ದಾವಣಗೆರೆ: ದಿನ ಕಳೆದಂತೆ ಅಡಿಕೆ (Areca nut) ಧಾರಣೆ ಇಳಿಮುಖವಾಗುತ್ತಿರುವುದು ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. ಅಡಿಕೆ (Areca nut) ಬೆಳೆಗಾರರು ಕಳೆದ ನಾಲ್ಕು ತಿಂಗಳ ಹಿಂದೆ ಹೊಂದಿದ್ದ ಆಶಾಭಾವನೆ ತಿಂಗಳು ಕಳೆದಂತೆ ಕರಗುತ್ತಿದೆ. ಮತ್ತೆ ಅಡಿಕೆ (Areca nut)ಧಾರಣೆಯಲ್ಲಿ ಭಾರೀ ಕುಸಿತ ಕಂಡಿದ್ದು, ಪ್ರತಿ ಕ್ವಿಂಟಾಲ್ ಅಡಿಕೆಯು 46 ಸಾವಿರ ರೂಪಾಯಿಗೆ ಕುಸಿದಿದೆ.
ಈ ಸುದ್ದಿಯನ್ನೂ ಓದಿ:
ಭದ್ರಾ ಡ್ಯಾಂ (Bhadra Dam)ನೀರು ಸ್ಥಗಿತಕ್ಕೆ ಸಿಡಿದ ರೈತರ ರೋಷಾಗ್ನಿ:ದಾವಣಗೆರೆ ಬಂದ್ ಗೆ ಗುಡ್ ರೆಸ್ಪಾನ್ಸ್, ಮಧು ಬಂಗಾರಪ್ಪ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದೇಕೆ…?
ಜೂನ್, ಜುಲೈ, ಆಗಸ್ಟ್ ಹಾಗೂ ಸೆಪ್ಟಂಬರ್ ತಿಂಗಳಿನಲ್ಲಿ ಅಡಿಕೆ (Areca nut) ಧಾರಣೆಯ ಹಾವು ಏಣಿಯ ಆಟ ಮುಂದುವರಿದಿದ್ದು, ಅಡಿಕೆ (Areca nut) ಬೆಳೆದ ರೈತರು ಯಾವಾಗ ಅಡಿಕೆ ಮಾರುಕಟ್ಟೆಗೆ ಬಿಡಬೇಕು ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ. 57 ಸಾವಿರ ರೂಪಾಯಿ ಪ್ರತಿ ಕ್ವಿಂಟಾಲ್ ಅಡಿಕೆ ಇದ್ದಾಗ ಎಷ್ಟೋ ಮಂದಿ ಬಿಡಲಿಲ್ಲ. ಇನ್ನೂ ಧಾರಣೆ ಹೆಚ್ಚಾಗುತ್ತೆ ಎಂಬ ವಿಶ್ವಾಸದಲ್ಲಿದ್ದರು. ಆದ್ರೆ, ಮೂರ್ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ಹನ್ನೊಂದು ಸಾವಿರ ರೂಪಾಯಿ ಕುಂಠಿತವಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಮುಂಬರುವ ದಿನಗಳಲ್ಲಿ ಮತ್ತಷ್ಟು ಅಡಿಕೆ (Areca nut) ಧಾರಣೆ ಏರಿಕೆಯಾಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಈಗಿನ ಧಾರಣೆ ನೋಡಿದರೆ ಮತ್ತೆ ಕುಸಿಯುವ ಆತಂಕವೂ ಕಡಿಮೆಯಾಗಿಲ್ಲ. ಒಂದೆಡೆ ಬರ, ಮತ್ತೊಂದೆಡೆ ಮಳೆ ಇಲ್ಲ. ಮಗದೊಂದೆಡೆ ಅಡಿಕೆ ಧಾರಣೆ ಕುಸಿತವಾಗುತ್ತಿದ್ದು, ರೈತರು ಏನು ಮಾಡಬೇಕೆಂದು ದಿಕ್ಕು ತೋಚದೇ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಭತ್ತ, ಮೆಕ್ಕೆಜೋಳದಂತೆ ಅಡಿಕೆ (Areca nut) ಬೆಳೆಯು ಪ್ರಮುಖ ಬೆಳೆಯಾಗಿದೆ. ಹೊಸ ರಾಶಿ ಅಡಿಕೆ ಪ್ರತಿ ಕ್ವಿಂಟಾಲ್ ಗೆ 1 ಸಾವಿರದ ನೂರು ರೂಪಾಯಿ ಕುಸಿತ ಕಂಡಿದ್ದರೆ, ಹಳೆ ರಾಶಿ ಅಡಿಕೆ(Areca nut)ಯು ಗರಿಷ್ಠ 49, 899 ರಿಂದ 47 ಸಾವಿರ ರೂಪಾಯಿಗೆ ಕುಸಿತ ಆಗಿದೆ. ಹೊಸ ರಾಶಿ ಅಡಿಕೆಯು ಗರಿಷ್ಠ 47,169 ರೂಪಾಯಿಯಿಂದ 46,071 ರೂಪಾಯಿಗೆ ಇಳಿಕೆ ಕಂಡಿದೆ.
ಕಳೆದ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ 47 ಸಾವಿರ ರೂಪಾಯಿ ಗಡಿ ದಾಟಿದ್ದ ಅಡಿಕೆ (Areca nut)ಧಾರಣೆ 1100 ರೂಪಾಯಿಗೆ ಕುಸಿತ ಕಂಡಿದ್ದು, ಜೂನ್ ತಿಂಗಳಿನಲ್ಲಿ 50 ಸಾವಿರ ರೂಪಾಯಿಗೆ ಏರಿತ್ತು. ಆಗಸ್ಟ್ ತಿಂಗಳಿನಲ್ಲಿ ತುಂಬಾನೇ ಇಳಿಕೆ ಕಂಡಿತ್ತು. ಮತ್ತೆ ಸೆಪ್ಟಂಬರ್ ನಲ್ಲಿಯೂ ಇದು ಪುನಾರಾವರ್ತನೆಯಾಗುತ್ತಿದೆ. ಸೆಪ್ಟಂಬರ್ 15 ರಿಂದ ಅಡಿಕೆ ಧಾರಣೆಯು ಕುಸಿತ ಕಾಣುತ್ತಲೇ ಹೋಗುತ್ತಿದೆ.
ಜಿಲ್ಲೆಯ ಪ್ರಮುಖ ಅಡಿಕೆ ಮಾರುಕಟ್ಟೆಯಾದ ಚನ್ನಗಿರಿಯಲ್ಲಿ ಪ್ರತಿ ಕ್ವಿಂಟಾಲ್ ಒಳ್ಳೆಯ ಅಡಿಕೆಯು 41 ಸಾವಿರ ರೂಪಾಯಿಯಿಂದ 47 ಸಾವಿರ ರೂಪಾಯಿಯವರೆಗೆ ಹಾಗೂ 45,064 ರೂಪಾಯಿ ಸರಾಸರಿ ಮಾರುಕಟ್ಟೆಯಲ್ಲಿ ವಹಿವಾಟು
ನಡೆಸಿದೆ. ಒಟ್ಟಿನಲ್ಲಿ ಅಡಿಕೆ ಧಾರಣೆಯ ಏರುಪೇರು ಅಡಿಕೆ ಬೆಳೆಗಾರರ ಆತಂಕಕ್ಕೆ ಕಾರಣವಾಗಿರುವುದಂತೂ ಸತ್ಯ.