ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಸೇಬಿನ ಮೇಲೆ ಸ್ಟಿಕ್ಕರ್​ ಅಂಟಿಸೋದು ಏಕೆ ಗೊತ್ತಾ?

On: June 14, 2024 11:49 AM
Follow Us:
---Advertisement---

ನೀವು ಅಂಗಡಿಯಲ್ಲಿ ಸೇಬನ್ನು ಖರೀದಿಸುವಾಗ ಅದರ ಮೇಲೆ ಸ್ಟಿಕ್ಕರ್ ಅಂಟಿಸಿದ್ದರೆ, ಅದು ಹೊಸದು, ದುಬಾರಿ ಮತ್ತು ಗುಣಮಟ್ಟದ್ದು ಎಂದು ನಾವು ಭಾವಿಸುತ್ತೇವೆ. ಆದರೆ ಸೇಬಿನ ಮೇಲೆ ಸ್ಟಿಕ್ಕರ್ ಅಂಟಿಸುವುದರ ಹಿಂದಿರುವ ಅಸಲಿ ಕಾರಣವೇನು ಎಂದು ನಿಮಗೆ ತಿಳಿದಿದ್ಯಾ? ಹಆಗಾದ್ರೆ ಈ ಸ್ಟೋರಿ ಓದಿ.

ಹೌದು, ಸಾಮಾನ್ಯವಾಗಿ ಮಾರುಕಟ್ಟೆ ಅಥವಾ ಅಂಗಡಿಗಳಲ್ಲಿ ಸೇಬು ಹಾಗೂ ಇತರ ಹಣ್ಣುಗಳನ್ನು ಖರೀದಿಸುವಾಗ ಅದರ ಮೇಲೆ ಸ್ಟಿಕ್ಕರ್ ಅಂಟಿಸಿರುವುದನ್ನು ನಾವು ನೋಡಿರುತ್ತೇವೆ. ಇಂತಹ ಸೇಬನ್ನು ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಿ ತಿನ್ನಲು ಮುಂದಾದಾಗ ಸೇಬು ಕೊಳೆತು ಹೋಗಿರುತ್ತದೆ ಅಥವಾ ಸ್ಟಿಕ್ಕರ್ ಅಂಟಿಸಿರುವ ಕಡೆ ಸೋಂಕಿತವಾಗಿರುತ್ತದೆ. ಮೊದಲೆಲ್ಲಾ ಸ್ಟಿಕ್ಕರ್ ಅಂಟಿಸಿರುವ ಸೇಬು ರಫ್ತು ಗುಣಮಟ್ಟದ್ದು, ಬೆಲೆ ಹೆಚ್ಚಿರುವುದರಿಂದ ಸ್ಟಿಕ್ಕರ್ ಅಂಟಿಸಲಾಗಿದೆ ಎಂದು ಅಂಗಡಿಯವರು ಮಾರಾಟ ಮಾಡುತ್ತಿದ್ದರು. ಆದರೆ ಕೆಲವೊಮ್ಮೆ ಕೆಟ್ಟ ಭಾಗವನ್ನು ಮುಚ್ಚಲು ಅಥವಾ ಕೊಳೆತವನ್ನು ಮರೆಮಾಡಲು ಸ್ಟಿಕ್ಕರ್ ಅನ್ನು ಸೇಬಿನ ಮೇಲೆ ಅಂಟಿಸಿ ಕೆಲ ಮಂದಿ ಮೋಸ ಮಾಡುತ್ತಾರೆ.

ಸಾಮಾನ್ಯವಾಗಿ ನಾವು ಸೇಬನ್ನು ತಿನ್ನಲು ತೆಗೆದುಕೊಂಡಾಗ, ನಾವು ಸ್ಟಿಕ್ಕರ್ ಅನ್ನು ತೆಗೆದು ಅದರಲ್ಲಿರುವ ವಿಷಯಗಳನ್ನು ಓದುವುದಿಲ್ಲ. ಪ್ರತಿ ಸೇಬಿನ ಮೇಲೆ ಸ್ಟಿಕ್ಕರ್ ಅಂಟಿಸಿ ಮಾರಾಟ ಮಾಡಲಾಗುತ್ತದೆ. ಆದರೆ ಈ ಬಗ್ಗೆ 99% ಜನರಿಗೆ ತಿಳಿದಿಲ್ಲ.

