SUDDIKSHANA KANNADA NEWS/ DAVANAGERE/ DATE:20-05-2024
ದಾವಣಗೆರೆ: ಅಲ್ಪಸಂಖ್ಯಾತರ ಕಲ್ಯಾಣ. ಇಲಾಖೆ ವತಿಯಿಂದ 2024-25 ನೇ ಸಾಲಿಗೆ ಡಾ| ಎ.ಪಿ.ಜೆ ಅಬ್ದುಲ್ ಕಲಾಂ ಪದವಿ ಪೂರ್ವ ವಸತಿ ಕಾಲೇಜು, ಕೊಂಡಜ್ಜಿ ಗ್ರಾಮ ಇಲ್ಲಿ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ ಪಿ.ಸಿ.ಎಂ.ಬಿ ವಿಷಯಗಳಿಗೆ ಅಂಗ ಮಾಧ್ಯಮದಲ್ಲಿ ಬೋಧಿಸಲು ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇಂಗ್ಲೀಷ್ ಉಪನ್ಯಾಸಕರು ಹುದ್ದೆ ಸಂಖ್ಯೆ-1, ಗಣಿತ ಉಪನ್ಯಾಸಕರು ಹುದ್ದೆ ಸಂಖ್ಯೆ-1, ಭೌತಶಾಸ್ತ್ರ ಉಪನ್ಯಾಸಕರು ಹುದ್ದೆ ಸಂಖ್ಯೆ-1, ರಸಾಯನ ಶಾಸ್ತ್ರ ಉಪನ್ಯಾಸಕರ ಹುದ್ದೆ ಸಂಖ್ಯೆ-1 ಹುದ್ದೆಗೆ ಎಂ.ಎಸ್ಸಿ ಮತ್ತು ಬಿ.ಎಡ್ ವಿದ್ಯಾರ್ಹತೆಯನ್ನು ಹೊಂದಿರಬೇಕು. ಅರ್ಹ ಅಭ್ಯರ್ಥಿಗಳು ಮೇ.30 ರೊಳಗಾಗಿ ವಸತಿ ಕಾಲೇಜಿನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ:9008815296, 8970159714 ನ್ನು ಸಂಪರ್ಕಿಸಬಹುದೆಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ್ ಮಠದ್ ತಿಳಿಸಿದ್ದಾರೆ.
ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ:
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಚನ್ನಗಿರಿ ಇಲ್ಲಿ ಐಟಿಐ ಪ್ರವೇಶಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ ಸಂಸ್ಥೆ ಎನ್ಸಿವಿಟಿ ಯಿಂದ ಸಂಯೋಜನೆ ಪಡೆದ ಎಲೆಕ್ಟ್ರೀಷಿಯನ್, ಫಿಟ್ಟರ್, ಎಂ.ಆರ್&ಎಸ್ಸಿ, ಎಂ.ಇ.ವಿ ಮತ್ತು ಅಡ್ವಾನ್ಸ್ ಸಿ ಎನ್ ಸಿ ವೃತ್ತಿಗಳಿದ್ದು ಈ ವೃತಿಗಳಿಗೆ ಸರ್ಕಾರಿ ಐ.ಟಿ.ಐ, ಚನ್ನಗಿರಿಯಲ್ಲಿ ಅಥವಾ ಹತ್ತಿರದ ಸೈಬರ್ ಸೆಂಟರ್ ನಲ್ಲಿ cite karnataka.gov.in ವೆಬ್ ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಚನ್ನಗಿರಿ ದೂ.ಸಂ: 9844710844 ಮತ್ತು 9738782540 ಸಂಪರ್ಕಿಸಬಹುದೆಂದು ತರಬೇತಿ ಅಧಿಕಾರಿ ಮನೋಹರ್.ಹೆಚ್ ತಿಳಿಸಿದ್ದಾರೆ.