SUDDIKSHANA KANNADA NEWS/ DAVANAGERE/ DATE:13-09-2023
ದಾವಣಗೆರೆ: ಅಡಿಕೆ (Areca nut) ಕ್ವಿಂಟಾಲ್ ಗೆ 50 ಸಾವಿರ ರೂಪಾಯಿ ಸ್ಥಿರತೆ ಕಾಯ್ದುಕೊಂಡಿದ್ದು, ಬೆಳೆಗಾರರಲ್ಲಿ ಸಂತಸಕ್ಕೆ ಕಾರಣವಾಗಿದೆ. ಅಡಿಕೆ (Areca nut)ಧಾರಣೆಯು ಏರು ಪೇರಾಗುತ್ತಿದ್ದು, ಅಡಿಕೆ (Areca nut) ಬೆಳೆಗಾರರು ಧಾರಣೆ ಮೇಲೆ ಚಿತ್ತ ನೆಟ್ಟಿರುತ್ತಾರೆ.
ಈ ಸುದ್ದಿಯನ್ನೂ ಓದಿ:
ಭದ್ರಾ ಜಲಾಶಯ(Bhadra Dam)ದಿಂದ ನೀರು ಹರಿಸಲು ಆನ್ ಅಂಡ್ ಆಫ್ ಜಾರಿ? ಡಿಕೆ ಶಿವಕುಮಾರ್ ತೀರ್ಮಾನದತ್ತ ಎಲ್ಲರ ಚಿತ್ತ.. ಕಾಡಾ ಈ ನಿರ್ಧಾರಕ್ಕೆ ಬರುತ್ತಿರುವುದ್ಯಾಕೆ…?
ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ಉತ್ತರ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳ ಅಡಿಕೆ (Areca nut) ಬೆಳೆಗಾರರು ಮಾರುಕಟ್ಟೆ ಧಾರಣೆ ಏನಾಗುತ್ತದೆ ಎಂದು ಕುತೂಹಲದಿಂದ ಕಾಯುತ್ತಲೇ ಇರುತ್ತಾರೆ. 50329 ರೂಪಾಯಿ ಅಡಿಕೆ ಕ್ವಿಂಟಾಲ್ ಗೆ ಧಾರಣೆ ಇದೆ. ಕಳೆದೊಂದು ತಿಂಗಳಿನಿಂದ ಭಾರೀ ಪ್ರಮಾಣದಲ್ಲಿ ಏರಿಕೆ ಹಾಗೂ ಕಡಿಮೆಯಾಗುತಿತ್ತು. ಆದ್ರೆ, ಕಳೆದೊಂದು ವಾರದಿಂದ ಅಡಿಕೆ (Areca nut) ಧಾರಣೆ ಕೇವಲ 100, 500 ಹಾಗೂ 1000 ರೂಪಾಯಿ ಆಸುಪಾಸಿನಲ್ಲಿ ಏರಿಕೆ ಹಾಗೂ ಇಳಿಕೆ ಕಾಣುತ್ತಿದೆ. ಸದ್ಯಕ್ಕೆ ಸ್ಥಿರತೆ ಕಾಯ್ದುಕೊಂಡಿದ್ದು, ಹೊಸ ಅಡಿಕೆಯು ಗರಿಷ್ಠ ಅಂದರೆ 49,581 ರೂಪಾಯಿ ದಾಖಲಿಸಿದೆ.
ಕಳೆದ ಏಪ್ರಿಲ್ ತಿಂಗಳಿನಲ್ಲಿ ಅಡಿಕೆ (Areca nut) ಧಾರಣೆಯು ಕುಸಿತ ಕಂಡಿತ್ತು. ಮಾತ್ರವಲ್ಲ, 45 ಸಾವಿರ ರೂಪಾಯಿಗೂ ಕುಸಿದಿತ್ತು. ಆ ನಂತರ ಚೇತರಿಸಿಕೊಂಡಿತ್ತು. ಮೇ ತಿಂಗಳಿನಲ್ಲಿ 50 ಸಾವಿರ ರೂಪಾಯಿ ಆಸುಪಾಸಿನಲ್ಲಿ ಅಡಿಕೆ (Areca nut) ಧಾರಣೆ ಇತ್ತು. ಜುಲೈ ತಿಂಗಳಿನಲ್ಲಿ 57 ಸಾವಿರ ರೂಪಾಯಿ ಮುಟ್ಟಿದ್ದ ಅಡಿಕೆ ಧಾರಣೆಯು ಬರೋಬ್ಬರಿ ಏಳು ಸಾವಿರ ರೂಪಾಯಿ ಕಡಿಮೆಯಾಗಿದೆ.
ಅಡಿಕೆ (Areca nut) ಧಾರಣೆಯು ಕಳೆದ ನಾಲ್ಕೈದು ತಿಂಗಳಿನಿಂದ ಇಷ್ಟೇ ಇರುತ್ತದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ಧಾರಣೆ ಏರು ಪೇರಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಚನ್ನಗಿರಿ ಅಡಿಕೆ (Areca nut) ಮಾರುಕಟ್ಟೆಯು ಪ್ರಮುಖವಾಗಿದ್ದು, ಇಂದು ಪ್ರತಿ ಕ್ವಿಂಟಲ್ ಉತ್ತಮ ಹಳೆಯದಾದ ರಾಶಿ ಅಡಿಕೆಗೆ 46,512 ರೂಪಾಯಿ ಇದ್ದರೆ, ಗರಿಷ್ಠ ಬೆಲೆ 50,379 ರೂಪಾಯಿ ದಾಖಲಿಸಿದೆ.
ಹೊಸ ರಾಶಿ ಅಡಿಕೆ(Areca nut)ಯು ಕನಿಷ್ಠ 42,0521 ರೂಪಾಯಿಗೆ ಮಾರಾಟವಾಗಿದ್ದರೆ, ಬೆಟ್ಟೆ ಅಡಿಕೆ (Areca nut) ಗರಿಷ್ಠ 37,029 ರೂಪಾಯಿ ಧಾರಣೆ ದಾಖಲಿಸಿದೆ. ಒಟ್ಟಿನಲ್ಲಿ 50 ಸಾವಿರ ರೂಪಾಯಿ ಆಸುಪಾಸಿನಲ್ಲಿ ಅಡಿಕೆ ಧಾರಣೆ ಇರುವುದು ರೈತರ ಸಮಾಧಾನಕ್ಕೆ ಕಾರಣವಾಗಿದೆ.