ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಸ್ವಯಂ ಉದ್ಯೋಗ, ನೇರಸಾಲ, ಜಮೀನು ಖರೀದಿ ಸೇರಿ ವಿವಿಧ ನಿಗಮಗಳಲ್ಲಿ ಅರ್ಜಿ ಆಹ್ವಾನ: ಸೌಲಭ್ಯಕ್ಕೆ ಬೇಕು ಈ ದಾಖಲೆಗಳು!

On: August 13, 2025 2:28 PM
Follow Us:
ಅರ್ಜಿ
---Advertisement---

SUDDIKSHANA KANNADA NEWS/ DAVANAGERE/DATE:13_08_2025

ಬೆಂಗಳೂರು: ಸ್ವಯಂ ಉದ್ಯೋಗ ನೇರಸಾಲ, ಜಮೀನು ಖರೀದಿ, ಕೊಳವೆ ಬಾವಿ ಕೊರೆಸುವುದೂ ಸೇರಿದಂತೆ ವಿವಿಧ ಸೌಲಭ್ಯಗಳನ್ನು ವಿವಿಧ ನಿಗಮಗಳಲ್ಲಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ನಿಗಮಗಳು ಯಾವುವು?
  1. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ
  2. ಕರ್ನಾಟಕ ಆಧಿಜಾಂಬವ ನಿಗಮ
  3. ಕರ್ನಾಟಕ ಭೋವಿ ಆಭಿವೃದ್ದಿ ನಿಗಮ, ಕರ್ನಾಟಕ ಸಫಾಯಿ ಕರ್ಮಾಚಾರಿ ಅಭಿವೃದ್ದಿ ನಿಗಮ
  4. ಕರ್ನಾಟಕ ತಾಂಡ ಅಭಿವೃದ್ದಿ ನಿಗಮ ಯೋಜನೆ:
ಈ ಸುದ್ದಿಯನ್ನೂ ಓದಿ: ಅರಿವು ಶೈಕ್ಷಣಿಕ ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು ದಾಖಲೆಗಳು ಹಾಗೂ ಅರ್ಹತೆ ಏನಿರಬೇಕು?

ಪರಿಶಿಷ್ಟ ಜಾತಿಯ ಜನರ ಆರ್ಥಿಕ ಅಭಿವೃದ್ದಿಗಾಗಿ 2025-26 ನೇ ಸಾಲಿಗೆ ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಉದ್ಯಮಶೀಲತಾ ಅಭಿವೃದ್ದಿ ಯೋಜನೆಯಡಿ ವ್ಯಾಪಾರ ಮತ್ತು ಇತರೆ ಉದ್ಯಮಗಳಿಗೆ ಹಾಗೂ ಸ್ವಾವಲಂಬಿ ಸಾರಥಿ ಯೋಜನೆಯಡಿ ಸರಕು ಸಾಕಾಣಿಕೆ / ಟ್ಯಾಕ್ಸಿ (ಹಳದಿ ಬೋರ್ಡ್) ವಾಹನ ಖರೀದಿಸಲು ಹಾಗೂ ಮೈಕ್ರೋಕ್ರೆಡಿಟ್(ಪ್ರೇರಣಾ) ಯೋಜನೆ (ಮಹಿಳಾ ಸ್ವಸಹಾಯ ಗುಂಪುಗಳಿಗೆ) ಗಂಗಾಕಲ್ಯಾಣ ಯೋಜನೆಯಡಿ – ಕೊಳವೆಬಾವಿಗಾಗಿ ಹಾಗೂ ಭೂ ಒಡೆತನ ಯೋಜನೆಯಡಿ-ಜಮೀನು ಖರೀದಿಸಲು ಈ ನಿಗಮಗಳ ವತಿಯಿಂದ ಸಾಲದ ಅರ್ಜಿಗಳನ್ನು ಆನ್‌ಲೈನ್ ಮೂಲಕ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಆನ್‌ಲೈನ್ ಮೂಲಕ http://sevasindhu.karnataka. gov.in ಈ ವೆಬ್‌ಲಿಂಕ್ ಮೂಲಕ ನೇರವಾಗಿ ಅಥವಾ ಗ್ರಾಮಓನ್, ಕರ್ನಾಟಕ ಓನ್, ಬೆಂಗಳೂರುಓನ್/ಬಾಪೂಜಿ ಸೇವಾ
ಕೇಂದ್ರಗಳ ಸಹಯೋಗದೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ 10-09-2025 ಆಗಿರುತ್ತದೆ.

