SUDDIKSHANA KANNADA NEWS/ DAVANAGERE/ DATE:21-10-2024
ದಾವಣಗೆರೆ: ಪ್ರಸಕ್ತ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಇಲಾಖೆಯಿಂದ ನೀರಿನಲ್ಲಿ ಕರಗುವ ರಸಗೊಬ್ಬರ ಘಟಕಕ್ಕೆ ಸಹಾಯಧನ ನೀಡಲು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ವರ್ಗದ ರೈತರಿಂದ ಆರ್ಜಿ ಆಹ್ವಾನಿಸಲಾಗಿದೆ.
ನೀರಿನಲ್ಲಿ ಕರಗುವ ರಸಗೊಬ್ಬರ ಘಟಕದ ಪ್ರತಿ ಹೆಕ್ಟೇರ್ ಗೆ ವೆಚ್ಚ ರೂ.50000 ಇದ್ದು. ಸಾಮಾನ್ಯ ವರ್ಗದ ರೈತರಿಗೆ ಶೇ.40 ರಂತೆ ರೂ.20000 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ.50ರಂತೆ ರೂ.25000 ಸಹಾಯಧನವನ್ನು ನೀಡಲಾಗುವುದು.
ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರು ಅನುಮೋದಿತ ಕಂಪನಿಯಿಂದ ರಸಗೊಬ್ಬರ ಖರೀದಿಸಿದ ಮೊತ್ತದ ಬಿಲ್ಲುಗಳನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ಜಗಳೂರು ಇಲ್ಲಿಗೆ ಅ.30 ರೊಳಗೆ ಸಲ್ಲಿಸಿದ್ದಲ್ಲಿ ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಪ್ರಸನ್ನ ಕುಮಾರ್.ಜಿ.ಹೆಚ್ ರೈ.ಸಂ.ಕೇಂದ್ರ ಕಸಬಾ ಮತ್ತು ಬಿಳಿಚೋಡು ಮೊ.ಸಂ. 9108338179, ಸುನೀಲ್ ಕುಮಾರ್. ಹೆಚ್.ಟಿ ರೈ.ಸಂ. ಕೇಂದ್ರ ಸೂಕ್ತ ಮೊ.ಸಂ. 7899942287 ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ಜಗಳೂರು ಇಲ್ಲಿ ಸಂಪರ್ಕಿಸಲು ತಿಳಿಸಲಾಗಿದೆ.