Home ಕ್ರೈಂ ನ್ಯೂಸ್ ಅತ್ಯಾಚಾರ, ಖಾಸಗಿ ಫೋಟೋ ಬಳಸಿ ಬ್ಲ್ಯಾಕ್ ಮೇಲ್: 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸುಲಿಗೆ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಅತ್ಯಾಚಾರ, ಖಾಸಗಿ ಫೋಟೋ ಬಳಸಿ ಬ್ಲ್ಯಾಕ್ ಮೇಲ್: 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸುಲಿಗೆ!

Share
ಫೋಟೋ
Share

ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಹಪಾಠಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ನಿರಂತರವಾಗಿ ಅತ್ಯಾಚಾರವೆಸಗಿ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ 14 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ಸುಲಿಗೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಆರೋಪಿಯನ್ನು ಹಾರ್ದಿಕ್ ಪಂಚಾಲ್ ಎಂದು ಗುರುತಿಸಲಾಗಿದ್ದು, ಈತ ತಲೆಮರೆಸಿಕೊಂಡಿದ್ದಾನೆ. ಡಿಸೆಂಬರ್ 2025 ರಲ್ಲಿ ಕಾಲೇಜಿನಲ್ಲಿ ಪರಿಚಯವಾದ ಇವರು ಸ್ನೇಹ ಬೆಳೆಸಿದ್ದರು.

ಮದುವೆಯಾಗುವುದಾಗಿ ನಂಬಿಸಿ ಹೋಟೆಲ್‌ಗೆ ಕರೆದೊಯ್ದು ಆರೋಪಿ ದೌರ್ಜನ್ಯ ಎಸಗಿದ್ದಾನೆ. ಬಳಿಕ ತಂದೆಯ ಬ್ಯುಸಿನೆಸ್‌ನಲ್ಲಿ ನಷ್ಟವಾಗಿದೆ ಎಂದು ಹೇಳಿ ಹಣಕ್ಕೆ ಪೀಡಿಸಿದ್ದಾನೆ.

ಯುವತಿ ನಿರಾಕರಿಸಿದಾಗ ಖಾಸಗಿ ಫೋಟೋಗಳನ್ನು ಲೀಕ್ ಮಾಡುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಭಯಗೊಂಡ ಯುವತಿ ಮನೆಯಲ್ಲಿದ್ದ ತನ್ನ ಹಿರಿಯ ಸಹೋದರಿಗೆ ಸೇರಿದ 14 ಲಕ್ಷ ರೂ. ಮೌಲ್ಯದ 144.51 ಗ್ರಾಂ ಚಿನ್ನಾಭರಣವನ್ನು ಹಂತ ಹಂತವಾಗಿ ನೀಡಿದ್ದಾಳೆ.

ಸಹೋದರಿ ಮದುವೆ ಅಥವಾ ಇತರೆ ಕಾರ್ಯಕ್ಕೆಂದು ಲಾಕರ್ ಪರಿಶೀಲಿಸಿದಾಗ ಚಿನ್ನ ಕಳ್ಳತನವಾಗಿರುವುದು ಗೊತ್ತಾಗಿದೆ. ಯುವತಿ ಮನೆಯವರ ವಿಚಾರಣೆಯಲ್ಲಿ ವಿಷಯ ಬಯಲಾಗಿದೆ.

ಪೋಷಕರು ಆರೋಪಿಯನ್ನು ಸಂಪರ್ಕಿಸಿದಾಗ ಆತ ಬೆದರಿಕೆ ಮುಂದುವರಿಸಿದ್ದಾನೆ. ಕೊನೆಗೆ ಸಂತ್ರತಳು ನಿಕೋಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles