SUDDIKSHANA KANNADA NEWS/ DAVANAGERE/ DATE-09-05-2025
ದಾವಣಗೆರೆ: ಪ್ರಸಕ್ತ ಸಾಲಿನ ಶೈಕ್ಷಣಿಕ ಸಾಲಿಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಚನ್ನಗಿರಿ ಇವರು ಐಟಿಐ ಪ್ರವೇಶಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಎನ್‍ಸಿವಿಟಿ ಯಿಂದ ಸಂಯೋಜನೆ ಪಡೆದ 2 ವರ್ಷದ ವಿವಿಧ ವೃತ್ತಿಗಳಿಗೆ ಸರ್ಕಾರಿ ಐಟಿಐ ಕಾಲೇಜು ಚನ್ನಗಿರಿ ಅಥವಾ ಹತ್ತಿರದ ಸೈಬರ್ ಸೆಂಟರ್‍ನಲ್ಲಿ ಅರ್ಜಿಯನ್ನು ಪಡೆದು ಮೇ.28 ರೊಳಗಾಗಿ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಚನ್ನಗಿರಿ ಮೊ.ಸಂ:9844710844, 9738782540 ನ್ನು ಸಂಪರ್ಕಿಸಲು ತರಬೇತಿ ಅಧಿಕಾರಿ ಮನೋಹರ್.ಹೆಚ್ ತಿಳಿಸಿದ್ದಾರೆ.
ಅರ್ಜಿ ಆಹ್ವಾನ: ಆಗಸ್ಟ್-2025 ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ದಾವಣಗೆರೆಯಲ್ಲಿ ಆನ್‍ಲೈನ್ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಥೆಯಲ್ಲಿ ಲಭ್ಯವಿರುವ ವೃತ್ತಿಗಳಿಗೆ ಪ್ರವೇಶ ಬಯಸುವ ಅರ್ಹ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಇಲಾಖಾ ವೆಬ್‍ಸೈಟ್ www.cite.karnataka.gov.inನಲ್ಲಿ ಯಾವುದೇ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಅಥವಾ ಇಂಟರ್ ನೆಟ್ ಕೆಫೆ, ಸೈಬರ್ ಕೆಫೆನಲ್ಲಿ ಮೇ.28 ರವರೆಗೆ ಅರ್ಜಿ ಸಲ್ಲಿಸಬಹುದೆಂದು ಪ್ರಾಚಾರ್ಯರಾದ ಏಕನಾಥ್ ತಿಳಿಸಿದ್ದಾರೆ.