Home ದಾವಣಗೆರೆ ಅಯೋಧ್ಯೆ ರಾಮಮಂದಿರ ಪ್ರಸಾದದ ಹೆಸರಲ್ಲಿ ನಕಲಿ ಸಿಹಿ ಮಾರಾಟ: ಅಮೆಜಾನ್‌ಗೆ ₹1 ಲಕ್ಷ ದಂಡ!
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರುವಾಣಿಜ್ಯ

ಅಯೋಧ್ಯೆ ರಾಮಮಂದಿರ ಪ್ರಸಾದದ ಹೆಸರಲ್ಲಿ ನಕಲಿ ಸಿಹಿ ಮಾರಾಟ: ಅಮೆಜಾನ್‌ಗೆ ₹1 ಲಕ್ಷ ದಂಡ!

Share
ಅಯೋಧ್ಯೆ
Share

ನವದೆಹಲಿ: ಸಾಮಾನ್ಯ ಸಿಹಿ ತಿಂಡಿಗಳನ್ನು ‘ಶ್ರೀ ರಾಮ ಮಂದಿರ ಅಯೋಧ್ಯೆ ಪ್ರಸಾದ’ ಎಂದು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟ ಮಾಡಲು ಅವಕಾಶ ನೀಡಿದ್ದಕ್ಕಾಗಿ ಈ-ಕಾಮರ್ಸ್ ದೈತ್ಯ ಅಮೆಜಾನ್ (Amazon) ಸಂಸ್ಥೆಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ₹1 ಲಕ್ಷ ದಂಡ ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 15 ದಿನಗಳ ಒಳಗೆ ದಂಡದ ಮೊತ್ತವನ್ನು ಠೇವಣಿ ಮಾಡುವಂತೆ ಸೂಚಿಸಲಾಗಿದೆ.

ಪ್ರಕರಣದ ಹಿನ್ನೆಲೆ:

ಚಾಂದು ಟ್ರೇಡಿಂಗ್ ಕಂಪನಿಯ ‘ಬಿಹಾರಿ ಬ್ರದರ್ಸ್’ ಬ್ರ್ಯಾಂಡ್ ಅಡಿಯಲ್ಲಿ ತುಪ್ಪದ ಲಾಡು, ಖೋಯಾ ಲಾಡು, ಬೂಂದಿ ಲಾಡು ಮತ್ತು ಹಸುವಿನ ಹಾಲಿನ ಪೇಡಾಗಳನ್ನು ಅಮೆಜಾನ್‌ನಲ್ಲಿ ಲಿಸ್ಟ್ ಮಾಡಲಾಗಿತ್ತು. ಈ ಉತ್ಪನ್ನಗಳನ್ನು ‘ಶ್ರೀ ರಾಮ ಮಂದಿರ ಅಯೋಧ್ಯೆ ಪ್ರಸಾದ’ ಮತ್ತು “ಶ್ರೀರಾಮನ ಆಶೀರ್ವಾದ” ಎಂಬ ಶೀರ್ಷಿಕೆಯೊಂದಿಗೆ ಮಾರಾಟ ಮಾಡಲಾಗುತ್ತಿತ್ತು. ಆದರೆ, ಈ ಸಿಹಿ ತಿಂಡಿಗಳನ್ನು ಮಾರಾಟ ಮಾಡಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ಯಾವುದೇ ಅಧಿಕೃತ ಅನುಮತಿ ಅಥವಾ ಅನುಮೋದನೆ ಪಡೆದಿರಲಿಲ್ಲ.

ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ನೀಡಿದ ದೂರಿನ ಆಧಾರದ ಮೇಲೆ ಸಿಎಸ್‌ಪಿಎ ಈ ಕಠಿಣ ಕ್ರಮ ಕೈಗೊಂಡಿದೆ.

ಅಮೆಜಾನ್ ವಾದ ತಳ್ಳಿ ಹಾಕಿದ ಪ್ರಾಧಿಕಾರ:

ತಾನು ಕೇವಲ ಒಂದು ಡಿಜಿಟಲ್ ‘ಮಧ್ಯವರ್ತಿ’ (Intermediary) ಆಗಿದ್ದು, ಮೂರನೇ ವ್ಯಕ್ತಿಗಳ ಉತ್ಪನ್ನಗಳ ಲಿಸ್ಟಿಂಗ್‌ಗೆ ಹೊಣೆಗಾರನಲ್ಲ ಎಂಬ ಅಮೆಜಾನ್‌ನ ವಾದವನ್ನು ಪ್ರಾಧಿಕಾರ ಸಂಪೂರ್ಣವಾಗಿ ತಳ್ಳಿಹಾಕಿದೆ. ಗ್ರಾಹಕರಿಗೆ ಮಾರಾಟಗಾರರ ಸರಿಯಾದ ಮಾಹಿತಿ ಹಾಗೂ ಕುಂದುಕೊರತೆ ಅಧಿಕಾರಿಯ ವಿವರಗಳನ್ನು ಸ್ಪಷ್ಟವಾಗಿ ನೀಡುವುದು ಪ್ಲಾಟ್‌ಫಾರ್ಮ್‌ನ ಜವಾಬ್ದಾರಿಯಾಗಿದೆ ಎಂದು ತಿಳಿಸಿದೆ.

10 ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೂ ನಿಯಮ ವಿಸ್ತರಣೆ:

ಈ ಆದೇಶದ ಬೆನ್ನಲ್ಲೇ CCPA ತನ್ನ ನಿರ್ದೇಶನಗಳನ್ನು ಮತ್ತಷ್ಟು ವಿಸ್ತರಿಸಿದೆ. ಶ್ರೀ ರಾಮ ಜನ್ಮಭೂಮಿ, ತಿರುಪತಿ ದೇವಸ್ಥಾನ, ಮಾತಾ ವೈಷ್ಣೋ ದೇವಿ ಮತ್ತು ಜಗನ್ನಾಥ ದೇವಾಲಯ ಸೇರಿದಂತೆ ದೇಶದ 10 ಪ್ರಮುಖ ಧಾರ್ಮಿಕ ಸಂಸ್ಥೆಗಳ ಅಧಿಕೃತ ಅನುಮತಿಯ ಪತ್ರವಿಲ್ಲದೆ, ಯಾವುದೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ‘ಪ್ರಸಾದ’, ‘ಮಹಾಪ್ರಸಾದ’ ಅಥವಾ ‘ಭೋಗ್’ ಎಂಬ ಪದಗಳನ್ನು ಬಳಸಿ ಉತ್ಪನ್ನ ಮಾರಾಟ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ

Share

Leave a comment

Leave a Reply

Your email address will not be published. Required fields are marked *

Related Articles