ಸೌಲಭ್ಯ ಪಡೆಯಲು ಸಾಮಾನ್ಯ ಅರ್ಹತೆಗಳು:
  • ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.
  • ಕಳೆದ 15 ವರ್ಷಗಳಿಂದ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
  • ಅರ್ಜಿದಾರರು ಉದ್ಯಮಶೀಲತಾ ಯೋಜನೆಯಡಿ ಕನಿಷ್ಟ 21 ವರ್ಷದಿಂದ ಗರಿಷ್ಟ 50 ವರ್ಷದೊಳಗಿನ ವಯೋಮಾನದವರಾಗಿರಬೇಕು.
  • ಮೈಕ್ರೋಕ್ರೆಡಿಟ್(ಪ್ರೇರಣಾ) ಯೋಜನೆ(ಮಹಿಳಾ ಸ್ವಸಹಾಯ ಗುಂಪುಗಳಿಗೆ) ಸದಸ್ಯರಿಗೆ ಕನಿಷ್ಟ 21 ರಿಂದ 60 ವರ್ಷ ವಯೋಮಾನದವರಾಗಿರಬೇಕು.
  • ಉದ್ಯಮಶೀಲತಾ ಯೋಜನೆಯಡಿ ಸೌಲಭ್ಯ ಪಡೆಯಲು ಗ್ರಾಮಾಂತರ ಪ್ರದೇಶದಲ್ಲಿ ವಾರ್ಷಿಕ ಆದಾಯ ರೂ.1.50 ಲಕ್ಷ ಹಾಗೂ ನಗರ ಪ್ರದೇಶದಲ್ಲಿ ರೂ.2 ಲಕ್ಷ ಮೀರಬಾರದು.
  • ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ಅರೆಸರ್ಕಾರ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು.
  • ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು.
  • ಉದ್ಯಮಶೀ¯ತಾ ಅಭಿವೃದ್ದಿ ಯೋಜನೆಯಡಿ ಹೈನುಗಾರಿಕೆ ಅಥವಾ ಇತರೆ ಉದ್ದೇಶಗಳಿಗೆ ಘಟಕವೆಚ್ಚದ ಪೈಕಿ ಕನಿಷ್ಟ ಶೇ.50ರಷ್ಟು/ಗರಿಷ್ಟ ರೂ.1.25ಲಕ್ಷ/ಶೇ.70ರಷ್ಟು ಅಥವಾ ಗರಿಷ್ಟರೂ.2 ಲಕ್ಷ ಸಹಾಯಧನ ಹಾಗೂ ಟ್ಯಾಕ್ಸಿ/ ಸರಕುಸಾಗಾಣಿಕೆ/ಫಾಸ್ಟ್ಪುಡ್ ಟ್ರಕ್‌ ಟ್ರೈಲರ್ಮೊ, ಬೈಲ್‌ ಕಿಚನ್ ಫುಡ್‌ ಕಿಯೋಸ್ಕ್ ಉದ್ದೇಶಗಳಿಗೆ ಘಟಕವೆಚ್ಚದ ಪೈಕಿ ಕನಿಷ್ಟ ಶೇ.75 ರಷ್ಟು/ಗರಿಷ್ಟ ರೂ.4 ಲಕ್ಷ ಸಹಾಯಧನವನ್ನು & ನೇರಸಾಲ ಯೋಜನೆಯಡಿ ಕುರಿ ಸಾಲ/ಇತರೆ
    ಉದ್ದೇಶಕ್ಕೆ ಸ.ಧನ ರೂ.0.50 ಲಕ್ಷ & ಅಂಚಿನಹಣಸಾಲ ರೂ.0.50 ಲಕ್ಷ ಮಂಜೂರು ಮಾಡಲಾಗುತ್ತದೆ.
  • ವಾಹನಗಳಿಗೆ ಸೌಲಭ್ಯ ಪಡೆಯಲು ಫಲಾಪೇಕ್ಷಿಗಳು ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು
  • ಮೈಕ್ರೋ ಕ್ರೆಡಿಟ್(ಪ್ರೇರಣಾ) ಯೋಜನೆ (ಮಹಿಳಾ ಸ್ವಸಹಾಯ ಗುಂಪುಗಳಿಗೆ) ಕನಿಷ್ಟ 10 ಮಹಿಳೆಯರು ಸ್ವಸಹಾಯ ಗುಂಪಿನಲ್ಲಿ ಸದಸ್ಯರಿರಬೇಕು
  • ಸಂಘದ ಸದಸ್ಯರು ಬಿ.ಪಿ.ಎಲ್ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಹೊಂದಿರಬೇಕು.
  • ಸ್ವಸಹಾಯ ಸಂಘಗಳು ಸಕ್ಷಮ ಪ್ರಾಧಿಕಾರಗಳಿಂದ ನೊಂದಣಿಯಾಗಿರಬೇಕು
  • ಸಂಘದ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರಬೇಕು.
  • ಸ್ವ ಸಹಾಯ ಸಂಘಕ್ಕೆ ಘಟಕವೆಚ್ಚ ರೂ.5.00 ಲಕ್ಷದಲ್ಲಿ ಸಹಾಯಧನ ರೂ.2.50 ಲಕ್ಷ ಹಾಗೂ ಅಂಚಿನಹಣ ರೂ.2.50 ಲಕ್ಷ ನೀಡಲಾಗುವುದು.

ಹೆಚ್ಚಿನ ಮಾಹಿತಿಯನ್ನು ಸಂಬಂಧಿತ ನಿಗಮದ ಜಿಲ್ಲಾ ಕಚೇರಿ ಮತ್ತು ನಿಗಮಗಳ ವೆಬ್‌ಸೈಟ್‌ನಲ್ಲಿ / ಕಲ್ಯಾಣಮಿತ್ರ ಸಹಾಯವಾಣಿ 9482-300-400 ಸಂಪರ್ಕಿಸಬಹುದು. ಆನ್‌ಲೈನ್ ಮೂಲಕ ಅಗತ್ಯ ದಾಖಲಾತಿಗಳೊಂದಿಗೆ ನಿಗದಿತ ದಿನಾಂಕದೊಳಗೆ ಅರ್ಜಿಗಳನ್ನು ಸಲ್ಲಿಸಲು ಕೋರಿದೆ. ಅಂತಿಮ ದಿನಾಂಕದ ನಂತರ ಸಾಲದ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸ್ವೀಕರಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment