ಪಳಪಳ ಹೊಳೆವ ಸೇಬನ್ನು ಆಹಾ ಎಂದು ಬಾಯಿಗಿಡುವ ಮುನ್ನ ಇವು ಎಷ್ಟು ಸುರಕ್ಷಿತ ಎಂಬುದರ ಬಗ್ಗೆ ಚಿಂತಿಸಿ. ಈ ಸೇಬನ್ನು ನಾವು ಸಿಪ್ಪೆ ಸುಲಿಯದೆ ತಿಂದರೆ ಹಲವು ಹಲವಾರು ಅನಾರೋಗ್ಯ ಸಮಸ್ಯೆಗಳು ಕಾಡುತ್ತವೆ.
ಹೌದು. ಹೊಸ ಸಂಶೋಧನೆಯೊಂದರ ಪ್ರಕಾರ, ಸೇಬು ಹಣ್ಣನ್ನು ನಾವು ಬಹಳ ಅವೈಜ್ಞಾನಿಕವಾಗಿ ತೊಳೆಯುತ್ತೇವೆ. ಅದರ ಸಿಪ್ಪೆಯ ಮೇಲಷ್ಟೇ ಅಲ್ಲ, ಅದರ ಒಳಗಿನ ಹಣ್ಣಿನ ಭಾಗದವರೆಗೂ ರಾಸಾಯನಿಕಗಳ ಪ್ರಭಾವ ಹೋಗಿರುತ್ತವೆ. ಹಾಗಾಗಿ, ಸೇಬು ಹಣ್ಣನ್ನು ತಿನ್ನುವ ಸಂದರ್ಭ ಅದರ ಸಿಪ್ಪೆಯನ್ನು ತೆಗೆದು ತಿನ್ನುವುದೇ ಒಳ್ಳೆಯದು ಎಂದು ವರದಿ ಸಲಹೆ ಮಾಡಿದೆ. ಇದರಿಂದ ಒಂದಿಷ್ಟು ಪ್ರಮಾಣದಲ್ಲಿ ರಾಸಾಯನಿಕ ಹೊಟ್ಟೆ ಸೇರುವುದನ್ನು ತಪ್ಪಿಸಬಹುದು ಎಂದಿದೆ.