SUDDIKSHANA KANNADA NEWS/ DAVANAGERE/ DATE: 08-09-2023
ದಾವಣಗೆರೆ: ಕಳೆದ ಕೆಲ ವಾರಗಳಿಂದ ಅಡಿಕೆ (Areca nut) ಧಾರಣೆಯಲ್ಲಿ ಹಾವು ಏಣಿ ಆಟ ನಡೆಯುತ್ತಿದೆ. 48 ಸಾವಿರಕ್ಕೆ ಕುಸಿದಿದ್ದ ಅಡಿಕೆ (Areca nut) ಧಾರಣೆಯು ಹೆಚ್ಚಳವಾಗಿದ್ದು, ಪ್ರತಿ ಕ್ವಿಂಟಾಲ್ ಗೆ 51 ಸಾವಿರ ರೂಪಾಯಿಯ ಗಡಿ ದಾಟಿದೆ.
ಆಗಸ್ಟ್ ತಿಂಗಳಿನಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆ(Areca nut) ಯು 54 ಸಾವಿರ ರೂಪಾಯಿಯ ಗಡಿಯಲ್ಲಿತ್ತು. ಇದಕ್ಕೂ ಮುನ್ನ 56 ಸಾವಿರ ರೂಪಾಯಿಯವರೆಗೂ ಅಡಿಕೆ (Areca nut) ಧಾರಣೆ ಇತ್ತು. ಕುಸಿತ ಕಂಡಿದ್ದ ಕಾರಣ ರೈತರು ಸಹ ಆತಂಕಕ್ಕೆ ಒಳಗಾಗಿದ್ದರು. ಇಂದು ಮಾರುಕಟ್ಟೆಯಲ್ಲಿ 51 ಸಾವಿರ ರೂಪಾಯಿ ಗಡಿ ದಾಟಿದ್ದು, ಅಡಿಕೆ ಬೆಳೆಗಾರರಿಗೆ ಖುಷಿ ತಂದಿದೆ.
ಈ ಸುದ್ದಿಯನ್ನೂ ಓದಿ:
Davanagere: ದಾವಣಗೆರೆ ವಿವಿಯ ಆವರಣದಲ್ಲಿ ವಿದ್ಯಾರ್ಥಿನಿ ಅಪಹರಿಸಲು ಬಂದ ಯುವಕರ್ಯಾರು…? ಆಕೆ ತಾಯಿ ಜೊತೆಗಿದ್ದದ್ದು ಯಾಕೆ…?
ಕಳೆದ ನಾಲ್ಕು ದಿನಗಳಲ್ಲಿ ಅಡಿಕೆ (Areca nut) ಧಾರಣೆಯು 2, 812 ರೂಪಾಯಿಗೆ ಏರಿಕೆಯಾಗಿದೆ. 48 ಸಾವಿರ ರೂಪಾಯಿಯ ಗಡಿಯಲ್ಲಿದ್ದ ಧಾರಣೆಯು 50,812 ರೂಪಾಯಿಗೆ ಹೆಚ್ಚಳ ಆಗಿದೆ. ಜುಲೈ ತಿಂಗಳಿನಲ್ಲಿ 57 ಸಾವಿರ ರೂಪಾಯಿಯ ಸನಿಹದಲ್ಲಿದ್ದ ಅಡಿಕೆ (Areca nut) ಧಾರಣೆಯು ದಿನ ಕಳೆದಂತೆ ಕುಸಿಯುತ್ತಲೇ ಹೋಯ್ತು. ಈಗ ಐವತ್ತು ಸಾವಿರ ರೂಪಾಯಿಗೂ ಹೆಚ್ಚಳವಾಗಿದೆ. ಸೆಪ್ಟಂಬರ್ ಎರಡನೇ ವಾರದ ಆರಂಭದಲ್ಲಿ ಹೆಚ್ಚಳವಾಗಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಅಡಿಕೆ (Areca nut) ನಾಡು ಅಂತಾನೇ ಖ್ಯಾತಿಗೊಂಡಿರುವ ಚನ್ನಗಿರಿಯ ಮಾರುಕಟ್ಟೆಯ ವಹಿವಾಟಿನಲ್ಲಿ ಪ್ರತಿ ಕ್ವಿಂಟಾಲ್ ಅಂದರೆ ಉತ್ತಮ ಹಳೆಯ ಅಡಿಕೆ ರಾಶಿಗೆ ಕನಿಷ್ಠ ಬೆಲೆ 44,599 ರೂಪಾಯಿ ಆದರೆ, ಗರಿಷ್ಠ ಬೆಲೆಯು 50,812 ರೂಪಾಯಿ ಆಗಿದೆ. ಹೊಸ ರಾಶಿ ಅಡಿಕೆ ಕನಿಷ್ಠ 42,559 ಆದರೆ ಗರಿಷ್ಠ ಧಾರಣೆ 49,639 ರೂಪಾಯಿ ಆಗಿದೆ. ಸರಾಸರಿ 46,868 ರೂಪಾಯಿ ಆಗಿದೆ. ಬೆಟ್ಟೆ (Areca nut) ಅಡಿಕೆ ಗರಿಷ್ಠ 34 ಸಾವಿರ ರೂಪಾಯಿ ದಾಖಲಿಸಿದೆ.