SUDDIKSHANA KANNADA NEWS/DAVANAGERE/DATE:31_10_2025
ದಾವಣಗೆರೆ: ಅಡಿಕೆ ಕ್ಯಾನ್ಸರ್ ಕಾರಕವಲ್ಲ, ಬದಲಿಗೆ ಕ್ಯಾನ್ಸರ್ ನಿವಾರಕ. ಹಾಗಾಗಿ, ಅಡಿಕೆ ನಿಷೇಧ ಸರಿಯಲ್ಲ ಎಂದು ನೆಕ್ಸ್ಟ್ ಜೆನ್ ಲೈಫ್ ಸಂಶೋಧಕ ಬಿ. ಆರ್. ರಘು ಅವರು ವಿಶ್ವ ಸಂಸ್ಥೆಗೆ ಮನವಿ ಸಲ್ಲಿಸಿದ್ದಾರೆ. ಈ ಮನವಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ಅಡಿಕೆ ಕ್ಯಾನ್ಸರ್ ನಿವಾರಕ ಎಂಬ ವಿಚಾರ ಮನದಟ್ಟು ಮಾಡುವ ಪ್ರಯತ್ನ ಮಾಡಿದ್ದಾರೆ.
READ ALSO THIS STORY: ಧರ್ಮಸ್ಥಳ ಸೇರಿ ಹಿಂದೂ ಧಾರ್ಮಿಕ ಸ್ಥಳಗಳ ಮೇಲೆ ಬುರುಡೆ ಗ್ಯಾಂಗ್ ನ ಅಪನಂಬಿಕೆ ದಾಳಿ ಸಿದ್ದರಾಮಯ್ಯ ಸರ್ಕಾರ ಹೊರುತ್ತಾ?
ಅಡಿಕೆ ಕ್ಯಾನ್ಸರ್ ಕಾರಕವಲ್ಲವೆಂಬುದಕ್ಕೆ ನೀಡಿರುವ ಕಾರಣಗಳು:
- ಇಲ್ಲಿ ಬಹಳ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ ಈ ಭೂಮಿಯ ಮೇಲೆ ಅಡಿಕೆಯ ಸಸಿ ಅಥವಾ ಮರ ಹುಟ್ಟಿದ ದಿನದಿಂದ ಭಾರತೀಯರು ಬಹುಶಃ ತಿನ್ನುತ್ತಿದ್ದಾರೆ ಮತ್ತು ಭಾರತೀಯ ಸಂಸ್ಕೃತಿಯಲ್ಲಿ ಅಡಿಕೆಗೆ ವಿಶೇಷ ಸ್ಥಾನಮಾನಗಳು ಇವೆ.
- ನೆಕ್ಸ್ಟ್ ಜನ ಲೈವ್ ಸಂಸ್ಥೆಯು ಅಡೆಕೆಯ ಬಗ್ಗೆ ವಿಶೇಷವಾಗಿ ಸಂಶೋಧನೆಗಳನ್ನು ನಡೆಸಿದ್ದು ಇದರಲ್ಲಿ ಅಡಕೆಯು ಔಷಧೀಯ ಗುಣಗಳನ್ನು ಹೊಂದಿದ್ದು ಇದರಿಂದ ಕ್ಯಾನ್ಸರ್ ಅನ್ನು ಗುಣಪಡಿಸಬಹುದಾದ ಅಂಶಗಳು
ಇರುವುದನ್ನು ಪತ್ತೆ ಮಾಡಲಾಗಿದೆ. - ಕೇವಲ ಕ್ಯಾನ್ಸರ್ ಮಾತ್ರವಲ್ಲದೆ ಆಂಟಿ ಡಯಾಬಿಟಿಸ್ ಅಂಡ್ ಫಂಗಸ್ ಆಂಟಿ ಏಜಿಂಗ್ ಆಂಟಿ ಬ್ಯಾಕ್ಟೀರಿಯಲ್ ಹೀಗೆ ವಿವಿಧ ಔಷಧೀಯ ಗುಣಗಳನ್ನು ಅಡಿಕೆಯು ಹೊಂದಿದೆ.
ಲಕ್ಷಾಂತರ ರೈತರು ಅಡಿಕೆಯ ಮೇಲೆ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮತ್ತು ಅಡಿಕೆಯಿಂದ ಕ್ಯಾನ್ಸರ್ ಅನ್ನು ಗುಣಪಡಿಸಬಹುದು ಎನ್ನುವ ವಿಷಯವಾಗಿ ನೆಕ್ಸ್ಟ್ ಜೆನ್ ಸಂಸ್ಥೆಯು ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲು ಸದಾ ಸಿದ್ದವಿದೆ ಎಂದು ವಿಶ್ವಸಂಸ್ಥೆಗೆ ಕಳುಹಿಸಿರುವ ಮನವಿ ಪತ್ರವಲ್ಲಿ ತಿಳಿಸಲಾಗಿದೆ.
ಅಡಕೆ ಬೆಳೆ ಮೇಲೆ ಲಕ್ಷಾಂತರ ರೈತರು ಅವಲಂಬಿತರಾಗಿರುತ್ತಾರೆ. ಹಾಗಾಗಿ ಈ ವಿಷಯವನ್ನು ಸೂಕ್ಷ್ಮವಾಗಿ ಮತ್ತು ಗಂಭೀರವಾಗಿ ಪರಿಗಣಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಸಂಶೋಧಕ ಬಿ. ಆರ್. ರಘು ಅವರು ಒತ್ತಾಯಿಸಿದ್ದಾರೆ.








