SUDDIKSHANA KANNADA NEWS/ DAVANAGERE/ DATE:15-10-2023
ನವದೆಹಲಿ: ಇಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ (Cricket) ಪಂದ್ಯದಲ್ಲಿ ಅಫ್ಘಾನಿಸ್ತಾನವು ಹಾಲಿ ಚಾಂಪಿಯನ್ ಇಂಗ್ಲೆಂಡ್‌ಗೆ 69 ರನ್‌ಗಳಿಂದ ಸೋಲು ಉಣಿಸುವ ಮೂಲಕ ಆಘಾತ ನೀಡಿತು.
Read Also This Story:
Israel: ಮೊದಲು ಬಂದವರಿಗೆ ಮೊದಲ ಆದ್ಯತೆ: ಯುದ್ಧಪೀಡಿತ ಸ್ಥಳದಿಂದ ಭಾರತಕ್ಕೆ ಬರುತ್ತಿದ್ದಾರೆ ಭಾರತೀಯರು: ಇಸ್ರೇಲ್ ನಲ್ಲಿ ಎಷ್ಟು ಭಾರತೀಯರಿದ್ದಾರೆ ಗೊತ್ತಾ…?
ಬ್ಯಾಟಿಂಗ್‌ಗೆ ಇಳಿದ ಅಫ್ಘಾನಿಸ್ತಾನವು 284 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇಂಗ್ಲೆಂಡ್ ಅನ್ನು 215 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಅತಿದೊಡ್ಡ ಗೆಲುವು ದಾಖಲಿಸಿ, ಇತಿಹಾಸ ಬರೆಯಿತು.
ಇದಕ್ಕೂ ಮೊದಲು, ರಹಮಾನುಲ್ಲಾ ಗುರ್ಬಾಜ್ ಅಫ್ಘಾನಿಸ್ತಾನದ ಪರ 57 ಎಸೆತಗಳಲ್ಲಿ 80 ರನ್ ಗಳಿಸಿ ಗರಿಷ್ಠ ಸ್ಕೋರ್ ಮಾಡಿದರು. ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ 16 ಓವರ್‌ಗಳಲ್ಲಿ 114 ರನ್‌ಗಳ ಮೊದಲ ವಿಕೆಟ್ ಜೊತೆಯಾಟದಲ್ಲಿ 28 ರನ್ ಬಾರಿಸಿದರು. ಇಕ್ರಮ್ ಅಲಿಖಿಲ್ 66 ಎಸೆತಗಳಲ್ಲಿ 58 ರನ್ ಗಳಿಸಿದರು. ಆದರೆ ಸ್ಟಾರ್ ಲೆಗ್ ಸ್ಪಿನ್ನರ್ ರಶೀದ್ ಖಾನ್ ಮತ್ತು ಮುಜೀಬ್ ಉರ್ ರೆಹಮಾನ್ ಕ್ರಮವಾಗಿ 23 ಮತ್ತು 28 ರನ್ ಗಳಿಸಿದರು. ಅಫ್ಘಾನಿಸ್ತಾನವು ಆರು ವಿಕೆಟ್‌ಗೆ 190 ರಿಂದ ಚೇತರಿಸಿಕೊಂಡು ಉತ್ತಮ ಮೊತ್ತ ಗಳಿಸಿತು. 285 ರನ್ ಗಳ ಸವಾಲಿನ ಗುರಿ ನೀಡಿತು.
ಗುರಿ ಬೆನ್ನತ್ತಿದ ಇಂಗ್ಲೆಂಡ್ ಗುರಿ ಮುಟ್ಟುವಲ್ಲಿ ವಿಫಲವಾಯಿತು. ಹ್ಯಾರಿ ಬ್ರೂಕ್ 61 ಎಸೆತಗಳಲ್ಲಿ 66 ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಆಗಲಿಲ್ಲ. ರಶೀದ್ ಖಾನ್ (3/37) ಮತ್ತು ಮುಜೀಬ್ ಉರ್ ರಹಮಾನ್ (3/51)
ನೇತೃತ್ವದ ಆಫ್ಘನ್ ಬೌಲರ್‌ಗಳ ಶಿಸ್ತುಬದ್ಧ ಪ್ರಯತ್ನವನ್ನು ಎದುರಿಸಲು ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳಿಗೆ ಆಗಲಿಲ್ಲ. ಮೊಹಮ್ಮದ್ ನಬಿ (2/16), ಫಜಲ್ಹಕ್ ಫಾರೂಕಿ (1/50) ಮತ್ತು ನವೀನ್-ಉಲ್-ಹಕ್ (1/44), ಮುಹಮ್ಮದ್ ನಬಿ (2/16), ಫಜಲ್ಹಕ್ ಫಾರೂಕಿ (1/50) ಮತ್ತು ನವೀನ್-ಉಲ್- ಹಕ್ (1/44) ಬೌಲಿಂಗ್ ಗಮನ ಸೆಳೆಯಿತು.
ಸಂಕ್ಷಿಪ್ತ ಸ್ಕೋರ್‌ಗಳು:
ಅಫ್ಘಾನಿಸ್ತಾನ: 49.5 ಓವರ್‌ಗಳಲ್ಲಿ 284
ಅಫ್ಘಾನಿಸ್ತಾನ: 49.5 ಓವರ್‌ಗಳಲ್ಲಿ 284 (ರಹಮಾನುಲ್ಲಾ ಗುರ್ಬಾಜ್ 80, ಇಕ್ರಮ್ ಅಲಿಖಿಲ್ 58; ಆದಿಲ್ ರಶೀದ್ 3/42).
ಇಂಗ್ಲೆಂಡ್: 40.3 ಓವರ್‌ಗಳಲ್ಲಿ 215
(ಹ್ಯಾರಿ ಬ್ರೂಕ್ 66; ಮುಜೀಬ್ ಉರ್ ರೆಹಮಾನ್ 3/51, ರಶೀದ್ ಖಾನ್ 3/37).