ಈಗ ಸೇಬು ಮಾತ್ರವಲ್ಲದೇ ಕಿತ್ತಳೆಯ ಮೇಲೂ ಸ್ಟಿಕ್ಕರ್ ಅಂಟಿಸಿ ಮಾರಾಟ ಮಾಡಲಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ. ಸ್ಟಿಕ್ಕರ್ಗಳೊಂದಿಗೆ ಫಳ-ಫಳ ಅಂತ ಹೊಳೆಯುವ ಸೇಬುಗಳನ್ನು ಕಂಡು ಸಾಕಷ್ಟು ಮಂದಿ ಇವು ದುಬಾರಿ ಎಂದು ಭಾವಿಸುತ್ತಾರೆ. ಅನೇಕ ಬಾರಿ ಅಂಗಡಿ ಮಾರಾಟಕಾರರು ಸ್ಟಿಕ್ಕರ್ ಅಂಟಿಸಿದ ಸೇಬುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಆದರೆ, ಈ ಸ್ಟಿಕ್ಕರ್ ನೇರವಾಗಿ ಆರೋಗ್ಯಕ್ಕೆ ಸಂಬಂಧಿಸಿದೆ. ಆದ್ದರಿಂದ, ನೀವು ಸೇಬನ್ನು ಖರೀದಿಸಿದಾಗ, ಅದಕ್ಕೆ ಲಗತ್ತಿಸಲಾದ ಸ್ಟಿಕ್ಕರ್ ಮೇಲೆ ಏನಿದೆ ಎಂಬುವುದನ್ನು ಓದಿ. ಏಕೆಂದರೆ ನೀವು ತಿನ್ನುವ ಸೇಬು ಅದರ ಗುಣಮಟ್ಟವನ್ನು ತಿಳಿಸುತ್ತದೆ.

ಸೇಬಿನ ಮೇಲೆ ಅಂಟಿಸಿರುವ ಸ್ಟಿಕ್ಕರ್ನಲ್ಲಿ ಹಣ್ಣಿನ ಗುಣಮಟ್ಟ ಮತ್ತು ಅದನ್ನು ಹೇಗೆ ಬೆಳೆಸಲಾಗಿದೆ ಎಂಬುವುದರ ಬಗ್ಗೆ ವಿವರಗಳಿರುತ್ತದೆ. ಅಲ್ಲದೇ, ಕೆಲವು ಸ್ಟಿಕ್ಕರ್ಗಳ ಮೇಲೆ ನಾಲ್ಕು-ಅಂಕಿಯ ಸಂಖ್ಯೆಗಳನ್ನು ಬರೆಯಲಾಗಿರುತ್ತದೆ. ಅಂದರೆ, 4026, 4987 ಇತ್ಯಾದಿ ಸಂಖ್ಯೆಗಳು ಅದರಲ್ಲಿರುತ್ತವೆ. ಇದರ ಅರ್ಥವು ಈ ಹಣ್ಣುಗಳನ್ನು ಕೀಟನಾಶಕಗಳು ಮತ್ತು ರಾಸಾಯನಿಕಗಳನ್ನು ಬಳಸಿ ಬೆಳೆಸಲಾಗಿದೆ ಎಂದು ಸೂಚಿಸುತ್ತದೆ. ಇವುಗಳಲ್ಲಿ ಕೀಟನಾಶಕಗಳನ್ನು ವ್ಯಾಪಕವಾಗಿ ಬಳಸಲಾಗಿರುತ್ತದೆ. ಹೀಗಾಗಿ ಈ ಹಣ್ಣುಗಳು ಕಡಿಮೆ ಬೆಲೆಗೆ ಸಿಗುತ್ತದೆ. ಹಾಗಾಗಿ ಇವುಗಳನ್ನು ಖರೀದಿಸಿ ತಿನ್ನುತ್ತವೆ. ಆದರೆ ಈ ಹಣ್ಣನ್ನು ಬೆಳೆಯಲು ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸಲಾಗಿರುತ್ತದೆ.

ಒಂದೊಂದು ಸ್ಟಿಕ್ಕರ್ಗೂ ಒಂದೊಂದು ಅರ್ಥವಿದ್ದರೂ ಕೆಲವರು ಇದನ್ನು ಬಳಸಿ ನಕಲಿ ಸ್ಟಿಕ್ಕರ್ಗಳನ್ನು ತಯಾರಿಸಿ ಹಣ್ಣುಗಳ ಮೇಲೆ ಅಂಟಿಸುತ್ತಾರೆ. ರಫ್ತು ಗುಣಮಟ್ಟ, ಉತ್ತಮ ಗುಣಮಟ್ಟ ಮತ್ತು ಪ್ರೀಮಿಯಂ ವೈವಿಧ್ಯತೆಯನ್ನು ಕ್ಲೈಮ್ ಮಾಡುವ ಮೂಲಕ ಗ್ರಾಹಕರಿಂದ ಹೆಚ್ಚಿನ ಹಣವನ್ನು ವಸೂಲಿ ಮಾಡಲು ಈ ರೀತಿಯ ನಕಲಿ ಸ್ಟಿಕ್ಕರ್ಗಳನ್ನು ಬಳಸಲಾಗಿರುತ್ತದೆ. ಆದ್ದರಿಂದ ಸ್ಟಿಕ್ಕರ್ ಇರುವ ಹಣ್ಣುಗಳನ್ನು ಖರೀದಿಸುವಾಗ ಬಹಳ ಜಾಗರೂಕರಾಗಿರಿ.

Join WhatsApp

Join Now

Join Telegram

Join Now

Leave a Comment