SUDDIKSHANA KANNADA NEWS/ DAVANAGERE/ DATE:31-01-2025
ದಾವಣಗೆರೆ: ಚನ್ನಗಿರಿ ಮೆಡಿಕಲ್ ಶಾಪ್ ಮಾಲೀಕ ಕಾಮುಕ ಅಮ್ಜದ್ ವಿರುದ್ಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಪೋಕ್ಸೋ ಕೇಸ್ ದಾಖಲಾಗಿದೆ.
ಗುರುವಾರದಂದು ಪಿರ್ಯಾದುದಾರ ಚನ್ನಗಿರಿ ಪೊಲೀಸ್ ಠಾಣೆಯ ಎಎಸ್ಐ ಶಶಿಧರ್ ಹೆಚ್. ಎನ್. ಅವರು ಠಾಣೆಗೆ ಹಾಜರಾಗಿ ಗಣಕೀಕೃತ ದೂರು ನೀಡಿದ್ದಾರೆ.
ಈ ದಿನ ನಾನು ಕರ್ತವ್ಯದಲ್ಲಿರುವಾಗ ಸಂಜೆ ಸಮಯದಲ್ಲಿ ನನ್ನ ಮೊಬೈಲ್ ಗೆ ಬಾತ್ಮೀದಾರರೊಬ್ಬರು ಒಂದು ವೀಡಿಯೋವನ್ನು ಕಳುಹಿಸಿದ್ದರು. ನಾನು ಆ ವೀಡಿಯೋವನ್ನು ನೋಡಲಾಗಿ ಒಬ್ಬ ವ್ಯಕ್ತಿಯು ಒಂದು ಬಾಲಕಿಯಂತೆ ಕಾಣುವ ಹೆಣ್ಣುಮಗಳನ್ನು ಬಲವಂತವಾಗಿ ಅತ್ಯಾಚಾರ ಮಾಡುತ್ತಿದ್ದು, ಈ ಅತ್ಯಾಚಾರ ಮಾಡುವ ವೀಡಿಯೋವನ್ನು ಯಾವುದೋ ಮೊಬೈಲ್ ನಲ್ಲೋ ಅಥವಾ ವಿಡಿಯೋ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವ ಬಗ್ಗೆ ಇರುತ್ತದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಗ್ಗೆ ನನಗೆ ಮಾಹಿತಿ ಬಂದಿದ್ದು ಈ ಬಗ್ಗೆ ನಾನು ನನ್ನ ಬಾತ್ಮೀದಾರರಿಗೆ ಫೋನ್ ಮಾಡಿ ವಿಚಾರಿಸಿ ಖಚಿತಪಡಿಸಿಕೊಂಡಿದ್ದು, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ.
ಮೇಲಾಧಿಕಾರಿಗಳ ಸೂಚನೆಯಂತೆ, ಯಾರೋ ವ್ಯಕ್ತಿ ಯಾವಾಗಲೋ ಯಾವುದೋ ಒಂದು ಬಾಲಕಿಯಂತೆ ಕಾಣುವ ಹೆಣ್ಣುಮಗಳನ್ನು ಯಾವುದೋ ಮನೆಗೆ ಕರೆದುಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರ ಮಾಡಿದ್ದಲ್ಲದೆ ವಿಡಿಯೋ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಈ ಬಗ್ಗೆ ತಾವು ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಠಾಣಾ ಗುನ್ನೆ ನಂ: 13/2025 ಕಲಂ: 67, 67(ಎ), 67(ಬಿ) ಐಟಿ ಆಕ್ಟ್ ಮತ್ತು ಕಲಂ 77, 294, 64 BNS ACT -2023 ಹಾಗೂ ಕಲಂ 4, 6, 14, 15 ಪೋಕ್ಸೋ ಆಕ್ಟ್ 2012 ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಪ್ರಕರಣದ ಆರೋಪಿತನ ಪತ್ತೆಗಾಗಿ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಸಿಇಎನ್ ಅಪರಾಧ ಠಾಣೆಯ ಡಿವೈಎಸ್ಪಿ ಪದ್ಮಶ್ರೀ ಗುಂಜೀಕರ್ ಮಾರ್ಗದರ್ಶನದಲ್ಲಿ ಠಾಣಾ ಸಿಬ್ಬಂದಿಯವರಾದ ಪ್ರಕಾಶ್, ಗೋವಿಂದರಾಜು ಅವರೊನ್ನೊಳಗೊಂಡ ತಂಡವು ಆರೋಪಿತನಾದ ದೇವರಾಜ್ ಅರಸ್ ಬಡಾವಣೆಯ ಸಿ ಬ್ಲಾಕ್ ನಿವಾಸಿ ಅಮ್ಜದ್ (56)ನನ್ನು ಗುರುವಾರ ಪತ್ತೆ ಮಾಡಿ ಬಂಧಿಸಿದ್ದಾರೆ. ಆರೋಪಿಯನ್ನು ಘನ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಹಾಲಿ ನ್ಯಾಯಾಂಗ ಬಂಧನಲ್ಲಿದ್ದಾನೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.