGERE/ DATE:09-10-2023
ದಾವಣಗೆರೆ: ಅಡಿಕೆ (Areca nut)ಧಾರಣೆಯು ಮತ್ತೆ ಕುಸಿತ ಕಂಡಿದ್ದು, ಅಡಿಕೆ (Areca nut) ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ದೊಡ್ಡ ಅಡಿಕೆ ಮಾರುಕಟ್ಟೆ. ಈ ಭಾಗದಲ್ಲಿ ಹೆಚ್ಚಾಗಿ ಅಡಿಕೆ (Areca nut)ಬೆಳೆಯುತ್ತಾರೆ. ಅದೇ ರೀತಿಯಲ್ಲಿ ಜಿಲ್ಲೆಯ ವಿವಿಧೆಡೆಯೂ ಅಡಿಕೆ ಬೆಳೆಗಾರರಿದ್ದಾರೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆದಿದ್ದ ರೈತರ ಮೊಗದಲ್ಲಿ ಕಾರ್ಮೋಡ ಕವಿದಿದೆ. ಒಂದೆಡೆ ಮಳೆ ಕೈಕೊಟ್ಟಿದ್ದರೆ, ಮತ್ತೊಂದೆಡೆ ಅಡಿಕೆ ಧಾರಣೆ ಕುಸಿತ ಕಂಡಿರುವುದು ಆತಂಕಕ್ಕೆ ಕಾರಣವಾಗಿದೆ.
READ ALSO THIS STORY:
Siddaramaiah- H.D. Devegowda Meet:ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ – ಸಿದ್ದರಾಮಯ್ಯ ಭೇಟಿ: ಸಿದ್ದುಗೆ ಹೆಚ್ ಡಿಡಿ ಹೇಳಿದ್ದೇನು…?
ಕಳೆದ ಐದು ತಿಂಗಳಿನಿಂದಲೂ ಅಡಿಕೆ (Areca nut)ಧಾರಣೆಯಲ್ಲಿ ಏರುಪೇರು ಉಂಟಾಗುತ್ತಲೇ ಇದೆ. ಕಳೆದೊಂದು ವಾರದಿಂದ ಅಡಿಕೆ ಧಾರಣೆ ಸ್ಥಿರತೆ ಕಾಯ್ದುಕೊಂಡಿದ್ದರೂ ಮತ್ತೆ ಇಳಿಮುಖದತ್ತ ಸಾಗಿದ್ದು, ಅಡಿಕೆ ಬೆಳೆಗಾರರು ಕಳೆದ ವರ್ಷಕ್ಕಿಂತ ಕಡಿಮೆ ಆದಾಯ ಪಡೆಯುವ ಆತಂಕಕ್ಕೆ ಸಿಲುಕಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿಯೂ ಯಥೇಚ್ಛವಾಗಿ ಅಡಿಕೆ (Areca nut)ಬೆಳೆಯಲಾಗುತ್ತದೆ. ಭದ್ರಾವತಿ, ಶಿವಮೊಗ್ಗ, ತೀರ್ಥಹಳ್ಳಿ, ಸಾಗರ ಸೇರಿದಂತೆ ಹಲವೆಡೆ ಅಡಿಕೆ ಬೆಳೆಯನ್ನೇ ನೆಚ್ಚಿಕೊಂಡಿರುವ ರೈತರು ಈ ಬಾರಿ ಉತ್ತಮ ಧಾರಣೆ ಸಿಗುವ ವಿಶ್ವಾಸದಲ್ಲಿ ಇನ್ನೂ ಇದ್ದಾರೆ.
ಕಳೆದ ಶುಕ್ರವಾರಕ್ಕೆ ಹೋಲಿಸಿದರೆ ರಾಶಿ ಅಡಿಕೆ (Areca nut) ಧಾರಣೆ ಇಳಿಮುಖದತ್ತ ಸಾಗಿದ್ದು, ಸುಮಾರು ಒಂದೂವರೆ ಸಾವಿರ ರೂಪಾಯಿ ಕುಂಠಿತವಾಗಿದೆ. ಪ್ರತಿ ಕ್ವಿಂಟಾಲ್ 47,200 ರೂಪಾಯಿಗೆ ವಹಿವಾಟು ಮುಗಿಸಿದ್ದರೆ, ಹಿಂದಿನ ಮಾರುಕಟ್ಟೆ ದರ ಪ್ರತಿ ಕ್ವಿಂಟಾಲ್ ಗೆ 48,921 ರೂಪಾಯಿ ದಾಖಲಾಗಿತ್ತು.
ಏಪ್ರಿಲ್ ಮಾಹೆಯಲ್ಲಿ 48 ಸಾವಿರ ರೂಪಾಯಿ ಇದ್ದ ಅಡಿಕೆ (Areca nut) ರೇಟ್, ಜುಲೈ ತಿಂಗಳಿನಲ್ಲಿ 57 ಸಾವಿರ ರೂಪಾಯಿಗೆ ಏರಿಕೆಯಾಗಿತ್ತು. ಆದ್ರೆ, ತಿಂಗಳು ಕಳೆದಂತೆ ಇಳಿಮುಖದತ್ತ ಸಾಗಿದೆ. ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿಯಲ್ಲಿ ಇಂದು ಪ್ರತಿ ಕ್ವಿಂಟಾಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಧಾರಣೆ 41,599 ರೂಪಾಯಿ ದಾಖಲಾಗಿದ್ದರೆ, ಗರಿಷ್ಠ ಬೆಲೆ 47200 ರೂಪಾಯಿ ಆಗಿದೆ. ಸರಾಸರಿ ಧಾರಣೆ 45,268 ರೂಪಾಯಿ ಆಗಿದ್ದು, ಅಡಿಕೆ ಧಾರಣೆ ಕುಸಿಯುತ್ತಿರುವುದು ಅಡಿಕೆ ಬೆಳೆಗಾರರಿಗೆ ಆತಂಕ ತಂದಿರುವುದಂತೂ ನಿಜ.