SUDDIKSHANA KANNADA NEWS/ DAVANAGERE/ DATE:22-03-2025
ದಾವಣಗೆರೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ 14 ಹಿರಿಯ ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳಿಗೆ ಫಿಟ್ನೆಸ್ ತರಬೇತಿ ನೀಡುವ ಸಲುವಾಗಿ 14 ಫಿಟ್ನೆಸ್ ತರಬೇತುದಾರರ ಸೇವೆ ಪಡೆಯಲು ಒಂದು ವರ್ಷದ ತಾತ್ಕಾಲಿಕ ಅವಧಿಯವರೆಗೆ ಮಾಸಿಕ ಸಂಚಿತ ವೇತನ, ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ಏಪ್ರಿಲ್ 15 ರ ಸಂಜೆ 4.00 ಗಂಟೆಯೊಳಗೆ ನೃಪತುಂಗ ರಸ್ತೆ, ರಾಜ್ಯ ಯುವ ಕೇಂದ್ರ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಮಹಾ ನಿರ್ದೇಶಕರು, ಬೆಂಗಳೂರು ಇವರಿಗೆ ಸಲ್ಲಿಸಬೇಕು. ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವೆಬ್‍ಸೈಟ್ dyes.karnataka.gov.in ನಲ್ಲಿ ಪಡೆಯಬಹುದು.
ಅರ್ಹತಾ ಮಾನದಂಡಗಳು:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕ್ರೀಡಾ, ವಿಜ್ಞಾನದೊಂದಿಗೆ ಯಾವುದೇ ವಿಷಯದಲ್ಲಿ ಪದವಿ. ಕ್ರೀಡೆ ಮತ್ತು ವ್ಯಾಯಾಮ ವಿಜ್ಞಾನ, ಕ್ರೀಡಾ ತರಬೇತಿ, ಕ್ರೀಡಾ ವಿಜ್ಞಾನ ಹಾಗೂ ದೈಹಿಕ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.ASCA-ಮಟ್ಟ 1, ಮಟ್ಟ-02, ಮಟ್ಟ-03 ಕೋರ್ಸ್‍ಗಳೊಂದಿಗೆ, N.I.Sನಿಂದ ಸಾಮರ್ಥ್ಯ ಮತ್ತು ಕಂಡೀಷನಿಂಗ್‍ನಲ್ಲಿ ಒಂದು ವರ್ಷದ ಡಿಪ್ಲೊಮಾ ಪದವಿ ಪಡೆದಿರಬೇಕು.
ಫಿಟ್‍ನೆಸ್ ತರಬೇತಿಯಲ್ಲಿ ಡಿಪ್ಲೊಮಾದೊಂದಿಗೆ ಯಾವುದೇ ವಿಷಯದಲ್ಲಿ ಪದವಿ ಹೊಂದಿರಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.